Supreme Court: ಸುಪ್ರೀಂ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳು
ಸುಪ್ರೀಂ ಕೋರ್ಟ್‌ನ ನಾಯ್ಯಮೂರ್ತಿಗಳಾಗಿ ನ್ಯಾ. ಉಜ್ಜಲ್ ಭುಯಾನ್ ಮತ್ತು ನ್ಯಾ. ಎಸ್ ವೆಂಕಟನಾರಾಯಣ ಭಟ್ಟಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ದೆಹಲಿ, ಜುಲೈ 14: ಇಂದು (ಜು.14) ಸುಪ್ರೀಂ ಕೋರ್ಟ್‌ನ ನಾಯ್ಯಮೂರ್ತಿಗಳಾಗಿ ನ್ಯಾ. ಉಜ್ಜಲ್ ಭುಯಾನ್ (Justice Ujjal Bhuyan) ಮತ್ತು ನ್ಯಾ. ಎಸ್ ವೆಂಕಟನಾರಾಯಣ ಭಟ್ಟಿ (Justice SV Bhatti) ಅವರು ಪ್ರಮಾಣ ವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಇಬ್ಬರಿಗೂ ಪ್ರಮಾಣ ವಚನ ಬೋಧಿಸಿದರು. ಇದೀಗ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಬಲ 32ಕ್ಕೆ ಏರಿಕೆಯಾಗಿದೆ, ಇನ್ನೂ ಎರಡು ನೇಮಕಾತಿಗಳು ಬಾಕಿ ಇದೆ ಎಂದು ಹೇಳಲಾಗಿದೆ. ಜುಲೈ 5 ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ಮಾಡಿದ ಶಿಫಾರಸಿನ ಪ್ರಕಾರ ಈ ಇಬ್ಬರು ನ್ಯಾಯಮೂರ್ತಿಗಳನ್ನು ಜುಲೈ 12 ರಂದು ಕೇಂದ್ರ ಸರ್ಕಾರವು ನೇಮಕಾತಿಯನ್ನು ಅಂಗೀಕರಿಸಿತ್ತು, ಇದೀಗ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಪ್ರಮಾಣ ವಚನ ಬೋಧಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಆಗಿರುವ ಭುಯಾನ್ (ಹಿಂದೆ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಅವರು ಆಗಸ್ಟ್ 2, 2029 ರವರೆಗೆ ಮುಂದುವರಿಯಲಿದ್ದು ಮತ್ತು ನ್ಯಾಯಮೂರ್ತಿ ಭಟ್ಟಿ (ಹಿಂದೆ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಮೇ 6, 2027 ರವರೆಗೆ ಅವಧಿಯ ವರೆಗೆ ಮುಂದುವರಿಯಲಿದ್ದಾರೆ.
ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು 17 ಅಕ್ಟೋಬರ್ 2011ರಂದು ಗೌಹಾಟಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಪ್ರಸ್ತುತ ಅವರ ಸಹವರ್ತಿ ಹೈಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದು ಮತ್ತು 28 ಜೂನ್ 2022 ರಿಂದ ತೆಲಂಗಾಣ ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Supreme Court Judges: ಸುಪ್ರೀಂಕೋರ್ಟ್ಗೆ ಕರ್ನಾಟಕದವರು ಸೇರಿ ಇಬ್ಬರು ನ್ಯಾಯಮೂರ್ತಿಗಳ ನೇಮಕಕ್ಕೆ ಸರ್ಕಾರ ಅಧಿಸೂಚನೆ
ನ್ಯಾಯಮೂರ್ತಿ ಎಸ್‌ವಿ ಭಟ್ಟಿ ಅವರು 12 ಏಪ್ರಿಲ್ 2013 ರಂದು ಆಂಧ್ರ ಪ್ರದೇಶದ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು, ನಂತರ ಅವರನ್ನು ಮಾರ್ಚ್ 2019ರಲ್ಲಿ ಕೇರಳದ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು ಮತ್ತು 01 ಜೂನ್ 2023 ರಿಂದ ಅದರ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಇದೀಗ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ