ಜಮ್ಮುವಿನ ಏರ್ ​ಫೋರ್ಸ್ ಸ್ಟೇಶನ್​ ಒಳಗೆ ಎರಡು ಬಾರಿ ಸ್ಫೋಟ; ಬಾಂಬ್​ ನಿಷ್ಕ್ರಿಯ ದಳದಿಂದ ಪರಿಶೀಲನೆ

| Updated By: Lakshmi Hegde

Updated on: Jun 27, 2021 | 9:04 AM

ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ತೆರಳಿದ್ದು, ಪರಿಶೀಲನೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಭದ್ರತೆಯಿದ್ದರೂ ಸ್ಫೋಟ ಹೇಗಾಯಿತು ಎಂಬ ಬಗ್ಗೆ ತನಿಖೆಯೂ ಅದಾಗಲೇ ಶುರುವಾಗಿದೆ.

ಜಮ್ಮುವಿನ ಏರ್ ​ಫೋರ್ಸ್ ಸ್ಟೇಶನ್​ ಒಳಗೆ ಎರಡು ಬಾರಿ ಸ್ಫೋಟ; ಬಾಂಬ್​ ನಿಷ್ಕ್ರಿಯ ದಳದಿಂದ ಪರಿಶೀಲನೆ
ಜಮ್ಮು ಏರ್​ಫೋರ್ಸ್ ಪ್ರದೇಶ
Follow us on

ಜಮ್ಮುವಿನ ವಾಯುನೆಲೆ ಸ್ಟೇಶನ್​​ ಒಳಗೆ, 5 ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದೆ. ಜೂ.26-27ರ ಮಧ್ಯರಾತ್ರಿ ಹೊತ್ತಿಗೆ ಈ ವಾಯುನೆಲೆ ಉನ್ನತ ಭದ್ರತಾ ಪ್ರದೇಶವಾಗಿದ್ದು, ಏರ್​​ಪೋರ್ಟ್​ ಬಳಿಯೇ ಇದೆ. ಸ್ಫೋಟದಿಂದ ಇಬ್ಬರು ಗಾಯಗೊಂಡಿದ್ದು, ಯಾರದ್ದೂ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ತಡರಾತ್ರಿ 1.50 ಗಂಟೆ ಹೊತ್ತಿಗೆ ಮೊದಲು ಕಟ್ಟಡದ ಮೇಲ್ಭಾಗದಲ್ಲಿ ಸ್ಫೋಟಗೊಂಡಿತು. ಅದಾದ 5 ನಿಮಿಷಗಳಲ್ಲಿ ನೆಲಭಾಗದಲ್ಲಿ ಮತ್ತೇ ಅದೇ ತರಹದ ಸ್ಫೋಟ ಉಂಟಾಗಿದೆ.

ಸ್ಥಳಕ್ಕೆ ಬಾಂಬ್​ ನಿಷ್ಕ್ರಿಯ ದಳ ತೆರಳಿದ್ದು, ಪರಿಶೀಲನೆ ನಡೆಯುತ್ತಿದೆ. ಇಷ್ಟು ಪ್ರಮಾಣದ ಭದ್ರತೆಯಿದ್ದರೂ ಸ್ಫೋಟ ಹೇಗಾಯಿತು ಎಂಬ ಬಗ್ಗೆ ತನಿಖೆಯೂ ಅದಾಗಲೇ ಶುರುವಾಗಿದೆ. ಏರ್​ಫೋರ್ಸ್​ ಸ್ಟೇಶನ್​​ನಲ್ಲಿದ್ದ ಯಾವುದೇ ಉಪಕರಣಗಳಿಗೂ ಹಾನಿಯುಂಟಾಗಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಭದ್ರತೆಗೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಗೃಹ ಸಚಿವ ಅಮಿತ್​ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಇತರ ಗಣ್ಯರು ಸಭೆ ನಡೆಸಿದ್ದಾರೆ. ಮುಂದಿನ ವರ್ಷ ಅಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡುತ್ತಿದೆ.

ಇದನ್ನೂ ಓದಿ:Bigg Boss Kannada: ದಿವ್ಯಾಗಾಗಿ ಬಿಗ್​ ಬಾಸ್​ ಬಿಟ್ಟುಕೊಡ್ತೀನಿ ಎಂದ ಅರವಿಂದ್​; ಹಾಗಾದ್ರೆ ದಿವ್ಯಾ ಆಯ್ಕೆ ಏನು?

Published On - 9:03 am, Sun, 27 June 21