Chandrayaan 3 Launch Live Video: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಉಡ್ಡಯನ ಲೈವ್ ವೀಡಿಯೊ ಇಲ್ಲಿದೆ
ಚಂದ್ರಯಾನ 3 ಲಾಂಚ್ ನೇರಪ್ರಸಾರ: ಚಂದ್ರ ಶಿಖರಿಗೆ ಇಸ್ರೋ ಸವಾರಿ ನಡೆಸಿದ್ದು, ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಉಡಾವಣೆಯ ಲೈವ್ ವೀಡಿಯೊ ಇಲ್ಲಿದೆ ನೋಡಿ
ದೆಹಲಿ, ಜುಲೈ 14: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ -3 ಇದೀಗ ಉಡಾವಣೆಗೊಂಡಿದೆ. ಈ ಕ್ಷಣಕ್ಕಾಗಿ ಕೋಟ್ಯಾಂತರ ಭಾರತೀಯರ ಕಾಯುತ್ತಿದ್ದರು, ಇದೀಗ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳಿಸಿದೆ. ಭಾರತದ ವಿಜ್ಞಾನ ಲೋಕದ ಸಾಧನೆಗೆ ಇದು ಮಹತ್ವದ ಸಾಕ್ಷಿಯಾಗಲಿದೆ. ಚಂದ್ರ ಕಕ್ಷೆಯತ್ತ ಚಂದ್ರಯಾನ-3 ತನ್ನ ಪಯಣ ಶುರು ಮಾಡಿದೆ. ಈ ಮಿಷನ್ ಚಂದ್ರಲೋಕದಲ್ಲಿ ಅನೇಕ ವಿಚಾರಗಳ ಬಗ್ಗೆ ಸಂಶೋಧನೆ ಮತ್ತು ಅಲ್ಲಿ ಆಗು-ಹೋಗು ಚಟುವಟಿಕೆಗಳ ಬಗ್ಗೆ ಅಧ್ಯಯನ ಮಾಡಲಿದೆ. ಇದು ಭಾರತದ ಮೂರನೇ ಪ್ರಯತ್ನವಾಗಿದ್ದು, ಚಂದ್ರನತ್ತ ತಲುಪು ಮಹತ್ವದ ಭರವಸೆಯನ್ನು ಭಾರತ ಹೊಂದಿದೆ. LVM3 ರಾಕೆಟ್ ಉಡಾವಣೆಯಾದ ಸರಿಸುಮಾರು 16 ನಿಮಿಷಗಳ ನಂತರ, ಪ್ರೊಪಲ್ಷನ್ ಮಾಡ್ಯೂಲ್ ಮುಖ್ಯ ರಾಕೆಟ್‌ನಿಂದ ಪ್ರತ್ಯೇಕಗೊಳ್ಳುತ್ತದೆ. ನಂತರ ಅದರಿಂದ ಅಂಡಾಕಾರದ ಚಕ್ರ ಹೊರಗೆ ಬಂದು, ಭೂಮಿಯ ಸುತ್ತ 5 ರಿಂದ 6 ಬಾರಿ ಸುತ್ತುತ್ತದೆ. ಭೂಮಿಯಿಂದ 36,500 ಕಿಮೀ ದೂರದಿಂದ ಸಾಗಿ, ಕ್ರಮೇಣ ಚಂದ್ರನ ಕಕ್ಷೆಯತ್ತ ಬರುತ್ತದೆ.
Published On - 2:30 pm, Fri, 14 July 23




