ಶೋಪಿಯಾನ್: ಎಲ್ಇಟಿಯ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿದ ಭದ್ರತಾ ಪಡೆ
ಭಾರತ-ಪಾಕಿಸ್ತಾನ(India-Pakistan) ಉದ್ವಿಗ್ನತೆ ನಡುವೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನನ್ನು ಭದ್ರತಾ ಪಡೆ ಎಲ್ಇಟಿಯ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿವೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಶೋಪಿಯಾನ್‌ನಲ್ಲಿ ಬಂಧಿಸಲಾದ ಈ ಲಷ್ಕರ್ ಭಯೋತ್ಪಾದಕರ ಹೆಸರುಗಳು ಇರ್ಫಾನ್ ಮತ್ತು ಉಜೈರ್.ಭದ್ರತಾ ಪಡೆಗಳು ಭಯೋತ್ಪಾದಕರಿಂದ 2 ಎಕೆ -56, 4 ಮ್ಯಾಗಜೀನ್‌ಗಳು, 102 ಲೈವ್ ಕಾರ್ಟ್ರಿಡ್ಜ್‌ಗಳು, 2 ಹ್ಯಾಂಡ್ ಗ್ರೆನೇಡ್‌ಗಳು, ನಗದು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿವೆ.

ಶೋಪಿಯಾನ್, ಮೇ 29: ಭಾರತ-ಪಾಕಿಸ್ತಾನ(India-Pakistan) ಉದ್ವಿಗ್ನತೆ ನಡುವೆ, ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನನ್ನು ಭದ್ರತಾ ಪಡೆ ಎಲ್ಇಟಿಯ ಇಬ್ಬರು ಹೈಬ್ರಿಡ್ ಉಗ್ರರನ್ನು ಬಂಧಿಸಿವೆ. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಶೋಪಿಯಾನ್‌ನಲ್ಲಿ ಬಂಧಿಸಲಾದ ಈ ಲಷ್ಕರ್ ಭಯೋತ್ಪಾದಕರ ಹೆಸರುಗಳು ಇರ್ಫಾನ್ ಮತ್ತು ಉಜೈರ್.
ಭದ್ರತಾ ಪಡೆಗಳು ಭಯೋತ್ಪಾದಕರಿಂದ 2 ಎಕೆ -56, 4 ಮ್ಯಾಗಜೀನ್‌ಗಳು, 102 ಲೈವ್ ಕಾರ್ಟ್ರಿಡ್ಜ್‌ಗಳು, 2 ಹ್ಯಾಂಡ್ ಗ್ರೆನೇಡ್‌ಗಳು, ನಗದು, ಮೊಬೈಲ್ ಫೋನ್‌ಗಳು, ಸ್ಮಾರ್ಟ್ ವಾಚ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಂಡಿವೆ.
ಭಯೋತ್ಪಾದಕರನ್ನು ಹಿಡಿದಿದ್ದು ಹೇಗೆ? ಈ ಎಲ್‌ಇಟಿ ಭಯೋತ್ಪಾದಕರನ್ನು ಬಂಧಿಸಲು, 44RR ಮತ್ತು 178 ಬಿಎನ್ ಸಿಆರ್‌ಪಿಎಫ್‌ನ ನಿರ್ದಿಷ್ಟ ಮಾಹಿತಿಯ ನಂತರ ಎಸ್‌ಒಜಿ ಶೋಪಿಯಾನ್ ಬಸ್ಕುಚನ್‌ನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.ಭಯೋತ್ಪಾದಕರನ್ನು ಸೆರೆಹಿಡಿಯುವ ಮೊದಲು ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿಯಲಾಗಿತ್ತು. ಹತ್ತಿರದ ತೋಟದಲ್ಲಿ ಭಯೋತ್ಪಾದಕರ ಚಲನವಲನ ಕಂಡುಬಂದಿತ್ತು.
ಭದ್ರತಾ ಪಡೆಗಳ ತ್ವರಿತ ಕ್ರಮದಿಂದಾಗಿ, ಇಬ್ಬರು ಲಷ್ಕರ್ ಹೈಬ್ರಿಡ್ ಭಯೋತ್ಪಾದಕರು – ಇರ್ಫಾನ್ ಬಶೀರ್ ಮತ್ತು ಉಜೈರ್ ಸಲಾಮ್ – ಶರಣಾದರು, ಇದರಿಂದಾಗಿ ಸಂಭವನೀಯ ಎನ್ಕೌಂಟರ್ ತಪ್ಪಿತು.ಸಂಬಂಧಿತ ವಿಭಾಗಗಳ ಅಡಿಯಲ್ಲಿ ಭಯೋತ್ಪಾದಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಂತರ ನೀಡಲಾಗುವುದು.
ಮತ್ತಷ್ಟು ಓದಿ: Pahalgam Terror Attack: ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ, 13 ಕನ್ನಡಿಗರ ಜೀವ ಉಳಿಸಿದ ಗುಡ್ಡ!
ಹೈಬ್ರಿಡ್ ಉಗ್ರರೆಂದರೆ ಯಾರು? ಹೈಬ್ರಿಡ್ ಉಗ್ರರೆಂದರೆ ಸದಾ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದಿಲ್ಲ. ಸಾಮಾನ್ಯ ಜನರಂತೆ ಸಾಮಾನ್ಯ ಜೀವನವನ್ನೇ ನಡೆಸುತ್ತಿರುತ್ತಾರೆ. ತಮ್ಮ ಸಂಘಟನೆಗಳು ಕರೆದಾಗ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಮತ್ತೆ ತಮ್ಮ ಜೀವನಕ್ಕೆ ಮರಳುತ್ತಾರೆ. ಹಾಗೆಯೇ ಅವರು ಶಸ್ತ್ರಾಸ್ತ್ರಗಳನ್ನು ಹಿಡಿದು ನೇರವಾಗಿ ದಾಳಿ ಮಾಡುವ ಬದಲು ಬೇರೆ ಬೇರೆ ತಂತ್ರಗಳನ್ನು ಕೂಡ ಬಳಸುತ್ತಾರೆ.
ಇವರನ್ನು ಗುರುತಿಸುವುದು ತುಂಬಾ ಕಷ್ಟ. ಅವರು ಜನರಿಂದ ಅಡಗಿಕೊಂಡಿರುವುದಿಲ್ಲ, ಕಚೇರಿ, ವಿದ್ಯಾರ್ಥಿಯಾಗಿ, ವ್ಯಾಪಾರಿಯಾಗಿ ಸಾಮಾನ್ಯರಂತೆಯೇ ಜೀವನ ಸಾಗಿಸುತ್ತಿರುತ್ತಾರೆ. ದಾಳಿ ನಡೆಸುವ ವೇಳೆ ಮಾತ್ರ ಅವರ ಉಗ್ರ ರೂಪ ಗೋಚರಿಸುತ್ತದೆ. ಡಾರ್ಕ್ ವೆಬ್, ಎನ್‌ಕ್ರಿಪ್ಟೆಡ್ ಮೆಸೆಜಿಂಗ್ ಆ್ಯಪ್‌ಗಳು, ಡ್ರೋನ್‌ಗಳು ಮತ್ತು ಇಂಟರ್‌ನೆಟ್ ಪ್ರಚಾರದ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಾರೆ.
ಜಮ್ಮು-ಕಾಶ್ಮೀರ: ಬುಡ್ಗಾಮ್ನ ಚೆಕ್ಪಾಯಿಂಟ್ನಲ್ಲಿ ಇಬ್ಬರು ಉಗ್ರರ ಸಹಚರರ ಬಂಧನ ಜಮ್ಮು ಮತ್ತು ಕಾಶ್ಮೀರ(Jammu and Kashmir)ದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದ ನಾಕಾ-ತಪಾಸಣಾ ಕಾರ್ಯಾಚರಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕ ಸಹಚರರನ್ನು ಬಂಧಿಸಿದ್ದು, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಗ್ರೆನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಡ್ಗಾಮ್ನ ಮಾಗಮ್‌ನ ಬುಚಿಪೋರಾ ಕವೂಸಾ ಅರೇಸ್‌ನಲ್ಲಿ ನಾಕಾ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಒಂದು ಪಿಸ್ತೂಲ್, ಒಂದು ಗ್ರೆನೇಡ್ ಮತ್ತು 15 ಸಜೀವ ಗುಂಡುಗಳು ಸೇರಿದಂತೆ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಕೇಂದ್ರಾಡಳಿತ ಪ್ರದೇಶದ ಭದ್ರತಾ ಪಡೆಗಳು ಭದ್ರತೆಯನ್ನು ಹೆಚ್ಚಿಸಿವೆ ಮತ್ತು ಪ್ರದೇಶದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




