ಬಿಹಾರ: ಬ್ಯಾಂಕ್ ಲೂಟಿ ಮಾಡಲು ಬಂದ ಬಂದೂಕುಧಾರಿಗಳನ್ನು ಧೈರ್ಯದಿಂದ ಎದುರಿಸಿದ ಮಹಿಳಾ ಪೊಲೀಸ್, ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾವು ಏನೇ ಮಾಡಿದರೂ ಬ್ಯಾಂಕ್ ಲೂಟಿ ಮಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿ ಲೂಟಿಕೋರರನ್ನು ಎದುರಿಸಿದೆವು. ನಮ್ಮ ರೈಫಲ್ ಕೀಳಲು ಅವರು ಯತ್ನಿಸಿದರು. ಆದರೆ ನಾವು ಬಿಡಲಿಲ್ಲ, ಜೂಹಿ ತನ್ನ ಗನ್ ತೆಗೆದು ಗುರಿ ನೆಟ್ಟರು. ಅಷ್ಟೊತ್ತರಲ್ಲಿ ದರೋಡೆಕೋರರು ಹೆದರಿ ಓಡಿ ಹೋದರು ಎಂದಿದ್ದಾರೆ ಶಾಂತಿ.
ಪಾಟ್ನಾ: ಬಿಹಾರದ (Bihar) ಹಾಜಿಪುರದ ಬ್ಯಾಂಕ್‌ವೊಂದರಲ್ಲಿ ಬುಧವಾರ ಮೂವರು ಬಂದೂಕುಧಾರಿ ದರೋಡೆಕೋರರು ಬಲವಂತವಾಗಿ ಬ್ಯಾಂಕ್‌ಗೆ ನುಗ್ಗಲು ಪ್ರಯತ್ನಿಸಿದಾಗ ಅಲ್ಲಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳು ಅವರನ್ನು ತಡೆದು, ಅವರ ಜತೆ ಫೈಟ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಜೂಹಿ ಕುಮಾರಿ ಮತ್ತು ಶಾಂತಿ ಕುಮಾರಿ ಎಂಬ ಪೊಲೀಸ್ ಕಾನ್ಸ್‌ಟೇಬಲ್‌ಗಳು ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಂದೌರಿ ಚೌಕ್‌ನಲ್ಲಿರುವ (Senduari Chowk )ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‌ನ (Uttar Bihar Gramin Bank) ಪ್ರವೇಶದ್ವಾರದಲ್ಲಿ ಕುಳಿತಿದ್ದರು. ಆಗ ಮೂವರು ಪುರುಷರು ಪ್ರವೇಶಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಆಗ ಪೊಲೀಸ್ ನಿಮ್ಮ ದಾಖಲೆ ತೋರಿಸಿ ಎಂದ ಹೇಳಿದಾಗ ಅದರಲ್ಲಿ ಒಬ್ಬ ಪೊಲೀಸರತ್ತ ಪಿಸ್ತೂಲ್ ತೋರಿಸುತ್ತಿರುವುದು ಕಾಣಿಸುತ್ತದೆ. ಕ್ಷಣ ಮಾತ್ರದಲ್ಲಿ ಇಬ್ಬರು ಪೊಲೀಸರು ಸಶಸ್ತ್ರಧಾರಿ ದರೋಡೆಕೋರರನ್ನು ಎದುರಿಸಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ.
“ಮೂವರಿಗೂ ಬ್ಯಾಂಕ್‌ನಲ್ಲಿ ಕೆಲಸವಿದೆಯೇ ಎಂದು ನಾನು ಕೇಳಿದೆ, ಅವರು ಹೌದು ಎಂದು ಹೇಳಿದರು. ನಾನು ಪಾಸ್‌ಬುಕ್ ತೋರಿಸಲು ಹೇಳಿದಾಗ ಅವರು ಬಂದೂಕನ್ನು ಹೊರತೆಗೆದರು” ಎಂದು ಜೂಹಿ ಹೇಳಿದ್ದಾರೆ. ದರೋಡೆಕೋರರನ್ನು ಹಿಮ್ಮೆಟ್ಟಿಸುವಾಗ ಜೂಹಿ ಗಾಯಗೊಂಡಿದ್ದಾರೆ.
The Gallant act of two lady constables of Bihar Police is laudable. Their bravery thwarted an attempt of Bank Robbery in Vaishali.#Bihar_Police_Action_against_Criminal pic.twitter.com/4Do0pQOPAp
— Bihar Police (@bihar_police) January 18, 2023
ನಾವು ಏನೇ ಮಾಡಿದರೂ ಬ್ಯಾಂಕ್ ಲೂಟಿ ಮಾಡಲು ಬಿಡುವುದಿಲ್ಲ ಎಂದು ನಿರ್ಧರಿಸಿ ಲೂಟಿಕೋರರನ್ನು ಎದುರಿಸಿದೆವು. ನಮ್ಮ ರೈಫಲ್ ಕೀಳಲು ಅವರು ಯತ್ನಿಸಿದರು. ಆದರೆ ನಾವು ಬಿಡಲಿಲ್ಲ, ಜೂಹಿ ತನ್ನ ಗನ್ ತೆಗೆದು ಗುರಿ ನೆಟ್ಟರು. ಅಷ್ಟೊತ್ತರಲ್ಲಿ ದರೋಡೆಕೋರರು ಹೆದರಿ ಓಡಿ ಹೋದರು ಎಂದಿದ್ದಾರೆ ಶಾಂತಿ.
ಪೊಲೀಸರು ಇದೀಗ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದು, ದರೋಡೆ ಯತ್ನದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಸೆಂದೌರಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಬ್ಯಾಂಕ್ ದರೋಡೆಗೆ ಯತ್ನಿಸಿದರು. ನಮ್ಮ ಮಹಿಳಾ ಕಾನ್‌ಸ್ಟೆಬಲ್‌ಗಳು ಅಸಾಧಾರಣ ಧೈರ್ಯ ಪ್ರದರ್ಶಿಸಿ ಅವರನ್ನು ಹೆದರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಕಾನ್‌ಸ್ಟೆಬಲ್‌ಗಳಿಗೆ ಬಹುಮಾನ ನೀಡಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿ ಓಂ ಪ್ರಕಾಶ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Thu, 19 January 23