Tripura CM Swearing-In Ceremony: ಎರಡನೇ ಬಾರಿ ತ್ರಿಪುರಾ ಸಿಎಂ ಗದ್ದುಗೆ ಏರಲಿರುವ ಮಾಣಿಕ್​ ಸಹಾ; ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ

|

Updated on: Mar 08, 2023 | 7:42 AM

ತ್ರಿಪರಾ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಇಂದು ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ನಡೆಯಲಿದ್ದು, ತ್ರಿಪುರಾದಲ್ಲಿ ಮಾಣಿಕ್ ಸಹಾ ನೇತೃತ್ವದ ಸಚಿವ ಸಂಪುಟ ಇಂದು (ಮಾ.8) ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದೆ.

Tripura CM Swearing-In Ceremony: ಎರಡನೇ ಬಾರಿ ತ್ರಿಪುರಾ ಸಿಎಂ ಗದ್ದುಗೆ ಏರಲಿರುವ ಮಾಣಿಕ್​ ಸಹಾ;  ಪದಗ್ರಹಣ ಸಮಾರಂಭದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ
ಪ್ರಧಾನಿ ನರೇಂದ್ರ ಮೋದಿ, ಅಮಿತ್​ ಶಾ
Follow us on

ತ್ರಿಪುರಾ: ಇಂದು (ಮಾ.8) ತ್ರಿಪುರಾದ ಅಗರ್ತಲಾದ ವಿವೇಕಾನಂದ ಮೈದಾನದಲ್ಲಿ ಮಾಣಿಕ್ ಸಹಾ ನೇತೃತ್ವದ ಸಚಿವ ಸಂಪುಟ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪಾಲ್ಗೋಳ್ಳಲಿದ್ದಾರೆ. ಜೊತೆಗೆ ಇದೇ ಸಂದರ್ಭದಲ್ಲಿ ದೇಶಾದ್ಯಂತದ ಜನರು ತ್ರಿಪುರಾದಲ್ಲಿ ಒಟ್ಟಿಗೆ ಹೋಳಿ ಆಡುತ್ತಾರೆ ಎಂದು ತ್ರಿಪುರಾ ರಾಜ್ಯ ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ. ಸತತ ಎರಡನೇ ಬಾರಿ ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತವನ್ನು ಪಡೆದು ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ಮಾಣಿಕ್ ಸಹಾ ಅವರು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಪ್ರಕಾರ ಸರಿ ಸುಮಾರು 39 ಶೇಕಡ ಮತಗಳ ಹಂಚಿಕೆಯೊಂದಿಗೆ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದೆ. ತಿಪ್ರಾ ಮೋತಾ ಪಕ್ಷವು 13 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) 11 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿದೆ. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್‌ಟಿ) ಒಂದು ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:Narendra Modi: ರುಪೇ ಮತ್ತು ಯುಪಿಐ ಜಾಗತಿಕವಾಗಿ ಭಾರತದ ಗುರುತು ಎಂದ ಪ್ರಧಾನಿ ಮೋದಿ

ಇನ್ನು ಈ ಸಮಾರಂಭಕ್ಕೆ ಅಸ್ಸಾಂನ ಮುಖ್ಯಮಂತ್ರಿ ಮತ್ತು ಎನ್‌ಇಡಿಎ ಮುಖ್ಯಸ್ಥ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಆಗಮಿಸುವ ನಿರೀಕ್ಷೆಯಿದೆ. ವಾಸ್ತವವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಪ್ರಮುಖ ಪಕ್ಷದ ನಾಯಕರು ಮತ್ತು ಮುಖ್ಯಮಂತ್ರಿಗಳನ್ನ ಹೊಸ ಸರ್ಕಾರದ ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗುವುದು” ಎಂದು ರೆಬಾತಿ ಹೇಳಿದ್ದರು. ಹಾಗಾಗಿ ಹೆಚ್ಚಾಗಿ ಬಿಜೆಪಿ ಅಧಿಕಾರ ಇರುವ ರಾಜ್ಯದ ನಾಯಕರು ಬರುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ

Published On - 7:34 am, Wed, 8 March 23