ಕುಲ್ಗಾಮ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಾರತೀಯ ಸೈನಿಕರು ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಆ.8ರ ರಾತ್ರಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂದು ಸೇನೆ ತಿಳಿಸಿದೆ. ಇದಕ್ಕೂ ಮುನ್ನ ಭಾರತೀಯ ಸೇನೆ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇನ್ನು ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್‌ನಲ್ಲಿ (kulgam) ನೆನ್ನೆ ರಾತ್ರಿ (ಆ.8)ರಂದು ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂದು ಸೇನೆ ತಿಳಿಸಿದೆ. ಇದಕ್ಕೂ ಮೊದಲು ನಡೆದ ಗುಂಡಿನ ದಾಳಿಯಲ್ಲಿ ಮೂವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಶುಕ್ರವಾರ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ವೀರ ಯೋಧರಾದ ಕೆ ಪ್ರೀತ್ಪಾಲ್ ಸಿಂಗ್ ಮತ್ತು ರ್ಮಿಂದರ್ ಸಿಂಗ್ ಅವರ ಈ ತ್ಯಾಗಕ್ಕೆ ಅವರನ್ನು ಚಿನಾರ್ ಕಾರ್ಪ್ಸ್ ಗೌರವಿಸುತ್ತದೆ. ಧೈರ್ಯ ಮತ್ತು ಸಮರ್ಪಣೆ ನಮಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಭಾರತೀಯ ಸೇನೆ ಎಕ್ಸ್ ಮೂಲಕ ಸಂತಾಪ ಸೂಚಿಸಿದೆ.
ಇನ್ನು ಭಯೋತ್ಪಾದಕರನ್ನು ಪತ್ತೆ ಮಾಡಿ, ಮಟ್ಟ ಹಾಕುವ ಕಾರ್ಯಚರಣೆ ಮುಂದುವರಿದಿದೆ ಎಂದು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ನಲ್ಲಿ ತಿಳಿಸಿದೆ. ಆಗಸ್ಟ್ 1ರಿಂದ ಈ ಗುಂಡಿನ ದಾಳಿ ಶುರುವಾಗಿದ್ದು, ಇಂದು ಒಂಬತ್ತನೇ ದಿನ ಕಾರ್ಯಚರಣೆ ನಡೆದಿದೆ ಎಂದು ಸೇನೆ ಹೇಳಿದೆ. ಇದು ಕಣಿವೆಯಲ್ಲಿ ನಡೆದ ಅತಿ ಮಟ್ಟದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಕಾರ್ಯಚರಣೆಯ ಮೇಲ್ವಿಚಾರಣೆಗಾಗಿ ಉನ್ನತ ಪೊಲೀಸ್ ಮತ್ತು ಸೇನಾ ಕಮಾಂಡರ್‌ಗಳು ಎನ್‌ಕೌಂಟರ್ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಇನ್ನು ಕಾರ್ಯಚರಣೆ ಸ್ಥಳವನ್ನು ತಲುಪಲು ತುಂಬಾ ತಡವಾಗಿದೆ. ಏಕೆಂದರೆ ತುಂಬಾ ಕಷ್ಟಕರವಾದ ಭೂಪ್ರದೇಶ ಮತ್ತು ಅರಣ್ಯ ಪ್ರದೇಶವಾಗಿರುವುದರಿಂದ ಇಲ್ಲಿಗೆ ಹೋಗುವುದು ತುಂಬಾ ಕಷ್ಟವಾಗಿದೆ. ಆದರೆ ಎಷ್ಟೇ ಕಷ್ಟವಾದರು ನಾವು ಕಾರ್ಯಚರಣೆ ಮಾಡಿಯೇ ಮಾಡುತ್ತೇವೆ. ಅವರನ್ನು ಪತ್ತೆ ಮಾಡಿ ಎನ್‌ಕೌಂಟರ್ ಮಾಡುವುದು ಖಂಡಿತ ಎಂದು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವ ಜೆ & ಕೆ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಹೇಳಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಅಖಾಲ್ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿ ಹಂಚಿಕೊಂಡಿತ್ತು. ಇದರ ಆಧಾರದ ಮೇಲೆ ಆಗಸ್ಟ್ 1ರಂದು ದಾಳಿಯನ್ನು ನಡೆಸಲಾಗಿತ್ತು.
ಕಳೆದ ಶುಕ್ರವಾರ ಎರಡೂ ಕಡೆಯ ನಡುವೆ ಗುಂಡಿನ ಚಕಮಕಿ ನಡೆದ ನಂತರ ಸ್ವಲ್ಪ ವಿರಾಮವನ್ನು ನೀಡಲಾಗಿತ್ತು. ಆದರೆ ಯಾವುದೇ ಕಾರಣಕ್ಕೂ ಸೇನೆ ಈ ಪ್ರದೇಶವನ್ನು ಬಿಟ್ಟು ಹೋಗಿಲ್ಲ, ಮತ್ತಷ್ಟು ಸುತ್ತುವರಿದು, ಇನ್ನಷ್ಟು ಸೇನಾ ಬಲವನ್ನು ಹೆಚ್ಚಾಗಿದೆ. ಮರುದಿನ ಮತ್ತೆ ಗುಂಡಿನ ಕಾಳಗ ಶುರು ಮಾಡಲಾಗಿತ್ತು. ಇದರಲ್ಲಿ ಒಬ್ಬ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಇನ್ನು ಭಯೋತ್ಪಾದಕರು ಯಾವ ಸಂಘಟನೆ ಎಂಬುದು ಇನ್ನು ಪತ್ತೆಯಾಗಿಲ್ಲ. ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಬಿಗಿ ಸುತ್ತುವರೆದಿದ್ದು, ದಟ್ಟ ಕಾಡುಗಳಲ್ಲಿ ಅಡಗಿರುವ ಭಯೋತ್ಪಾದಕರ ವಿರುದ್ಧ ಹೋರಾಟ ಮುಂದುವರೆಸಿವೆ. ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ಡ್ರೋನ್‌ಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಸೇವೆಗಳನ್ನು ಇಳಿಸಲಾಗಿದೆ. ಅಡಗಿರುವ ಭಯೋತ್ಪಾದಕರನ್ನು ನಿಗ್ರಹಿಸುವಲ್ಲಿ ಪ್ಯಾರಾ ಕಮಾಂಡೋಗಳು ಸಹ ಭದ್ರತಾ ಪಡೆಗಳಿಗೆ ಸಹಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಉತ್ತರಕಾಶಿ ಪ್ರವಾಹ ಸಂತ್ರಸ್ತೆ
ಪೊಲೀಸ್ ಮೂಲಗಳ ಪ್ರಕಾರ, ಕಾರ್ಯಾಚರಣೆ ಆರಂಭಿಸಿದಾಗ ಐದು ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಇತ್ತು. ಅವರಲ್ಲಿ ಮೂವರು ವಿದೇಶಿ ಭಯೋತ್ಪಾದಕರಾಗಿದ್ದು, ಅವರು ಕಾಡಿನಲ್ಲಿ ಹೇಗೆ ದಾಳಿ ಮಾಡುವುದು ಎಂಬ ಬಗ್ಗೆ ತರಬೇತಿಯನ್ನು ಹೊಂದಿದ್ದಾರೆ. ಕಾಶ್ಮೀರದಲ್ಲಿ ಭದ್ರತಾ ಪಡೆಗಳನ್ನು ಎದುರಿಸಲು ತರಬೇತಿ ಪಡೆದ ಸ್ಥಳೀಯ ಭಯೋತ್ಪಾದಕರು ಬಹಳ ಕಡಿಮೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Sat, 9 August 25




