ಉತ್ತರ ಪ್ರದೇಶದಲ್ಲಿ ಕಳವಾದ ಮಿರಾಜ್ ಫೈಟರ್ ಜೆಟ್ ಟೈರ್ ಪತ್ತೆ

ಈ ಬಗ್ಗೆ ಹೇಳಿಕೆ ನೀಡಿರುವ ಲಖನೌ ಪೊಲೀಸರು ಡಿಸೆಂಬರ್ 4 ರಂದು ಬಕ್ಷಿ ಕಿ ತಲಾಬ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಇಬ್ಬರು ಜನರು ಟೈರ್‌ನೊಂದಿಗೆ ಇಳಿದರು. ಆಪಾದಿತ ಕಳ್ಳತನ ವರದಿಯಾದ ರಸ್ತೆಯಲ್ಲಿ ಅದು ಪತ್ತೆಯಾಗಿದೆ. ಟ್ರಕ್ ಟೈರ್ ಆಗಿರಬಹುದೆಂದು ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ ಕಳವಾದ ಮಿರಾಜ್ ಫೈಟರ್ ಜೆಟ್ ಟೈರ್ ಪತ್ತೆ
ಮಿರಾಜ್ ಫೈಟರ್ ಜೆಟ್ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 05, 2021 | 7:44 PM

ಲಖನೌ: ನವೆಂಬರ್ 27 ರಂದು ಲಖನೌನಲ್ಲಿ(Lucknow) ಚಲಿಸುವ ಟ್ರಕ್‌ನಿಂದ ಕಳವು ಮಾಡಲಾಗಿದೆ ಎನ್ನಲಾದ ಭಾರತೀಯ ವಾಯುಪಡೆಯ (IAF) ಮಿರಾಜ್ ಯುದ್ಧ ವಿಮಾನದ (Mirage fighter jet) ಟೈರ್  ಸಿಕ್ಕಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಲಖನೌನ ಬಕ್ಷಿ ಕಾ ತಲಾಬ್ ವಾಯುಪಡೆ ನಿಲ್ದಾಣದಿಂದ ರಾಜಸ್ಥಾನದ ಜೋಧ್‌ಪುರ ವಾಯುನೆಲೆಗೆ ಟೈರ್ ಅನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಹೇಳಿಕೆ ನೀಡಿರುವ ಲಖನೌ ಪೊಲೀಸರು ಡಿಸೆಂಬರ್ 4 ರಂದು ಬಕ್ಷಿ ಕಿ ತಾಲಾಬ್ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಇಬ್ಬರು ಜನರು ಟೈರ್‌ನೊಂದಿಗೆ ಇಳಿದರು. ಆಪಾದಿತ ಕಳ್ಳತನ ವರದಿಯಾದ ರಸ್ತೆಯಲ್ಲಿ ಅದು ಪತ್ತೆಯಾಗಿದೆ. ಟ್ರಕ್ ಟೈರ್ ಆಗಿರಬಹುದೆಂದು ಅವರು ಅದನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಿದ್ದಾರೆ.  ಏರ್‌ಫೋರ್ಸ್ ಸ್ಟೇಷನ್ ಈ ಟೈರ್ ಅವರ ಸರಬರಾಜು ಡಿಪೋಗೆ ಸೇರಿದ್ದು ಇದು ಮಿರಾಜ್ ಫೈಟರ್ ಜೈಡ್​​ನದ್ದು ಎಂದು ಹೇಳಿದೆ. ಲಖನೌದ ಶಹೀದ್ ಪಥ್ ಪ್ರದೇಶದಲ್ಲಿ ಮಿರಾಜ್-2000 ಫೈಟರ್ ಜೆಟ್‌ನ ಹೊಸ ಟೈರ್‌ಗಳು ಮತ್ತು ಇತರ ವಾಯುಪಡೆ ಉಪಕರಣಗಳನ್ನು ಬಕ್ಷಿ ಕಾ ತಾಲಾಬ್ ವಾಯುಪಡೆ ನಿಲ್ದಾಣದಿಂದ ಜೋಧ್‌ಪುರ ವಾಯುನೆಲೆಗೆ ಸಾಗಿಸುತ್ತಿದ್ದಾಗ ಕಳ್ಳತನ ನಡೆದಿದೆ.

ಆಪಾದಿತ ಕಳ್ಳತನ ನಡೆದ ನಂತರ ಉಪಕರಣಗಳನ್ನು ಸಾಗಿಸುತ್ತಿದ್ದ ಟ್ರಕ್‌ನ ಚಾಲಕನ ದೂರಿನ ಮೇರೆಗೆ ಲಖನೌ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಗರದಿಂದ ನಿರ್ಗಮಿಸಲು ಟ್ರಕ್ ತಿರುವುತೆಗೆದುಕೊಳ್ಳುತ್ತಿದ್ದಾಗ ಟೈರ್ ಕಳವು ಮಾಡಲಾಗಿದೆ ಎಂದು ಚಾಲಕ ದೂರಿದ್ದರು.

ಏನಿದು ಪ್ರಕರಣ? ಲಖನೌದ  ಬಕ್ಷಿ-ಕಾ-ತಾಲಾಬ್ ವಾಯುನೆಲೆಯಿಂದ  ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದ ಸೇನಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಟ್ರಕ್‌ನಿಂದ ಮಿರಾಜ್ ಫೈಟರ್ ಜೆಟ್‌ನ (Mirage fighter jet) ಟೈರ್ ಅನ್ನು ಅಪರಿಚಿತ ದುಷ್ಕರ್ಮಿಗಳು ಕದ್ದಿರುವ ಘಟನೆ ವರದಿ ಆಗಿತ್ತ. ಟ್ರಕ್ ಜೋಧ್‌ಪುರ ವಾಯುನೆಲೆಗೆ ತೆರಳುತ್ತಿದ್ದು ಲಖನೌದ ಶಹೀದ್ ಪಥ್‌ನಲ್ಲಿ ನವೆಂಬರ್ 27 ರ ತಡರಾತ್ರಿ ಕಳ್ಳತನ ನಡೆದಿದೆ. ಟ್ರಕ್ ಚಾಲಕ ಹೇಮ್ ಸಿಂಗ್ ರಾವತ್ ಅವರು ಬಕ್ಷಿ-ಕಾ-ತಾಲಾಬ್ ವಾಯುನೆಲೆಯಿಂದ ಮಿಲಿಟರಿ ಸರಕುಗಳನ್ನು ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಶಹೀದ್ ಪಥದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಂದರ್ಭ ದುರ್ಬಳಕೆ ಮಾಡಿಕೊಂಡು ಸ್ಕಾರ್ಪಿಯೋ ವಾಹನದಲ್ಲಿ ಬಂದ ದುಷ್ಕರ್ಮಿಗಳು ಟೈರ್ ಕಟ್ಟಲು ಬಳಸಿದ್ದ ಪಟ್ಟಿಯನ್ನು ಕಿತ್ತುಕೊಂಡು ಕಳ್ಳತನ ಮಾಡಿದ್ದಾರೆ. ಲಾರಿ ಚಾಲಕನಿಗೆ ವಿಷಯ ತಿಳಿಯುವಷ್ಟರಲ್ಲಿ ಕಳ್ಳರು ಪರಾರಿಯಾಗಿದ್ದರು. ಅವರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಟ್ರಕ್ ನಿಧಾನವಾಗಿ ಚಲಿಸುತ್ತಿದ್ದ ಶಹೀದ್ ಪಥದಲ್ಲಿ ಜಾಮ್ ಉಂಟಾದಾಗ ಕಳ್ಳರು ಮಧ್ಯರಾತ್ರಿ 12:30 ರಿಂದ 1 ರ ನಡುವೆ ಕಳ್ಳತನ ಮಾಡಿದ್ದಾರೆ ಎಂದು ಟ್ರಕ್ ಚಾಲಕ ಹೇಳಿದರು. ನ.27ರಂದು ಘಟನೆ ನಡೆದಿದ್ದು, ಡಿ.1ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು.

ಇದನ್ನೂ ಓದಿ: ಲಖನೌ ವಾಯುನೆಲೆ ಬಳಿ ಮಿರಾಜ್ ಯುದ್ಧ ವಿಮಾನದ ಟೈರ್ ಕಳವು, ಎಫ್‌ಐಆರ್ ದಾಖಲು

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್