4 ವರ್ಷದ ಬಾಲಕಿ ಮೇಲೆ ದಾಳಿ ನಡೆಸಿ ಚರ್ಮ ಸಮೇತ ಕೂದಲು ಕಿತ್ತು ಕೊಂದು ಹಾಕಿದ ಬುಲ್‌ಡಾಗ್
ಪೂಜೆಗೆ ಹೊರಟಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಬುಲ್‌ಡಾಗ್ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಬಿಹಾರದ ಮುಜಫರ್ಪುರದಲ್ಲಿ ನಡೆದಿದೆ. ನಾಯಿ(Dog)ಯು ಬಾಲಕಿ ಮೇಲೆ ದಾಳಿ ನಡೆಸಿ ಚರ್ಮ ಸಮೇತ ಕೂದಲನ್ನು ಕಿತ್ತು ಹಾಕಿದ ಪರಿಣಾಮ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಸಾಕು ನಾಯಿಯೊಂದು ಇದ್ದಕ್ಕಿದ್ದಂತೆ ಮೂವರು ಮಕ್ಕಳ ಮೇಲೆ ದಾಳಿ ಮಾಡಿತ್ತು. ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ 4 ವರ್ಷದ ಬಾಲಕಿ ಶಿವಾನಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ.

ಮುಜಫರ್ಪುರ,ನವೆಂಬರ್ 27: ಪೂಜೆಗೆ ಹೊರಟಿದ್ದ ನಾಲ್ಕು ವರ್ಷದ ಬಾಲಕಿ ಮೇಲೆ ಬುಲ್‌ಡಾಗ್ ಮಾರಣಾಂತಿಕ ದಾಳಿ ನಡೆಸಿರುವ ಘಟನೆ ಬಿಹಾರದ ಮುಜಫರ್ಪುರದಲ್ಲಿ ನಡೆದಿದೆ. ನಾಯಿ(Dog)ಯು ಬಾಲಕಿ ಮೇಲೆ ದಾಳಿ ನಡೆಸಿ ಚರ್ಮ ಸಮೇತ ಕೂದಲನ್ನು ಕಿತ್ತು ಹಾಕಿದ ಪರಿಣಾಮ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ. ಸಾಕು ನಾಯಿಯೊಂದು ಇದ್ದಕ್ಕಿದ್ದಂತೆ ಮೂವರು ಮಕ್ಕಳ ಮೇಲೆ ದಾಳಿ ಮಾಡಿತ್ತು. ಇಬ್ಬರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ 4 ವರ್ಷದ ಬಾಲಕಿ ಶಿವಾನಿಗೆ ತಪ್ಪಿಸಿಕೊಳ್ಳಲು ಅವಕಾಶವೇ ಸಿಗಲಿಲ್ಲ.
ಬುಲ್‌ಡಾಗ್ ಆಕೆಯ ಕೂದಲು ಸೇರಿದಂತೆ ನೆತ್ತಿಯನ್ನೇ ಕಿತ್ತು ಹಾಕಿತ್ತು, ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಪರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಜಮಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಬುಲ್‌ಡಾಗ್ ದಾಳಿಯಲ್ಲಿ ಗಾಯಗೊಂಡಿದ್ದ ಶಿವಾನಿ (4) ಬುಧವಾರ ಎಸ್‌ಕೆಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದರು. ನಾಯಿ ಬಾಲಕಿಯ ತಲೆಯಿಂದ ಚರ್ಮ ಮತ್ತು ಕೂದಲನ್ನು ಹರಿದು ಹಾಕಿತ್ತು.
ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾರು ಪೊಲೀಸ್ ಠಾಣಾಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ. ಬಾಲಕಿಯ ತಂದೆ ಕಮಲೇಶ್ ಸಾಹ್ನಿ ಅವರು ಮಂಗಳವಾರ ತಮ್ಮ ಮಗಳು ಶಿವಾನಿ ತನ್ನ ಕುಟುಂಬದವರೊಂದಿಗೆ ಗ್ರಾಮದ ದೇವಸ್ಥಾನದಲ್ಲಿ ಪೂಜೆಗೆ ಹೋಗುತ್ತಿದ್ದರು ಎಂದು ಹೇಳಿದ್ದಾರೆ.
ಸ್ವಲ್ಪ ದೂರದಲ್ಲಿ, ಸರಪಳಿಯಲ್ಲಿ ಕಟ್ಟಿದ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಯುವಕ ಸರಪಳಿಯನ್ನು ಕೈಬಿಟ್ಟಿದ್ದ, ನಾಯಿ ಮಕ್ಕಳ ಮೇಲೆ ದಾಳಿ ಮಾಡಿತು. ಇಬ್ಬರು ಮಕ್ಕಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು, ಆದರೆ ಶಿವಾನಿಯನ್ನು ನಾಯಿ ಕಚ್ಚಿ ಹಿಡಿದಿತ್ತು.
ಮತ್ತಷ್ಟು ಓದಿ: ಸುಪ್ರೀಂ ಛೀಮಾರಿ ಬೆನ್ನಲ್ಲೇ ಕರ್ನಾಟಕ ಅಲರ್ಟ್: ನಾಯಿ ಕಡಿತಕ್ಕೆ ಸಮಗ್ರ ಚಿಕಿತ್ಸಾ ಪ್ಲಾನ್ ರೂಪಿಸಿದ ಇಲಾಖೆ
ನಾಯಿ ಆಕೆಯ ತಲೆಯನ್ನು ಹಿಡಿದು ಕೂದಲು ಮತ್ತು ಚರ್ಮವನ್ನು ಎಳೆದಿದೆ. ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಆಕೆಯನ್ನು ಕೇಂದ್ರ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ನಂತರ SKMCH ಗೆ ಕಳುಹಿಸಿದರು. ಚಿಕಿತ್ಸೆಯ ಸಮಯದಲ್ಲಿ ಆಕೆ ಅಲ್ಲಿ ಸಾವನ್ನಪ್ಪಿದ್ದಾಳೆ.
ಕೇವಲ 15 ದಿನಗಳ ಹಿಂದೆ ಸೋನೆಪುರ ಜಾತ್ರೆಯಿಂದ ಜೋಡಿ ಬುಲ್‌ಡಾಗ್‌ಗಳನ್ನು ಖರೀದಿಸಿತ್ತು. ಶಿವಾನಿಗೆ ಇಬ್ಬರು ಸಹೋದರರಿದ್ದಾರೆ, ಆಕೆ ಕಿರಿಯವಳು. ಕುಟುಂಬವು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಬಾಲಕಿಯ ತಂದೆ ದೂರು ದಾಖಲಿಸಿದರೆ, ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Thu, 27 November 25




