ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಎಲ್‌ಇಟಿ ಉಗ್ರರ ಬಂಧನ; ಎಕೆ-47 ಮ್ಯಾಗಜೀನ್‌ಗಳು, ಮದ್ದು ಗುಂಡು ವಶ
ಖುರ್ಷಿದ್ ಅಹ್ಮದ್ ಖಾನ್ ಮತ್ತು ರೆಯಾಜ್ ಅಹ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ. 15 ಸುತ್ತುಗಳ ಎರಡು ಎಕೆ-47 ಮ್ಯಾಗಜೀನ್‌ಗಳು, ನಿಷೇಧಿತ ಸಜ್ಜು ಎಲ್‌ಟಿ/ಟಿಆರ್‌ಎಫ್‌ನ 20 ಖಾಲಿ ಪೋಸ್ಟರ್‌ಗಳು ಮತ್ತು ಇತರ ವಸ್ತುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾದ ಇಬ್ಬರು ಉಗ್ರರನ್ನು ಬಂಧಿಸಿದ್ದಾರೆ. ಖುರ್ಷಿದ್ ಅಹ್ಮದ್ ಖಾನ್, ರಿಯಾಜ್ ಅಹ್ಮದ್ ಖಾನ್ ಬಂಧಿತ ಉಗ್ರರು. ಬಂಧಿತರಿಂದ ಎಕೆ-47 ಮ್ಯಾಗಜೀನ್‌ಗಳು, ಮದ್ದು ಗುಂಡು ವಶಕ್ಕೆ ಪಡೆಯಲಾಗಿದೆ.
ಪೊಲೀಸರ ಪ್ರಕಾರ, ಭಯೋತ್ಪಾದಕರು ಅಡಗಿರುವ ಬಗ್ಗೆ ಸಿಕ್ಕ ನಿರ್ದಿಷ್ಟ ಮಾಹಿತಿಯ ಮೇರೆಗೆ ಪೊಲೀಸರು 176 bn ಸಿಆರ್‌ಪಿಎಫ್ ಜೊತೆಗೆ ಮೊಂಚ್‌ಖುದ್ ಕುಂಜರ್‌ನಲ್ಲಿ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
J&K | 2 terrorist associates of LeT (TRF) namely Khurshid Ahmad Khan & Reyaz Ahmad Khan arrested in Baramulla yesterday. 2 AK-47 Magazines, 15 rounds of AK-47, 20 blank posters of banned LeT (TRF) & other incriminating materials recovered from their possession: Baramulla police pic.twitter.com/WDWiYR9vGc
— ANI (@ANI) March 7, 2023
ಇದನ್ನೂ ಓದಿ: ಭೋಪಾಲ್ – ಉಜ್ಜೈನ್ ರೈಲು ಸ್ಫೋಟ, 7 ಅಪರಾಧಿಗಳಿಗೆ ಮರಣದಂಡನೆ; ಮೋದಿ ರ‍್ಯಾಲಿಯಲ್ಲಿಯೂ ಸ್ಫೋಟಕ್ಕೆ ಸಂಚು ಹೂಡಿದ್ದ ಉಗ್ರರು
“ಶೋಧ ಕಾರ್ಯಾಚರಣೆಯ ವೇಳೆ, ಝಂಡ್ಪಾಲ್ ಕುಂಜರ್ ನಿವಾಸಿಗಳಾದ ಖುರ್ಷಿದ್ ಅಹ್ಮದ್ ಖಾನ್ ಮತ್ತು ರೆಯಾಜ್ ಅಹ್ಮದ್ ಖಾನ್ ಅವರನ್ನು ಬಂಧಿಸಲಾಗಿದೆ. 15 ಸುತ್ತುಗಳ ಎರಡು ಎಕೆ-47 ಮ್ಯಾಗಜೀನ್‌ಗಳು, ನಿಷೇಧಿತ ಸಜ್ಜು ಎಲ್‌ಟಿ/ಟಿಆರ್‌ಎಫ್‌ನ 20 ಖಾಲಿ ಪೋಸ್ಟರ್‌ಗಳು ಮತ್ತು ಇತರ ವಸ್ತುಗಳನ್ನು ಉಗ್ರರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಬಂಧಿತ ಉಗ್ರೆಉ ನಿಷೇಧಿತ ಉಗ್ರಗಾಮಿ ಸಂಘಟನೆ ಎಲ್‌ಇಟಿ (ಲಷ್ಕರ್-ಎ-ತೊಯ್ಬಾ) ಜೊತೆ ಸಹಚರರಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಬಂಧಿತರು ಕುಂಜರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಅಕ್ರಮ ಮದ್ದುಗುಂಡುಗಳನ್ನು ತಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ