ಸಹಪಾಠಿ ಮೇಲೆ ಹಲ್ಲೆ ಪ್ರಕರಣ; ಪೊಲೀಸರೆದುರು ಶರಣಾದ ತೆಲಂಗಾಣದ ಬಿಜೆಪಿ ಅಧ್ಯಕ್ಷರ ಮಗ
ಹೈದರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಸಹ ವಿದ್ಯಾರ್ಥಿಯ ಮೇಲೆ ಭಗೀರಥ ಹಲ್ಲೆ ನಡೆಸಿರುವ ವೀಡಿಯೊಗಳು ವೈರಲ್ ಆಗಿತ್ತು.
ಹೈದರಾಬಾದ್: ಹಲ್ಲೆ ಪ್ರಕರಣದಲ್ಲಿ ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ (Bandi Sanjay) ಅವರ ಪುತ್ರ ಬಂಡಿ ಸಾಯಿ ಭಗೀರಥ ದುಂಡಿಗಲ್ ಪೊಲೀಸರ ಮುಂದೆ ಶರಣಾಗಿದ್ದಾರೆ. ಪೊಲೀಸರ ಪ್ರಕಾರ, ಕ್ರಿಮಿನಲ್ ಮೊಕದ್ದಮೆಯಡಿಯಲ್ಲಿ ದಾಖಲಾಗಿರುವ ಭಗೀರಥ ಬುಧವಾರ ಶರಣಾಗಿದ್ದಾರೆ. ಈ ಹಲ್ಲೆಯ ವಿಡಿಯೋಗಳು ವೈರಲ್ ಆದ ನಂತರ ಮಹೀಂದ್ರಾ ವಿಶ್ವವಿದ್ಯಾಲಯವು ಸಲ್ಲಿಸಿದ ದೂರಿನ ಆಧಾರದ ಮೇಲೆ ಭಗೀರಥನ ವಿರುದ್ಧ ಕೇಸ್ ದಾಖಲಿಸಲಾಗಿತ್ತು.
ಹೈದರಾಬಾದ್‌ನ ಖಾಸಗಿ ಕಾಲೇಜೊಂದರಲ್ಲಿ ಸಹ ವಿದ್ಯಾರ್ಥಿಯ ಮೇಲೆ ಭಗೀರಥ ಹಲ್ಲೆ ನಡೆಸಿರುವ ವೀಡಿಯೊಗಳು ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504, ಮತ್ತು 506 ಆರ್/ಡಬ್ಲ್ಯು 34 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: Viral Video: 5 ರೂ.ಗಾಗಿ ಹಣ್ಣಿನ ವ್ಯಾಪಾರಿಗೆ ಥಳಿಸಿದ ಯುವಕರು; ವಿಡಿಯೋ ವೈರಲ್
ಇದೀಗ ತೆಲಂಗಾಣದ ಬಿಜೆಪಿ ಅಧ್ಯಕ್ಷ ಇದೀಗ ತಮ್ಮ ಮಗ ಪೊಲೀಸರಿಗೆ ಶರಣಾಗಿದ್ದಾರೆ ಎಂದು ಹೇಳಿದ್ದಾರೆ. ಸಂಜಯ್ ಅವರ ಮಗ ಭಗೀರಥ ಅವರ ವಿಡಿಯೋಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವರು ಮಹೀಂದ್ರಾ ವಿಶ್ವವಿದ್ಯಾಲಯದಲ್ಲಿ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸುತ್ತಿರುವುದು ದಾಖಲಾಗಿತ್ತು. ಬಳಿಕ ಭಗೀರಥ ಹಾಗೂ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
Ragging & assaulting case of @BJP4Telangana president @bandisanjay_bjp ’s son. Hitting, kicking & abusing his colleague student at university!
The student is now hospitalised. Will Mr @JPNadda dare to comment on this? pic.twitter.com/3B8F9E8wZF
— YSR (@ysathishreddy) January 17, 2023
ನನ್ನ ಮಗ ಪೊಲೀಸರಿಗೆ ಶರಣಾಗಿದ್ದಾನೆ. ನನ್ನ ಮಗ ಏನಾದರೂ ತಪ್ಪು ಮಾಡಿದ್ದರೆ, ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಳ್ಳಬಬಹುದು ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಆರೋಪಿಸಿದ್ದಾರೆ.