ಮುಂಬೈ ಅಸುರಕ್ಷಿತ ಎನ್ನುವುದು ಅನ್ಯಾಯ; ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ

|

Updated on: Jan 16, 2025 | 6:46 PM

ಇಂದು ಬೆಳಿಗ್ಗೆ 2.30ರ ಸುಮಾರಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಲಾಗಿತ್ತು. ಇದರಿಂದ ಸೈಫ್​ಗೆ ಹಲವು ಗಾಯಗಳಾಗಿತ್ತು. ಅವರನ್ನು ತಕ್ಷಣ ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇಂದು ಮಧ್ಯಾಹ್ನ 12 ಗಂಟೆಗೆ ಆಪರೇಷನ್ ಮುಗಿಯಿತು. ಸದ್ಯಕ್ಕೆ ಸೈಫ್ ಅಲಿ ಖಾನ್ ಅಪಾಯದಿಂದ ಪಾರಾಗಿದ್ದಾರೆ.

ಮುಂಬೈ ಅಸುರಕ್ಷಿತ ಎನ್ನುವುದು ಅನ್ಯಾಯ; ಸೈಫ್ ಅಲಿ ಖಾನ್ ಮೇಲಿನ ದಾಳಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯೆ
Devendra Fadnavis
Follow us on

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಇಂದು ಬೆಳಗಿನ ಜಾವ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ನಡೆದ ಹಲ್ಲೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಈಗಾಗಲೇ ನಿಮಗೆ ಇದರ ಬಗ್ಗೆ ಎಲ್ಲಾ ಮಾಹಿತಿಯನ್ನು ಒದಗಿಸಿದ್ದಾರೆ. ಈ ಹಲ್ಲೆಗೆ ಕಾರಣವೇನೆಂಬುದರ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

“ಮುಂಬೈ ಇನ್ನು ಮುಂದೆ ಸುರಕ್ಷಿತ ಸ್ಥಳವಲ್ಲ” ಎಂದು ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ದೇವೇಂದ್ರ ಫಡ್ನವೀಸ್, “ದೇಶದ ಎಲ್ಲಾ ಮಹಾ ನಗರಗಳ ಪೈಕಿ ಮುಂಬೈ ಅತ್ಯಂತ ಸುರಕ್ಷಿತ ನಗರ ಎಂದು ನಾನು ಭಾವಿಸುತ್ತೇನೆ. ಕೆಲವೊಮ್ಮೆ ಕೆಲವು ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾದದ್ದು ನಿಜ. ಆದರೆ, ಈ ಘಟನೆಯಿಂದಾಗಿ ಮುಂಬೈ ಅಸುರಕ್ಷಿತವಾಗಿದೆ ಎಂದು ಹೇಳುವುದು ಅನ್ಯಾಯವಾಗುತ್ತದೆ. ಏಕೆಂದರೆ ಇದು ಮುಂಬೈ ನಗರದ ಪ್ರತಿಷ್ಠೆಯನ್ನು ಹಾಳು ಮಾಡುತ್ತದೆ. ಮುಂಬೈ ಇನ್ನಷ್ಟು ಸುರಕ್ಷಿತವಾಗುವಂತೆ ನೋಡಿಕೊಳ್ಳಲು ಸರ್ಕಾರ ಖಂಡಿತವಾಗಿಯೂ ಪ್ರಯತ್ನಿಸುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಿದ್ದು ಆಟೋದಲ್ಲಿ; ಸಹಾಯಕ್ಕೆ ಬಂದಿದ್ದು ಈ ವ್ಯಕ್ತಿ

ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಕಳ್ಳತನದ ಪ್ರಯತ್ನದ ಸಂದರ್ಭದಲ್ಲಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಈಗ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಹರಿತವಾದ ಆಯುಧದಿಂದ ನಟ ಸೈಫ್ ಅಲಿ ಖಾನ್​ಗೆ ಇರಿದಿದ್ದರಿಂದ ಅನೇಕ ಗಾಯಗಳಾಗಿವೆ. ಅವರನ್ನು ತಕ್ಷಣ ಬಾಂದ್ರಾದ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ