Trainer Aircraft Crash In MP: ಮಧ್ಯಪ್ರದೇಶದ ಗುನಾದಲ್ಲಿ ತರಬೇತಿ ವಿಮಾನ ಪತನ: ಮಹಿಳಾ ಪೈಲೆಟ್ ಪ್ರಾಣಾಪಾಯದಿಂದ ಪಾರು
Trainer Aircraft Crash In Madhya Pradesh: ಮಧ್ಯಪ್ರದೇಶದ ಗುನಾದಲ್ಲಿ ತರಬೇತಿ ವಿಮಾನವೊಂದು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಮಹಿಳಾ ಪೈಲೆಟ್ ಗಾಯಗೊಂಡಿದ್ದಾರೆ.
ಭೋಪಾಲ್, (ಮಾರ್ಚ್ 06) : ‘ತರಬೇತಿ ವಿಮಾನವೊಂದು (Trainer Aircraft Crash) ಇಂದು(ಮಾರ್ಚ್ 06) ಮಧ್ಯಪ್ರದೇಶದ ಗುನಾದಲ್ಲಿ ಪತನವಾಗಿದೆ. ಘಟನೆಯಲ್ಲಿ ಮಹಿಳಾ ಪೈಲೆಟ್ಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೀಮಚ್‌ನಿಂದ ವಿಮಾನ ಟೇಕಾಫ್ ಆಗಿದ್ದು, ಹಾರಾಟದ ವೇಳೆ ಏಕಾಏಕಿ ಇಂಜಿನ್ನಲ್ಲಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದ್ರೆ, ನಿಯಂತ್ರಣಕ್ಕೆ ಬಾರದಿದ್ದರಿಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ.
#WATCH | Madhya Pradesh: After developing a malfunction, a trainee aircraft flying from Neemuch to Dhana made an emergency landing during which it lost control. The trainee pilot sustained injuries and has been admitted to the hospital,” says Sub Inspector, Guna, Chanchal Tiwari. https://t.co/GIXqwDeGVy pic.twitter.com/hmvO50DThy
— ANI (@ANI) March 6, 2024
ತುರ್ತು ಲ್ಯಾಂಡಿಂಗ್ ವೇಳೆ ವಿಮಾನ ಅಪಘಾತಕ್ಕೀಡಾಗುವುದು ಮತ್ತು ಟ್ರೈನಿ ಪೈಲಟ್‌ಗೆ ಗಾಯಗಳಾಗಿರುವ ಬಗ್ಗೆ ಗುನಾ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಚಂಚಲ್ ತಿವಾರಿ ಅವರು ಖಚಿತಪಡಿಸಿದ್ದಾರೆ. ಇನ್ನು ಗಾಯಗೊಂಡ ಪೈಲಟ್‌ನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Published On - 6:44 pm, Wed, 6 March 24