ದೆಹಲಿ: ಭಾರತದಲ್ಲಿ ಉದ್ದೇಶಿತ ಹತ್ಯೆಗಳನ್ನು ಯೋಜಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು (Delhi Police) ಇತ್ತೀಚೆಗೆ ಬಂಧಿಸಿರುವ ಇಬ್ಬರು ಶಂಕಿತ ಉಗ್ರರು ಪಾಕಿಸ್ತಾನ(Pakistan) ಮೂಲದ ಭಯೋತ್ಪಾದಕ ಸಂಘಟನೆ ಹರ್ಕತ್-ಉಲ್ ಅನ್ಸಾರ್ (Harkat-ul Ansar) ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸಂಪರ್ಕ ಹೊಂದಿರುವ ಕನಿಷ್ಠ ನಾಲ್ವರು ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಕಳೆದ ಗುರುವಾರ ಬಂಧಿತ ನೌಶಾದ್ ಅಲಿ ಮತ್ತು ಆತನ ಸಹಚರ ಜಗಜಿತ್ ಸಿಂಗ್ ಅಲಿಯಾಸ್ ಜಗ್ಗ ಇಬ್ಬರೂ ಭಾರತ ಮತ್ತು ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಿರುವ ಹರ್ಕತ್-ಉಲ್ ಅನ್ಸಾರ್ ಸಂಘಟನೆಯ ನಜೀರ್ ಭಟ್, ನಾಸಿರ್ ಖಾನ್, ನಜೀರ್ ಖಾನ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ನದೀಮ್ ಜತೆ ಸಂಪರ್ಕದಲ್ಲಿದ್ದರು. ದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಕೆಲವು ದಿನಗಳ ಮುಂಚೆ ಈ ಸಂಗತಿ ಬಹಿರಂಗಗೊಂಡಿದ್ದು, ಕಾರ್ಯಕ್ರಮಕ್ಕಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇವರಿಬ್ಬರು ಗ್ಯಾಂಗ್ಸ್ಟರ್ ಸುನಿಲ್ ರಾಠಿ, ನೀರಜ್ ಬವಾನಾ, ಇರ್ಫಾನ್ ಚೆನು, ಹಾಶಿಮ್ ಬಾಬಾ, ಇಬಲ್ ಹಸನ್ ಮತ್ತು ಇಮ್ರಾನ್ ಪೆಹೆಲ್ವಾನ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತ ಇಬ್ಬರು ಭಯೋತ್ಪಾದಕರಿಗೆ ಬಲಪಂಥೀಯ ಹಿಂದೂ ನಾಯಕರ ಮೇಲೆ ಉದ್ದೇಶಿತ ದಾಳಿಗಳನ್ನು ನಡೆಸಲು ನಿಯೋಜಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ದೆಹಲಿ ಪೊಲೀಸರು ಈ ಹಿಂದೆಯೂ ಸಹ ಗ್ಯಾಂಗ್ಸ್ಟರ್ -ಭಯೋತ್ಪಾದಕರ ಘಟಕದ ಸಂಚು ಭೇದಿಸಿದ್ದು ಎನ್ಐಎ ಯುಎಪಿಎ ಅಡಿಯಲ್ಲಿ ಗ್ಯಾಂಗ್ಸ್ಟರ್ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್, ವಿಕ್ರಮ್ ಬ್ರಾರ್, ನೀರಜ್ ಬವಾನಿಯಾ, ಟಿಲ್ಲು ತಾಜ್‌ಪುರಿಯಾ, ಸುಖ್‌ಪ್ರೀತ್ ಮತ್ತು ದಿಲ್‌ಪ್ರೀತ್ ಮತ್ತು ಇತರರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಾಗಿದೆ.
ನೌಶಾದ್ ಅಲಿ ಮತ್ತು ಜಗಜಿತ್ ಸಿಂಗ್ ಬಗೆಗಿನ ತನಿಖೆಯು ಗ್ಯಾಂಗ್ಸ್ಟರ್ ಮತ್ತು ಗಡಿಯಾಚೆಗಿನ ಭಯೋತ್ಪಾದಕ ಗುಂಪುಗಳ ನಡುವೆ ಸಹಭಾಗಿತ್ವವನ್ನು ಸೂಚಿಸುತ್ತದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ: Assembly election 2023 Dates ತ್ರಿಪುರಾದಲ್ಲಿ ಫೆ.16, ಮೇಘಾಲಯ ಮತ್ತು ನಾಗಾಲ್ಯಾಂಡ್ನಲ್ಲಿ ಫೆ.27ಕ್ಕೆಚುನಾವಣೆ
ಮೂಲಗಳ ಪ್ರಕಾರ, ನವೆಂಬರ್ 1996 ರಲ್ಲಿ, ನೌಶಾದ್ 2.25 ಕೆಜಿ ಆರ್‌ಡಿಎಕ್ಸ್ ಮತ್ತು ₹ 11.5 ಲಕ್ಷಕ್ಕಾಗಿ ಅಸ್ಸಾಂನಲ್ಲಿ ಅಬ್ದುಲ್ಲಾ ಶೆರ್ವಾನಿಯನ್ನು ಗುಂಡಿಕ್ಕಿ ಕೊಂದಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಶೆರ್ವಾನಿಯಿಂದ ವಶಪಡಿಸಿಕೊಂಡ ಆರ್‌ಡಿಎಕ್ಸ್ ಮತ್ತು ಹಣವನ್ನು ಆತ ನೌಶಾದ್‌ನ ನಿಕಟ ಸಹಚರ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಘಟಕದ ಹರ್ಕತ್-ಉಲ್ ಅನ್ಸಾರ್‌ನ ಸಕ್ರಿಯ ಸದಸ್ಯ ನದೀಮ್‌ನಿಂದ ಕದ್ದಿದ್ದಾನೆ ಎಂದು ತನಿಖಾಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನೌಶಾದ್ ಅಲಿ ಮತ್ತು ನದೀಮ್ ಇಬ್ಬರ ಮೇಲೂ ಕೊಲೆ ಆರೋಪ ಮತ್ತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆರ್‌ಡಿಎಕ್ಸ್ ಪೂರೈಕೆಯಲ್ಲಿ ಭಾಗಿಯಾಗಿದ್ದ ಕಾಶ್ಮೀರದ ಮತ್ತೊಬ್ಬ ಆರೋಪಿ ಬಿಲಾಲ್ ಸಿದ್ದಿಕಿಯನ್ನು ನಂತರ ಬಂಧಿಸಲಾಯಿತು
ನೌಶಾದ್ 1991 ರಲ್ಲಿ ಮೊದಲ ಬಾರಿ ಕೊಲೆ ಮಾಡಿದ್ದಾನೆ. ಈತ ತನ್ನ ಪ್ರದೇಶದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಲು ಜಹಾಂಗೀರ್‌ಪುರಿ ಪ್ರದೇಶದಲ್ಲಿ ಜಿತೇಂದರ್ ದಬ್ಲಾ ಎಂಬಾತನಿಗೆ ಇರಿದಿದ್ದ, ನಂತರ ಆತನನ್ನು ಜೈಲಿಗೆ ಕಳುಹಿಸಿದಾಗ ಲಷ್ಕರ್-ಎ ತೊಯ್ಬಾದ ಪಾಕಿಸ್ತಾನಿ ಭಯೋತ್ಪಾದಕ ಅಸ್ಫಾಕ್ ಅಲಿಯಾಸ್ ಆರೀಫ್ ಮತ್ತು ಹರ್ಕತ್-ಉಲ್-ಅನ್ಸಾರ್‌ನ ನದೀಮ್ ಜೊತೆ ಸಂಪರ್ಕ ಹೊಂದಿದ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲಿನಲ್ಲಿರುವಾಗ, ದೆಹಲಿಯ ಕೆಂಪು ಕೋಟೆಯ ಶೂಟೌಟ್ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕ ಅಶ್ಫಾಕ್ ಅಲಿಯಾಸ್ ಆರಿಫ್ ಜೊತೆ ನಿಕಟ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕಾಶ್ಮೀರ ಜೈಲಿನಿಂದ ವರ್ಗಾವಣೆಗೊಂಡ ಪಾಕಿಸ್ತಾನದ ಇನ್ನೊಬ್ಬ ಎಲ್‌ಇಟಿ ಭಯೋತ್ಪಾದಕ ಸೊಹೈಲ್‌ಗೆ ನೌಶಾದ್‌ನನ್ನು ಪರಿಚಯಿಸಿದವನು ಅಶ್ಫಾಕ್.
ನವೆಂಬರ್ 2018 ರಲ್ಲಿ ಜಗಜಿತ್ ಬಗ್ಗೆ ಆತನ ಸ್ನೇಹಿತ ರವೀಂದರ್ ಸಿಂಗ್ ಅಲಿಯಾಸ್ ಹ್ಯಾಪಿ ಜೊತೆಗೆ ಉತ್ತರಾಖಂಡದ ರುದ್ರಪುರದಿಂದ ಇಂಟರ್ನೆಟ್ ಮೂಲಕ ಕಾರನ್ನು ಬಾಡಿಗೆಗೆ ಪಡೆದು ಉತ್ತರ ಪ್ರದೇಶದ ಅಲಹಾಬಾದ್‌ಗೆ ಬುಕ್ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:Army helicopter crash: ಉಕ್ರೇನ್ನಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಗೃಹ ಸಚಿವ, ಇಬ್ಬರು ಮಕ್ಕಳು ಸೇರಿ 16 ಜನ ಸಾವು
ಅವರು ಕ್ಯಾಬ್ ಚಾಲಕನನ್ನು ಗುಂಡಿಕ್ಕಿ ಕೊಂದು ನವೆಂಬರ್ 2018 ರ ಕೊನೆಯ ವಾರದಲ್ಲಿ ಅವರು ಪಂಜಾಬ್‌ನ ಗುರುದಾಸ್‌ಪುರದ ಐನೋಕೋಟ್‌ನಲ್ಲಿರುವ ತನ್ನ ಸೋದರ ಮಾವನ ಮನೆಗೆ ಹೋಗಿದ್ದರು. ಉಧಮ್ ಸಿಂಗ್ ನಗರದ ಝಂಕಯ್ಯ ಎಂಬಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್ ನಂತರ ಜಗಜಿತ್ ಸಿಂಗ್ ಮತ್ತು ರವೀಂದರ್ ಸಿಂಗ್ ಇಬ್ಬರನ್ನೂ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಲೆ ಪ್ರಕರಣದಲ್ಲಿ ಉತ್ತರಾಖಂಡ್‌ನ ಹಲ್ದ್ವಾನಿ ಜೈಲಿನಲ್ಲಿರುವಾಗ ಜಗಜಿತ್ ಬಾಂಬಿಹಾ ಗ್ಯಾಂಗ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಏಪ್ರಿಲ್ 2022 ರಲ್ಲಿ ಆತನನ್ನು 20 ದಿನಗಳ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ಜಗಜಿತ್ ನಂತರ ಅಮೃತಸರದಲ್ಲಿ ಅಡಗಿಕೊಂಡಿದ್ದ. ಶಂಶೇರ್ ಸಿಂಗ್ ಅಲಿಯಾಸ್ ಶೇರಾ ಕೆಹ್ಲೋ, ಆತನ ಸಹೋದರ ಹ್ಯಾಪಿ ಕೆಹ್ಲೋ ಮತ್ತು ಅರ್ಶ್ ದಲ್ಲಾ ಗ್ಯಾಂಗ್‌ನ ಇತರರೊಂದಿಗೆ ಸಿಂಗ್ ಹಲ್ದ್ವಾನಿ ಜೈಲಿನಲ್ಲಿ ಸಂಪರ್ಕದಲ್ಲಿದ್ದ.
ಅರ್ಶ್ ದಲ್ಲಾದ ಗ್ಯಾಂಗ್ ಸದಸ್ಯರಿಗೆ ಆರ್ಥಿಕ ಮತ್ತು ಕಾನೂನು ನೆರವು ನೀಡಲು, ಜಗಜಿತ್ ಸಿಂಗ್ ದಲ್ಲಾ ಅವರ ಸಹವರ್ತಿ ಲೂಧಿಯಾನಾದ ಮನ್‌ಪ್ರೀತ್ ಅಲಿಯಾಸ್ ಮನ್ನಾನನ್ನು ಸಂಪರ್ಕಿಸಿದ್ದ. ಆತ ಅವನನ್ನು ಅರ್ಶ್ ದಲ್ಲಾಗೆ ಪರಿಚಯಿಸಿದರು ಎಂದು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ