Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು

| Updated By: ರಾಜೇಶ್ ದುಗ್ಗುಮನೆ

Updated on: Feb 24, 2021 | 7:27 PM

Kannada News Digest: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ ಆಯ್ದ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.

Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
ಶುಭಮನ್ ಗಿಲ್​, ರೋಹಿತ್​ ಶರ್ಮಾ
Follow us on

ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಪ್ರಚಲಿತ ವಿದ್ಯಮಾನಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್​ಸೈಟ್​​ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ ಆಯ್ದ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ:

1.ಭಾರತ-ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್: 112 ರನ್​ಗಳಿಗೆ ಇಂಗ್ಲೆಂಡ್​ ಸರ್ವಪತನ
ಟೀಂ ಇಂಡಿಯಾ ಪರ ಆರಂಭದಿಂದಲೂ ಆರ್ಭಟಿಸಿದ ಅಕ್ಷರ್​ 6, ಅಶ್ವಿನ್​ 3 ಹಾಗೂ ಇಶಾಂತ್ 1 ವಿಕೆಟ್​ ಪಡೆದು ಮಿಂಚಿದರು
Link: ಅಕ್ಷರ್​-ಅಶ್ವಿನ್​​ ಅಬ್ಬರ, 112 ರನ್​ಗಳಿಗೆ ಇಂಗ್ಲೆಂಡ್​ ಆಲ್​ಔಟ್

2. ದೊಡ್ಡ ನಟನನ್ನ ಸಣ್ಣ ಹೀರೋಯಿನ್ ಮನೆಯಲ್ಲಿ ನಿಲ್ಲಿಸಿದ್ರು.. 
ನಟ ದರ್ಶನ್​​ನನ್ನು ನಾನು ಬಹಳ ಪ್ರೀತಿಸುತ್ತೇನೆ. ಅವತ್ತು ಪೋಲಿಸರು ಅವನನ್ನ ಚಪ್ಪಲಿ ಇಲ್ಲದೆ ನಿಲ್ಲಿಸಿದ್ರಲ್ಲ, ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ? ಆಗ ಬಂದಿದ್ದು ಜಗ್ಗೇಶ್ ಅಲ್ವಾ ನೀವೇ ಹೇಳಿ.
Link:  ಆಗ ಯಾರು ಬಂದಿದ್ರು ಅವನ ಸಪೋರ್ಟ್‌ಗೆ: ಜಗ್ಗೇಶ್ ಪ್ರಶ್ನೆ

3. ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್
ಇದೇ ಮೊದಲ ಬಾರಿಗೆ ದರ್ಶನ್​ ಮೌನ​ ಮುರಿದಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಭಿಮಾನಿಗಳ ಪರವಾಗಿ ದರ್ಶನ್​ ಕ್ಷಮೆ ಯಾಚಿಸಿದ್ದಾರೆ.
Link: ಜಗ್ಗೇಶ್​ ವಿವಾದಕ್ಕೆ ತೆರೆ: ಅಭಿಮಾನಿಗಳ ಪರವಾಗಿ ಕ್ಷಮೆ ಕೇಳಿದ ನಟ ದರ್ಶನ್​

4. ಪರೀಕ್ಷೆ ಹತ್ತಿರವಿರುವಾಗ ಮಕ್ಕಳ ದೈಹಿಕ ಕ್ಷಮತೆ, ಏಕಾಗ್ರತೆ ಕಾಪಾಡಲು ಈ ಆಹಾರಗಳು ಸಹಕಾರಿ
ಸಾಧಾರಣವಾಗಿ ಹಸಿರು ಸೊಪ್ಪಿನ ತರಕಾರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಒಳಗೊಂಡಿರುತ್ತವೆ. ಇದು ರಕ್ತದಲ್ಲಿನ ಹಿಮೋಗ್ಲೋಬಿನ್​ ಪ್ರಮಾಣ ವೃದ್ಧಿಸುವ ಜೊತೆಗೆ ಮೆದುಳು ಸಕ್ರಿಯವಾಗಿರಲು ಸಹಕಾರಿಯಾಗುತ್ತದೆ.
Link: ಮಕ್ಕಳ ಏಕಾಗ್ರತೆ ಹೆಚ್ಚಿಸಲು ಈ ಜೀವನಶೈಲಿ ಸಹಕಾರಿ

5. ಮೂರು ಮದುವೆಯಾಚೆಗೂ ಹಲವರೊಂದಿಗೆ ಅಫೇರ್ ಇತ್ತು
ಫುಟ್​ಬಾಲ್ ವಿಶ್ವಕಪ್​ ಗೆದ್ದ ಈ ಆಟಗಾರನನ್ನು ಈಗಲೂ ಅದೆಷ್ಟೋ ಯುವಕರು ತಮ್ಮ ರೋಲ್ ಮಾಡೆಲ್​ ಎಂದುಕೊಳ್ಳುತ್ತಿದ್ದಾರೆ. ಫುಟ್ಬಾಲ್​ ಗ್ರೌಂಡ್​ನಲ್ಲಿ ಅದ್ಭುತ ಸಾಧನೆ ತೋರಿರುವ ಪೀಲೆಯ ವೈಯಕ್ತಿಕ ಜೀವನ ಈಗ ಸುದ್ದಿಯಲ್ಲಿದೆ.
Link: ಫುಟ್ಬಾಲ್​ ದಂತಕತೆ ಪೀಲೆ ಬಿಚ್ಚಿಟ್ಟ ಸತ್ಯ

6.ಮೋದಿ ದಂಗಾಬಾಜ್​ ಎಂದ ಮಮತಾ ಬ್ಯಾನರ್ಜಿ
ಬಂಗಾಳವನ್ನು ಬಂಗಾಳವೇ ಆಳುತ್ತದೆ. ಗುಜರಾತ್ ಬಂಗಾಳವನ್ನು ಆಳುವುದಿಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮಮತಾ ಟಾಂಗ್ ನೀಡಿದರು.
Link: ಪಶ್ಚಿಮ ಬಂಗಾಳ ಚುನಾವಣೆ

7.ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು
ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಶಿಫಾರಸು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
Link: ಪುದುಚೇರಿ ರಾಜಕಾರಣಕ್ಕೆ ಮತ್ತೊಂದು ತಿರುವು

8.ಪಿಂಕ್-ಬಾಲ್ ಪಂದ್ಯಗಳೇ ಟೆಸ್ಟ್​ ಕ್ರಿಕೆಟ್​ನ ಭವಿಷ್ಯ: ಸೌರವ್ ಗಂಗೂಲಿ
ಅನಾರೋಗ್ಯದ ನಿಮಿತ್ತ ಪಂದ್ಯ ವೀಕ್ಷಿಸಲು ಅಹಮದಾಬಾದಿಗೆ ಹೋಗಲಾಗದ ಸ್ಥಿತಿಗೆ ನಿರಾಶೆ ವ್ಯಕ್ತಪಡಿಸಿದ ಗಂಗೂಲಿ ಭಾರತ ತಂಡದ ಆಟ, ಟೆಸ್ಟ್​ ಕ್ರಿಕೆಟ್​ನ ಭವಿಷ್ಯದ ಬಗ್ಗೆ ಭಾವಲಹರಿ ಹರಿಸಿದ್ದಾರೆ.
Link: ಗೆಲ್ಲಲಿದೆ ಭಾರತ: ಗಂಗೂಲಿ ನುಡಿದ ಭವಿಷ್ಯ

9.ಜಯಲಲಿತಾ ಅಂದ್ರೆ ನನಗೆ ತುಂಬಾ ಇಷ್ಟ
ನಾನು ಬಾಲ ನಟಿಯಾಗಿದ್ದಾಗ ಜಯಲಲಿತಾ ಅವರನ್ನು ತುಂಬಾ ಇಷ್ಟ ಪಡುತ್ತಿದ್ದೆ. ಅವರ ಅಭಿಮಾನಿಯಾಗಿದ್ದೆ, ಅವರ ಜತೆಗೆ ತುಂಬಾ ಒಳ್ಳೆಯ ನೆನಪುಗಳಿವೆ ಎಂದಿದ್ದರು ಶ್ರೀದೇವಿ
Link: ಮೋಹಕತಾರೆಯ ಮನದ ಮಾತು

 

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ  www.tv9kannada.com  ನೋಡುತ್ತಿರಿ.

Published On - 7:20 pm, Wed, 24 February 21