ಗೋವಾದ ಮೊಪಾ ಗ್ರೀನ್‌ಫೀಲ್ಡ್ ಏರ್ಪೋರ್ಟ್ಗೆ ಮನೋಹರ್ ಪರಿಕ್ಕರ್ ಹೆಸರಿಡಲು ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್
ಗೋವಾದ ಮೊಪಾದಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಮನೋಹರ್ ಪರಿಕ್ಕರ್ ಹೆಸರಿಡಲು ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ನವದೆಹಲಿ/ಪಣಜಿ: ಗೋವಾದ ಮೊಪಾದಲ್ಲಿರುವ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಕ್ಕೆ (Mopa Greenfield Airport) ಮಾಜಿ ಮುಖ್ಯಮಂತ್ರಿ, ಕೇಂದ್ರ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್(Manohar Parrikar) ಹೆಸರಿಡಲು ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಗೋವಾದ ಮೊಪಾದಲ್ಲಿ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಏರ್ಪೋರ್ಟ್ ಮೊದಲ ಹಂತವನ್ನು ಉದ್ಘಾಟಿಸಿದ್ದರು. ಇಂದು(ಜನವರಿ 04) ನಡೆದ ಕೇಂದ್ರ ಸಚಿವ ಸಂಪುಟ ಗ್ರೀನ್‌ಫೀಲ್ಡ್ ಏರ್ಪೋರ್ಟ್ಗೆ ಮನೋಹರ್ ಪರಿಕ್ಕರ್ ಹೆಸರಿಡಲು ಅಧಿಕೃತವಾಗಿ ಅನುಮೋದನೆ ನೀಡಿದೆ.
Cabinet approves naming of greenfield airport in Goa’s Mopa after Manohar Parrikar
Read @ANI Story | https://t.co/elmQXULf6F#MopaInternationalAirport #manoharparrikar #Goa pic.twitter.com/gO4eIQSLxB
— ANI Digital (@ani_digital) January 4, 2023
ಇದನ್ನೂ ಓದಿ: ಗೋವಾದ ಮೊಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರಿಕ್ಕರ್ ಹೆಸರು; ಏನಿದರ ವಿಶೇಷತೆ?
ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಮನೋಹರ್ ಪರಿಕ್ಕರ್ ಅವರಿಗೆ ಗೌರವ ಸೂಚಕವಾಗಿ ಗೋವಾದ ಮೋಪಾದಲ್ಲಿರುವ ಗ್ರೀನ್‌ಫೀಲ್ಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡಲು ಇಂದು ಕೇಂದ್ರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಈ ಹಿಂದೆ ದಿವಂಗತ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಅವರು ವಿಮಾನ ನಿಲ್ದಾಣಕ್ಕೆ ತಮ್ಮ ತಂದೆಯ ಹೆಸರನ್ನು ಇಟ್ಟರೆ ಅದು “ಸಂತೋಷದ ಕ್ಷಣ” ಎಂದು ಹೇಳಿದ್ದರು.
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನಿಲ್ದಾಣ
2016ರಲ್ಲಿ ಈ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, 2022ರ ಡಿಸೆಂಬರ್ನಲ್ಲಿ ಗೋವಾದ ಮೊಪಾದಲ್ಲಿ (Mopa) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಉದ್ಘಾಟಿಸಿದ್ದರು. ವಿಮಾನ ನಿಲ್ದಾಣವು ಮೊದಲ ಹಂತದಲ್ಲಿ ವರ್ಷಕ್ಕೆ 44 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಂಪೂರ್ಣ ಯೋಜನೆ ಪೂರ್ಣಗೊಂಡ ನಂತರ ಇದು ವರ್ಷಕ್ಕೆ ಒಂದು ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಲಿದೆ.
ಸುಮಾರು 2,870 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಿಮಾನ ನಿಲ್ದಾಣವು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್ವೇಯಲ್ಲಿ ಎಲ್ಇಡಿ ದೀಪಗಳು, ಮಳೆ ನೀರು ಕೊಯ್ಲು, ಮರುಬಳಕೆ ಸೌಲಭ್ಯಗಳೊಂದಿಗೆ ಅತ್ಯಾಧುನಿಕ ಒಳಚರಂಡಿ ಸಂಸ್ಕರಣಾ ಘಟಕವನ್ನು ಹೊಂದಿದೆ. ಇಷ್ಟೇ ಅಲ್ಲದೆ ಇನ್ನೂ ಅನೇಕ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ .
ವಿಮಾನ ನಿಲ್ದಾಣವು 3-D ಏಕಶಿಲೆಯ ಪ್ರೀಕಾಸ್ಟ್ ಕಟ್ಟಡಗಳು, ಸ್ಟೆಬಿಲ್ರೋಡ್, ರೋಬೋಮ್ಯಾಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು, 5ಜಿ ಸಕ್ರಿಯವಾದ ಐಟಿ ಮೂಲಸೌಕರ್ಯಗಳಂತಹ ಕೆಲವು ಅತ್ಯುತ್ತಮ ದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ವಿಮಾನ ನಿಲ್ದಾಣದ ಕೆಲವು ವೈಶಿಷ್ಟ್ಯಗಳಲ್ಲಿ ವಿಶ್ವದ ಅತಿದೊಡ್ಡ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ರನ್ವೇ, 14 ಪಾರ್ಕಿಂಗ್ ಬೇಗಳು ಜೊತೆಗೆ ವಿಮಾನಗಳಿಗೆ ರಾತ್ರಿ ಪಾರ್ಕಿಂಗ್ ಸೌಲಭ್ಯ, ಸ್ವಯಂ-ಬ್ಯಾಗೇಜ್ ಡ್ರಾಪ್ ಸೌಲಭ್ಯಗಳು, ಅತ್ಯಾಧುನಿಕ ಮತ್ತು ಸ್ವತಂತ್ರ ಏರ್ ನ್ಯಾವಿಗೇಷನ್ ಮೂಲಸೌಕರ್ಯಗಳು ಸೇರಿವೆ