Twitter India: ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್ರನ್ನು ನೇಮಕ ಮಾಡಿದ ಟ್ವಿಟರ್
ವಿನಯ್ ಪ್ರಕಾಶ್ ಅವರನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆಯಿದ್ದರೂ grievance-officer-in @ twitter.com ಇ-ಮೇಲ್ ಐಡಿ ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.
ದೆಹಲಿ: ಟ್ವಿಟರ್ (Twitter) ಭಾರತದ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ವಿನಯ್ ಪ್ರಕಾಶ್ರನ್ನು ಭಾನುವಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಹೊಸ ಐಟಿ ನಿಯಮ (IT Rules)ಗಳ ಪ್ರಕಾರ ಟ್ವಿಟರ್ ಭಾರತದಲ್ಲಿ ಮುಖ್ಯ ಅನುಸರಣಾ ಅಧಿಕಾರಿ, ನೋಡೆಲ್ ಅಧಿಕಾರಿ ಹಾಗೂ ಸ್ಥಾನಿಕ ಕುಂದುಕೊರತೆ ಪರಿಹಾರ ಅಧಿಕಾರಿಯನ್ನು ನೇಮಕ ಮಾಡಲೇಬೇಕಾಗಿದೆ. ಕೇವಲ ಟ್ವಿಟರ್ಗೆ ಮಾತ್ರವಲ್ಲ, ಭಾರತದಲ್ಲಿ 50 ಲಕ್ಷ ಬಳಕೆದಾರರನ್ನು ಹೊಂದಿರುವ ಯಾವುದೇ ಸಾಮಾಜಿಕ ಜಾಲತಾಣ ಈ ಮೂರು ರೀತಿಯ ಅಧಿಕಾರಿಗಳನ್ನು ಕಡ್ಡಾಯವಾಗಿ ನೇಮಕ ಮಾಡಬೇಕಾಗಿದೆ. ಆದರೆ ಈ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದ್ದು ಹೈಕೋರ್ಟ್ ಮೆಟ್ಟಿಲನ್ನೂ ಏರಿದೆ.
ಇನ್ನು ಐಟಿ ನಿಯಮ ಪಾಲನೆ ಮಾಡುವಲ್ಲಿ ಟ್ವಿಟರ್ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿದ್ದ ಗೆ ಗುರುವಾರ ಪ್ರತಿಕ್ರಿಯೆ ನೀಡಿದ್ದ ಟ್ವಿಟರ್, ನಮಗೆ ಭಾರತದಲ್ಲಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಲು ಇನ್ನೂ 8 ವಾರಗಳ ಕಾಲಾವಕಾಶ ಬೇಕು ಎಂದು ಹೇಳಿತ್ತು. ಭಾರತದಲ್ಲಿ ನಾವು ಸಂಪರ್ಕ ಕಚೇರಿ ನಿರ್ಮಾಣದ ಪ್ರಕ್ರಿಯೆ ನಡೆಸುತ್ತಿದ್ದೇವೆ. ಅದಾದ ಬಳಿಕ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿತ್ತು.
ಇದೀಗ ವಿನಯ್ ಪ್ರಕಾಶ್ ಅವರನ್ನು ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಯಾವುದೇ ಸಮಸ್ಯೆಯಿದ್ದರೂ grievance-officer-in @ twitter.com ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ. ಟ್ವಿಟರ್ ಭಾರತದಲ್ಲಿ ಅಜಮಾಸು 1.75 ಕೋಟಿ ಬಳಕೆದಾರರನ್ನು ಹೊಂದಿದೆ. ಆದರೆ ಇತ್ತೀಚೆಗೆ ಐಟಿ ನಿಯಮಗಳ ಪಾಲನೆ ವಿಚಾರದಲ್ಲಿ ಕೇಂದ್ರದೊಂದಿಗೆ ಮನಸ್ತಾಪ ಉಂಟಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಕುಂದುಕೊರತೆ ಪರಿಹಾರ ಅಧಿಕಾರಿ ನೇಮಕ ಮಾಡಲು 8 ವಾರಗಳ ಸಮಯ ಬೇಕು; ದೆಹಲಿ ಹೈಕೋರ್ಟ್ಗೆ ಟ್ವಿಟರ್ನಿಂದ ಮಾಹಿತಿ
30 ವರ್ಷ ಹಿಂದಿನ ವಿವಾದ ಈಗ ಭುಗಿಲೇಳಲು ಕಾರಣವೇನು? ಕೊಪ್ಪಳ ಕನಕದಾಸ ವೃತ್ತ ವಿವಾದದ ಹಿಂದಿದೆ ರಾಜಕೀಯ ತಂತ್ರ
Twitter Oppointed Vinay Prakash as Resident Grievance Officer In India