ತ್ರಿಪುರಾ: ರಾಜಕೀಯ ಕ್ಷೇತ್ರದ ಹೊರತಾಗಿಯು ತಮ್ಮ ಹಳೆಯ ಕೆಲಸದಲ್ಲಿ ಕಾರ್ಯಪ್ರವೃತ್ತಿಯಾಗಿರುವ ಅನೇಕ ಉದಾಹರಣೆಗಳು ಇದೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತ್ರಿಪುರಾ (tripura) ಮುಖ್ಯಮಂತ್ರಿ ಡಾ ಮಾಣಿಕ್ ಸಹಾ (dr manik saha) ಅವರು ಬುಧವಾರ ಹಪಾನಿಯಾದಲ್ಲಿರುವ ಆಸ್ಪತ್ರೆಯಲ್ಲಿ ತಮ್ಮ ಹಳೆಯ ವೃತ್ತಿಯನ್ನು ಅನುಸರಿಸಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನೊಬ್ಬನಿಗೆ ದಂತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ, ಏಳು ತಿಂಗಳ ಹಿಂದೆ ಸಾಂವಿಧಾನಿಕ ಹುದ್ದೆ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿಕೊಂಡ ನಂತರವೂ ತಮ್ಮ ವೃತ್ತಿಯ ಬಗ್ಗೆ ಅವರ ಬದ್ಧತೆಯನ್ನು ಇದು ಬಿಂಬಿಸಿದ್ದಾರೆ.
ಬುದ್ಧವಾರ ಬೆಳಗ್ಗೆ 9 ಗಂಟೆಗೆ ತ್ರಿಪುರಾ ಮುಖ್ಯಮಂತ್ರಿ ಡಾ ಮಾಣಿಕ್ ಸಹಾ 10 ವರ್ಷದ ಬಾಲಕನ ಓರಲ್ ಸಿಸ್ಟಿಕ್ ಲೆಸಿಯಾನ್‌ನ್ನು ಹಪಾನಿಯಾದ ತ್ರಿಪುರಾ ವೈದ್ಯಕೀಯ ಕಾಲೇಜಿನಲ್ಲಿ ಮಾಡಿದ್ದಾರೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ನಗು ಮುಖದೊಂದಿಗೆ ಬೆಳಗ್ಗೆ 9.30ರ ಸುಮಾರಿಗೆ ಆಪರೇಷನ್ ಥಿಯೇಟರ್ ನಿಂದ ಹೊರ ಬಂದಿದ್ದಾರೆ.
ಇದನ್ನು ಓದಿ:Viral News: ಸರಳವಾಗಿ ನಡೆಯಿತು ಮೋದಿ ತಾಯಿಯ ಅಂತ್ಯಸಂಸ್ಕಾರ, ವೈರಲ್ ಆಗುತ್ತಿದೆ ಈ ಫೋಸ್ಟ್
ಅವರಿಗೆ ಡಾ. ಅಮಿತ್ ಲಾಲ್ ಗೋಸ್ವಾಮಿ, ಡಾ.ಪೂಜಾ ದೇಬನಾಥ್, ಡೆಂಟಲ್ ಸರ್ಜರಿ ಮತ್ತು ಮ್ಯಾಕ್ಸಿಲ್ಲಾ ಫೇಶಿಯಲ್ ಸರ್ಜರಿ ವಿಭಾಗದ ಡಾ.ರುದ್ರ ಪ್ರಸಾದ್ ಚಕ್ರವರ್ತಿ ಅವರು ಸಹಾಯ ಮಾಡಿದರು. ಡಾ ಸ್ಮಿತಾ ಪೌಲ್, ಡಾ ಕಾಂಚನ್ ದಾಸ್, ಡಾ ಶರ್ಮಿಷ್ಠಾ ಬಾನಿಕ್ ಸೇನ್ ಮತ್ತು ಡಾ ಬೈಶಾಲಿ ಸಹಾ ಕೂಡ ವೈದ್ಯಕೀಯ ತಂಡದ ಭಾಗವಾಗಿದ್ದರು. ತಂಡದಲ್ಲಿ ಡಾ ಕಾಂಚೈ ಚೌಧರಿ, ಡಾ ಪರೋಮಿತಾ ದಾಸ್ ಮತ್ತು ಡಾ ಅದಿತಿ ಭಟ್ಟಾಚಾರ್ಜಿ ಇದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಾ.ಸಹಾ, ಸುಕಾಂತ ಘೋಷ್ ಅವರ ಪುತ್ರ ಅಕ್ಷಿತ್ ಘೋಷ್ ಅವರು ಶಸ್ತ್ರಚಿಕಿತ್ಸೆಯ ನಂತರ ಬಾಲಕ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ತುಂಬಾ ಸಮಯದ ನಂತರ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಯಾವುದೇ ತೊಂದರೆ ಆಗಲಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Thu, 12 January 23