ದೆಹಲಿ: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದೆ ಡೆರೆಕ್ ಒಬ್ರೇನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್ತಿಗೆ ಬಂದು ಪ್ರತಿಪಕ್ಷಗಳ ಬೇಡಿಕೆಗಳನ್ನು ಆಲಿಸುವಂತೆ ಒತ್ತಾಯಿಸಿದ್ದಾರೆ., ಮುಂಗಾರು ಅಧಿವೇಶನವು ಕೊನೆಯ ವಾರದಲ್ಲಿ ನಡೆಯುತ್ತಿದ್ದು ವಿಪಕ್ಷಗಳ ಅಡಚಣೆಯಿಂದಾಗಿ ಇಲ್ಲಿಯವರೆಗೆ ಬಹಳ ಕಡಿಮೆ ಹೊತ್ತಿನ ಕಲಾಪ ನಡೆದಿದೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಶಿವಸೇನೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್, ದ್ರಾವಿಡ ಮುನ್ನೇಟ್ರ ಕಳಗಂ, ರಾಷ್ಟ್ರೀಯ ಜನತಾದಳ ಮತ್ತು ತೆಲಂಗಾಣ ರಾಷ್ಟ್ರೀಯ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರ ಮಾತುಗಳಿರುವ ಮೂರು ನಿಮಿಷಗಳ ತುಣುಕುಗಳನ್ನು ಟ್ವೀಟ್ ಮಾಡಿರುವ ಒಬ್ರೇನ್ ಮೋದಿಯವರೇ ನಮ್ಮ ಮಾತು ಆಲಿಸಿ ಎಂದು ಬರೆದಿದ್ದಾರೆ.
ಹೆಚ್ಚಿನ ಸಂಸದರು ಸಂಸತ್ತಿನ ಒಳಗೆ ಮತ್ತು ಹೊರಗೆ ವಾಕ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿದ್ದು,ಸಮಸ್ಯೆಗಳ ಕುರಿತು ಚರ್ಚೆ ಮಾಡಬೇಕು ಎಂದು ಹೇಳಿರುವ ತುಣುಕುಗಳು ಈ ವಿಡಿಯೊದಲ್ಲಿದೆ.
ಪ್ರತಿಪಕ್ಷಗಳು ಪೆಗಾಸಸ್ ಬೇಹುಗಾರಿಕೆ ವಿವಾದ, ತಿಂಗಳುಗಳ ರೈತರ ಪ್ರತಿಭಟನೆ, ಆರ್ಥಿಕತೆ ಮತ್ತು ಕೊವಿಡ್ -19 ನಿರ್ವಹಣೆ ಸೇರಿದಂತೆ ನಿರ್ದಿಷ್ಟ ವಿಷಯಗಳ ಕುರಿತು ಸಂಸತ್ತಿನ ಸದನಗಳಲ್ಲಿ ಚರ್ಚೆಗಳು ಮತ್ತು ಮುಕ್ತ ಸಂವಾದಗಳನ್ನು ಬಯಸುತ್ತಿವೆ. ಆದಾಗ್ಯೂ, ಕಲಾಪದ ಅಡಚಣೆಗಾಗಿ ಸರ್ಕಾರವು ಪ್ರತಿಪಕ್ಷಗಳನ್ನು ದೂಷಿಸುತ್ತಿದೆ ಮತ್ತು ಸಂಸತ್ತಿನಲ್ಲಿ ಯಾವುದೇ ವ್ಯವಹಾರವನ್ನು ನಡೆಸಲು ಬಿಡುತ್ತಿಲ್ಲ ಎಂದಿದ್ದಾರೆ.
ಇಲ್ಲಿಯವರೆಗೆ ಪ್ರಧಾನಿ ತನ್ನ ಹೊಸ ಕ್ಯಾಬಿನೆಟ್ ಅನ್ನು ಪರಿಚಯಿಸಿದಾಗ ಒಮ್ಮೆ ಮಾತ್ರ ಸಂಸತ್ತಿನ ಅಧಿವೇಶನಕ್ಕೆ ಹಾಜರಾಗಿದ್ದರು. ಆದರೆ, ಇಂಧನ ಬೆಲೆ ಏರಿಕೆ ಕುರಿತು ಘೋಷಣೆಗಳನ್ನು ಕೂಗಿದ ಸಂಸದರು ಅವರನ್ನು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದರು. ಸಚಿವರನ್ನು ಭೋಜನದ ಬದಲು ಚಪ್ಪಾಳೆ ಯಿಂದ ಗೌರವಿಸಲಾಗುವುದು ಎಂದು ನಿರೀಕ್ಷಿಸಿದ್ದೇನೆ ಎಂದು ಮೋದಿ ಹೇಳಿದ್ದರು.
“Mr Modi,
Come listen to us.” #Parliament @INCIndia@AITCofficial@samajwadiparty@ShivSena @trspartyonline @arivalayam @cpimspeak @RJDforIndia@NCPspeaks @AamAadmiPartyThree minute VIDEO? pic.twitter.com/rAnFetlDLH
— Derek O’Brien | ডেরেক ও’ব্রায়েন (@derekobrienmp) August 8, 2021
“ಆದರೆ ದಲಿತರು, ಮಹಿಳೆಯರು ಒಬಿಸಿ ವರ್ಗದವರು ದೇಶದ ಸಚಿವರಾಗುತ್ತಿರುವುದು ಇಲ್ಲಿ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಅನೇಕ ಜನರಿಗೆ ಸರಿಹೊಂದಿಲ್ಲ ಎಂದು ಅನಿಸುತ್ತದೆ. ಮತ್ತು ಅದಕ್ಕಾಗಿಯೇ ಅವರು ಸಚಿವರು ಪರಿಚಯವನ್ನು ಸಹ ಅನುಮತಿಸುವುದಿಲ್ಲ” ಎಂದು ಮೋದಿ ಹೇಳಿದರು. ಅದೇ ವೇಳೆ ಸೇರ್ಪಡೆಗೊಂಡ ಸಚಿವರನ್ನು “ಪರಿಚಯಿಸಲಾಗಿದೆ” ಎಂದು ಪರಿಗಣಿಸಲಾಗುತ್ತದೆ ಎಂದಿದ್ದರು ಮೋದಿ.
ಉಭಯ ಸದನಗಳಲ್ಲಿ ಮೋದಿ ಸರ್ಕಾರವು ಗದ್ದಲದ ನಡುವೆ ಹಲವಾರು ಮಸೂದೆಗಳನ್ನು ಅಂಗೀಕರಿಸುವಲ್ಲಿ ಯಶಸ್ವಿಯಾಗಿದೆ. ಈ ವಿಷಯದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ದಾಳಿಯಲ್ಲಿ ಒಬ್ರೇನ್ ಮುಂಚೂಣಿಯಲ್ಲಿದ್ದಾರೆ. ಮಸೂದೆಗಳನ್ನು ಅಂಗೀಕರಿಸುವುದರ ಬಗ್ಗೆ ನಿಯಮಿತವಾಗಿ ಟ್ವೀಟ್ ಮಾಡುತ್ತಿರುವ ಒಬ್ರೇನ್ ಅವರ ಹೇಳಿಕೆಗಳು ಪ್ರಧಾನಿ ಮತ್ತು ಇತರ ಕೇಂದ್ರ ಸಚಿವರ ಆಕ್ರೋಶಕ್ಕೂ ಕಾರಣವಾಗಿದೆ.
ಇದನ್ನೂ ಓದಿ: ಮಸೂದೆಗೆ ಅಂಗೀಕಾರ ನೀಡುತ್ತಿರುವುದೋ ಅಥವಾ ಪಾಪ್ಡಿ ಚಾಟ್ ಮಾಡುತ್ತಿರುವುದೋ?: ಕೇಂದ್ರ ಸರ್ಕಾರ ವಿರುದ್ಧ ಡೆರಿಕ್ ಒಬ್ರೇನ್ ತರಾಟೆ
(Trinamool Congress national spokesperson Derek O’Brien shares Oppositions message on Parliament logjam )