ಆಂಧ್ರಪ್ರದೇಶ: ಮದುವೆ ದಿನ ರಾತ್ರಿಯೇ ಆತ್ಮಹತ್ಯೆಗೆ ಶರಣಾದ ಮಹಿಳೆ
ಮದುವೆ(Marriage) ದಿನ ರಾತ್ರಿಯೇ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದ ಸೋಮಂಡೆಪಲ್ಲಿಯಲ್ಲಿ ನಡೆದಿದೆ. ಹರ್ಷಿತಾ ಎಂಬ 22 ವರ್ಷದ ವಧು ತನ್ನ ಮದುವೆಯ ಮೊದಲ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅದ್ಧೂರಿ ವಿವಾಹ ಸಮಾರಂಭ ನಡೆದ ಕೆಲವೇ ಗಂಟೆಗಳಲ್ಲಿ ಸೋಮವಾರ ಈ ಘಟನೆ ನಡೆದಿದೆ.

ಆಂಧ್ರಪ್ರದೇಶ, ಆಗಸ್ಟ್ 06: ಮದುವೆ(Marriage) ದಿನದ ರಾತ್ರಿಯೇ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದ ಸೋಮಂಡೆಪಲ್ಲಿಯಲ್ಲಿ ನಡೆದಿದೆ. ಹರ್ಷಿತಾ ಎಂಬ 22 ವರ್ಷದ ವಧು ತನ್ನ ಮದುವೆಯ ಮೊದಲ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅದ್ಧೂರಿ ವಿವಾಹ ಸಮಾರಂಭ ನಡೆದ ಕೆಲವೇ ಗಂಟೆಗಳಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಹರ್ಷಿತಾ ಕರ್ನಾಟಕದ ನಾಗೇಂದ್ರ ಎಂಬುವವರನ್ನು ಮದುವೆಯಾಗಿದ್ದರು. ದಂಪತಿ ವಧುವಿನ ಮನೆಯಲ್ಲಿದ್ದರು.ಮೊದಲ ರಾತ್ರಿಗೆ ಎಲ್ಲಾ ವ್ಯವಸ್ಥೆಗಳು ನಡೆಯುತ್ತಿದ್ದವು. ನಾಗೇಂದ್ರ ಸಿಹಿತಿಂಡಿಗಳನ್ನು ತರಲು ಹೊರಗೆ ಹೋಗಿದ್ದರು. ಅವರು ಹಿಂದಿರುಗಿದಾಗ ಕೋಣೆ ಲಾಕ್ ಆಗಿತ್ತು.
ಪದೇ ಪದೆ ಬಾಗಿಲು ಬಡಿದರೂ ಯಾರೂ ಉತ್ತರಿಸಲಿಲ್ಲ,ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಬಾಗಿಲು ಒಡೆದು ನೋಡಿದಾಗ ಹರ್ಷಿತಾ ಮೃತಪಟ್ಟಿರುವುದು ಕಂಡುಬಂದಿದೆ. ಅವರು ಆಕೆಯನ್ನು ಪೆನುಕೊಂಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಹಠಾತ್ ಮತ್ತು ಆಘಾತಕಾರಿ ಸಾವು ಎರಡೂ ಕುಟುಂಬಗಳಿಗೆ ತೀವ್ರ ದುಃಖ ತಂದಿದೆ.
ಮತ್ತಷ್ಟು ಓದಿ: Viral: ದ್ವೇಷದಿಂದ ಪ್ರೀತಿಯವರೆಗೆ: ಫ್ರೆಂಡ್‌ಶಿಪ್ ಡೇಯಂದು ವಿಚಿತ್ರ ಮ್ಯಾರೇಜ್ ಸ್ಟೋರಿ ರಿವೀಲ್ ಮಾಡಿದ ಯುವತಿ
ಯುವ ವಧುವಿನ ಈ ಕಠಿಣ ಹೆಜ್ಜೆಯ ಹಿಂದಿನ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಮದುವೆ ಸಮಾರಂಭದ ವಧುವಿನ ಫೋಟೊದಲ್ಲಿ ಯಾವ ನೋವೂ ಇದ್ದಂತೆ ಕಾಣಿಸುತ್ತಿರಲಿಲ್ಲ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ಸುತ್ತಲಿನ ಸಂದರ್ಭಗಳ ತನಿಖೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದುರಂತಕ್ಕೆ ಕಾರಣವೇನಾಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಪೊಲೀಸರು ಎರಡೂ ಕುಟುಂಬಗಳನ್ನು ಪ್ರಶ್ನಿಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




