ಜಮ್ಮುವಿನಲ್ಲಿ ಅವಳಿ ಸ್ಫೋಟದ ಬೆನ್ನಲ್ಲೇ ಇಂದು 6ಕೆಜಿ ತೂಕದ ಐಇಡಿ ಪತ್ತೆ; ದೊಡ್ಡದೊಂದು ಉಗ್ರದಾಳಿ ತಪ್ಪಿತು ಎಂದ ಡಿಜಿಪಿ
ಭಾರತೀಯ ವಾಯುಪಡೆ ಟ್ವೀಟ್ ಮಾಡಿದ್ದು, ಜಮ್ಮುವಿನ ಏರ್ಫೋರ್ಸ್ ಸ್ಟೇಶನ್ನಲ್ಲಿ ನಿನ್ನೆ ತಡರಾತ್ರಿ ಎರಡು ಕಡಿಮೆ ಸಾಂದ್ರತೆಯುಳ್ಳ ಸ್ಫೋಟಕಗಳು ಸ್ಫೋಟಗೊಂಡಿವೆ. ನಮ್ಮ ಯಾವುದೇ ಸಾಧನ, ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ತಿಳಿಸಿದೆ.
ಜಮ್ಮು ಏರ್ಪೋರ್ಟ್ನಲ್ಲಿರುವ ಏರ್ಫೋರ್ಸ್ನಲ್ಲಿ ನಿನ್ನೆ ತಡರಾತ್ರಿ ಕೇವಲ ಐದೇ ನಿಮಿಷಗಳ ಅಂತರದಲ್ಲಿ ಅವಳಿ ಸ್ಫೋಟ ನಡೆದ ಬೆನ್ನಲ್ಲೇ, ಇಂದು ಮಧ್ಯಾಹ್ನ ಸುಮಾರು 5-6 ಕೆಜಿಯಷ್ಟು ಭಾರದ ಐಇಡಿ (ಸುಧಾರಿತ ಸ್ಫೋಟಕ ಸಾಧನ)ಯನ್ನು ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಉಗ್ರರ ಕೃತ್ಯ. ಐಇಡಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳುವ ಮೂಲಕ ದೊಡ್ಡ ಮಟ್ಟದ ದಾಳಿಯನ್ನು ತಪ್ಪಿಸಿದಂತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ, ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದವನೊಬ್ಬನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.
ನಿನ್ನೆ ತಡರಾತ್ರಿ ಸಂಭವಿಸಿದ ಅವಳಿ ಸ್ಫೋಟದ ಸಂಬಂಧ ಈಗಾಗಲೇ ತನಿಖೆ ಶುರುವಾಗಿದೆ. ಒಂದು ಏರ್ಫೋರ್ಸ್ ಸ್ಟೇಶನ್ನ ಮೇಲ್ಛಾವಣಿಯಿಂದ ಸ್ಫೋಟಗೊಂಡಿದ್ದು, ಇನ್ನೊಂದು ನೆಲದಿಂದ ಸ್ಫೋಟವಾಗಿದೆ. ಈ ಸ್ಫೋಟಕ್ಕಾಗಿ ದುಷ್ಕರ್ಮಿಗಳು ಡ್ರೋನ್ ಬಳಸಿದ್ದಾಗಿ ಸೇನಾ ಮೂಲಗಳು ತಿಳಿಸಿವೆ. ಇನ್ನು ಐಇಡಿ ವಶಪಡಿಸಿಕೊಂಡಿದ್ದರಿಂದ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ. ನಾವು ಶೀಘ್ರವೇ ಇದಕ್ಕೆ ಸಂಬಂಧಪಟ್ಟವರನ್ನು ಬಂಧಿಸುತ್ತೇವೆ ಎಂದು ಜಮ್ಮು-ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಭಾರತೀಯ ವಾಯುಪಡೆ ಟ್ವೀಟ್ ಮಾಡಿದ್ದು, ಜಮ್ಮುವಿನ ಏರ್ಫೋರ್ಸ್ ಸ್ಟೇಶನ್ನಲ್ಲಿ ನಿನ್ನೆ ತಡರಾತ್ರಿ ಎರಡು ಕಡಿಮೆ ಸಾಂದ್ರತೆಯುಳ್ಳ ಸ್ಫೋಟಕಗಳು ಸ್ಫೋಟಗೊಂಡಿವೆ. ನಮ್ಮ ಯಾವುದೇ ಸಾಧನ, ಉಪಕರಣಗಳಿಗೆ ಹಾನಿಯಾಗಿಲ್ಲ. ಯಾರದ್ದೂ ಪ್ರಾಣ ಹಾನಿಯಾಗಿಲ್ಲ. ತನಿಖೆ ಚುರುಕುಗೊಂಡಿದೆ ಎಂದು ಹೇಳಿದೆ. ಡ್ರೋನ್ನಿಂದ ಬಿದ್ದು, ಸ್ಫೋಟಗೊಂಡಿದ್ದೂ ಸಹ ಐಇಡಿಯೇ ಆಗಿದ್ದು, ಅದನ್ನು ಹೆಲಿಪ್ಯಾಡ್ನಲ್ಲಿ ನಿಂತ ಏರ್ಕ್ರಾಫ್ಟ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಅದರ ಹೊರತಾಗಿ ಈಗ ಮತ್ತೆ 5-6 ಕೆಜಿ ತೂಕದ ಐಇಡಿಯನ್ನು ವಶಪಡಿಸಿಕೊಳ್ಳಲಾಗಿದೆ.
Two low intensity explosions were reported early Sunday morning in the technical area of Jammu Air Force Station. One caused minor damage to the roof of a building while the other exploded in an open area.
— Indian Air Force (@IAF_MCC) June 27, 2021
ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದವರಿಗೆ ನೊಟೀಸ್: ಕೋಳಿವಾಡ
(Major terrorist attack averted in Jammu said Jammu Kashmir DGP Dilbagh Singh)