ಐಎಎಫ್ ನೆಲೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಜಮ್ಮುವಿನ ಕಲುಚಕ್ ಸೇನಾ ಶಿಬಿರದ ಮೇಲೆ ಮತ್ತೆರಡು ಡ್ರೋನ್ ಪತ್ತೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 28, 2021 | 4:01 PM

Jammu: ಸೇನಾ ಸಿಬ್ಬಂದಿ ಡ್ರೋನ್‌ಗಳ ಮೇಲೆ 20-25 ಸುತ್ತು ಗುಂಡು ಹಾರಿಸಿದರು. ಎರಡು ಡ್ರೋನ್‌ಗಳನ್ನು ಪತ್ತೆ ಹಚ್ಚಲು ಕಲುಚಕ್ ಮಿಲಿಟರಿ ಕೇಂದ್ರದೊಳಗೆ ದೊಡ್ಡ ಪ್ರಮಾಣದ ಶೋಧ ನಡೆಯುತ್ತಿದೆ. ಜಮ್ಮು ಪ್ರದೇಶದಲ್ಲಿ ವಿಶೇಷವಾಗಿ ಸೇನಾ ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ.

ಐಎಎಫ್ ನೆಲೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಜಮ್ಮುವಿನ ಕಲುಚಕ್ ಸೇನಾ ಶಿಬಿರದ ಮೇಲೆ ಮತ್ತೆರಡು ಡ್ರೋನ್ ಪತ್ತೆ
ಭಾರತೀಯಸೇನೆ (ಸಂಗ್ರಹ ಚಿತ್ರ)
Follow us on

ಜಮ್ಮು: ಜೂನ್ 27-28ರ ಮಧ್ಯರಾತ್ರಿಯಲ್ಲಿ ಜಮ್ಮುವಿನ ಕಲುಚಕ್ ಸೇನಾ ನೆಲೆಯಲ್ಲಿ ಎರಡು ಡ್ರೋನ್‌ಗಳನ್ನು ಗುರುತಿಸಲಾಗಿದೆ. ಒಂದು ಮಾನವರಹಿತ ವೈಮಾನಿಕ ವಾಹನ ((UAV) ರಾತ್ರಿ 11: 45 ಕ್ಕೆ ಸೇನಾ ನೆಲೆಯೊಳಗೆ ಮತ್ತು ಇನ್ನೊಂದು ಬೆಳಿಗ್ಗೆ 2:40 ಕ್ಕೆ ಹಾರಾಟ ನಡೆಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅವುಗಳನ್ನು ನಿಷ್ಕ್ರಿಯಗೊಳಿಸಲು ಯೋಧರು ಡ್ರೋನ್‌ಗಳ ಮೇಲೆ ಗುಂಡು ಹಾರಿಸಿದರು.

ಜಮ್ಮು ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲುಚಕ್-ಪುರ್ಮಂಡಲ್ ರಸ್ತೆಯ ಬದಿಯಲ್ಲಿ ಎರಡು ಕ್ವಾಡ್‌ಕೋಪ್ಟರ್‌ಗಳು ಪತ್ತೆಯಾಗಿದೆ. ಕಲುಚೆಕ್ ಸೇನಾ ನೆಲೆ ಬಳಿ ಶಂಕಿತ ವಸ್ತುಗಳು ಹಾರುತ್ತಿವೆ ಎಂದು ಪೊಲೀಸರು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಸೇನಾ ಸಿಬ್ಬಂದಿ ಡ್ರೋನ್‌ಗಳ ಮೇಲೆ 20-25 ಸುತ್ತು ಗುಂಡು ಹಾರಿಸಿದರು. ಎರಡು ಡ್ರೋನ್‌ಗಳನ್ನು ಪತ್ತೆ ಹಚ್ಚಲು ಕಲುಚಕ್ ಮಿಲಿಟರಿ ಕೇಂದ್ರದೊಳಗೆ ದೊಡ್ಡ ಪ್ರಮಾಣದ ಶೋಧ ನಡೆಯುತ್ತಿದೆ.
ಜಮ್ಮು ಪ್ರದೇಶದಲ್ಲಿ ವಿಶೇಷವಾಗಿ ಸೇನಾ ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ನೀಡಲಾಗಿದೆ.

ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಈ ರೀತಿಯ ಮೊದಲ ದಾಳಿಯಲ್ಲಿ ಜಮ್ಮು ವಿಮಾನ ನಿಲ್ದಾಣದ ಹೆಚ್ಚಿನ ಭದ್ರತಾ ತಾಂತ್ರಿಕ ಪ್ರದೇಶಕ್ಕೆ ಸ್ಫೋಟಕಗಳನ್ನು ಬಿಡಲು ಡ್ರೋನ್‌ಗಳನ್ನು ಬಳಸಲಾಯಿತು. ಭಾನುವಾರ ಮುಂಜಾನೆ ಎರಡು ಸ್ಫೋಟಗಳು ನಡೆದವ ಒಂದು ಕಟ್ಟಡದ ಮೇಲ್ಚಾವಣಿಯಲ್ಲಿ ರಂಧ್ರವನ್ನು ಸೀಳಿಸಿದರೆ, ಇನ್ನೊಂದು ಸ್ಫೋಟವು ತೆರೆದ ಜಾಗದಲ್ಲಾಗಿತ್ತು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಯೋತ್ಪಾದಕ ದಾಳಿಯ ಬಗ್ಗೆ ತನಿಖೆ ನಡೆಸುತ್ತಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಅಧಿಕೃತ ಭೇಟಿಯಲ್ಲಿ ಬಾಂಗ್ಲಾದೇಶದಲ್ಲಿರುವ ಐಎಎಫ್ ಮುಖ್ಯ ವಾಯು ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ, ಜಮ್ಮುವಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ.

ಇದನ್ನೂ ಓದಿ:  ಜಮ್ಮುವಿನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಇಂದು 6ಕೆಜಿ ತೂಕದ ಐಇಡಿ ಪತ್ತೆ; ದೊಡ್ಡದೊಂದು ಉಗ್ರದಾಳಿ ತಪ್ಪಿತು ಎಂದ ಡಿಜಿಪಿ

(Two drones were spotted at Kaluchak military station in Jammu Alert Army jawans fired at the drones)