ಮೈಕ್ರೋವೇವ್ ಓವನ್‌ನಲ್ಲಿ ಹೆಣ್ಣು ಮಗುವಿನ ಶವ ಪತ್ತೆ; ತಾಯಿ ಬಗ್ಗೆ ಶಂಕೆ ವ್ಯಕ್ತ ಪಡಿಸಿದ ದೆಹಲಿ ಪೊಲೀಸರು

| Updated By: ರಶ್ಮಿ ಕಲ್ಲಕಟ್ಟ

Updated on: Mar 22, 2022 | 3:57 PM

ಮಗುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಕರ್ ಹೇಳಿದ್ದಾರೆ.

ಮೈಕ್ರೋವೇವ್ ಓವನ್‌ನಲ್ಲಿ ಹೆಣ್ಣು ಮಗುವಿನ ಶವ ಪತ್ತೆ; ತಾಯಿ ಬಗ್ಗೆ ಶಂಕೆ ವ್ಯಕ್ತ ಪಡಿಸಿದ ದೆಹಲಿ ಪೊಲೀಸರು
ದೆಹಲಿ ಪೊಲೀಸ್
Follow us on

ದೆಹಲಿ: ದಕ್ಷಿಣ ದಿಲ್ಲಿಯ ಚಿರಾಗ್ ದಿಲ್ಲಿ ಪ್ರದೇಶದಲ್ಲಿ(Chirag Dilli) ಸೋಮವಾರ ಎರಡು ತಿಂಗಳ ಹೆಣ್ಣು ಮಗು ಮೈಕ್ರೋವೇವ್ ಓವನ್‌ನ(microwave oven)ಲ್ಲಿ ಶವವಾಗಿ ಪತ್ತೆಯಾಗಿದೆ. ಮಧ್ಯಾಹ್ನ 3.15ರ ಸುಮಾರಿಗೆ ಮಗುವಿನ ಸಾವಿನ ಬಗ್ಗೆ ಮಾಹಿತಿ ಸಿಕ್ಕಿದ್ದು, ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಬೆನಿಟಾ ಮೇರಿ ಜೈಕರ್ (Benita Mary Jaiker) ಹೇಳಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. “ಮಗುವಿನ ಪೋಷಕರಾದ ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಅವರನ್ನು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಕರ್ ಹೇಳಿದ್ದಾರೆ.  ಪ್ರಕರಣದ ಪ್ರಮುಖ ಶಂಕಿತರಾಗಿರುವ ಮಗುವಿನ ತಾಯಿ, ಹೆಣ್ಣು ಮಗುವಿನ ಜನನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  “ಅನನ್ಯಾ ಈ ವರ್ಷದ ಜನವರಿಯಲ್ಲಿ ಜನಿಸಿದ್ದು ಅಂದಿನಿಂದ ಡಿಂಪಲ್ ಕೌಶಿಕ್ ಅಸಮಾಧಾನಗೊಂಡಿದ್ದರು. ಅವರು ಈ ವಿಷಯದ ಬಗ್ಗೆ ತಮ್ಮ ಪತಿಯೊಂದಿಗೆ ಜಗಳವಾಡಿದರು” ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಈ ದಂಪತಿಗೆ ನಾಲ್ಕು ವರ್ಷದ ಮಗನೂ ಇದ್ದಾನೆ. ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನೆರೆಹೊರೆಯವರು ಡಿಂಪಲ್ ಮನೆಯೊಳಗೆ ಬೀಗ ಹಾಕಿಕೊಂಡಿದ್ದರು. ನಂತರ ಅವರ ಅತ್ತೆ ಬೊಬ್ಬೆ ಹಾಕಿದರು ಎಂದಿದ್ದಾರೆ. “ನಾವು ಗಾಜು ಒಡೆದು ಕೋಣೆಗೆ ಪ್ರವೇಶಿಸಿದ್ದೇವೆ. ಮಹಿಳೆ ತನ್ನ ಮಗನೊಂದಿಗೆ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾವು ಕಂಡುಕೊಂಡಿದ್ದೇವೆ, ಆದರೆ ಎರಡು ತಿಂಗಳ ಮಗು ಅನನ್ಯಾ ಕಾಣೆಯಾಗಿತ್ತು ಎಂದು ಅವರು ಹೇಳಿದರು.

ಅನನ್ಯಾಳ ಅಜ್ಜಿ ಮತ್ತು ಕೆಲವು ನೆರೆಹೊರೆಯವರು ನಂತರ ಮನೆಯೊಳಗೆ ಹುಡುಕಾಡಿದಾಗ ಮೈಕ್ರೋವೇವ್ ಓವನ್‌ನಲ್ಲಿ ಶಿಶು ಪತ್ತೆಯಾಗಿದೆ. ಮನೆಯ ಎರಡನೇ ಮಹಡಿಯ ಕೊಠಡಿಯಲ್ಲಿ ಒಲೆ ಇಡಲಾಗಿತ್ತು.
ಘಟನೆಯ ಸಮಯದಲ್ಲಿ ಮಗುವಿನ ತಂದೆ ಅವರು ಹತ್ತಿರದ ಡಿಪಾರ್ಟ್‌ಮೆಂಟಲ್ ಸ್ಟೋರ್‌ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Worlds Most Polluted Capital City  ವಿಶ್ವದ ಅತ್ಯಂತ ಮಾಲಿನ್ಯಯುಕ್ತ ರಾಜಧಾನಿ ದೆಹಲಿ, ಟಾಪ್ 5 ಮಾಲಿನ್ಯಯುಕ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ