ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ ಕೇಂದ್ರ ಸರ್ಕಾರ ಸಲಹೆ

PM Poshan ಅಕ್ಟೋಬರ್ 28 ರಂದು ತಮ್ಮ ಜಂಟಿ ಪತ್ರದಲ್ಲಿ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಅರಿವು ಮತ್ತು ಲಭ್ಯತೆಯ ಕೊರತೆಯಿಂದಾಗಿ ಸಿರಿಧಾನ್ಯ ಬಳಕೆ ಕಡಿಮೆಯಾಗಿದೆ ಎಂದು ಬರೆದಿದ್ದಾರೆ.

ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆಗೆ  ಕೇಂದ್ರ ಸರ್ಕಾರ ಸಲಹೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 31, 2021 | 11:38 AM

ದೆಹಲಿ: ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರವು, ಈಗ ಪಿಎಂ ಪೋಶಣ್ (PM Poshan) ಎಂದು ಕರೆಯಲ್ಪಡುವ ಮಧ್ಯಾಹ್ನದ ಊಟ ಯೋಜನೆಯಲ್ಲಿ ಸಿರಿಧಾನ್ಯ ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸಲು ರಾಜ್ಯಗಳನ್ನು ಒತ್ತಾಯಿಸಿದೆ. ಜೋಳ, ಬಾಜ್ರಾ ಮತ್ತು ರಾಗಿಯನ್ನು ಒಳಗೊಂಡಿರುವ ಸಿರಿಧಾನ್ಯ ಅಥವಾ ಪೋಷಕಾಂಶಯುಕ್ತ ಧಾನ್ಯಗಳು, ಖನಿಜಗಳು ಮತ್ತು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ಹಾಗೆಯೇ ಪ್ರೋಟೀನ್‌ಗಳು ಮತ್ತು ಆಂಟಿ ಆಕ್ಸಿಡಂಟ್ ನಿಂದ ಸಮೃದ್ಧವಾಗಿವೆ. ಇದು ಮಕ್ಕಳ ಪೌಷ್ಟಿಕಾಂಶದ ಫಲಿತಾಂಶವನ್ನು ಸುಧಾರಿಸಲು ಸೂಕ್ತವಾದ ಆಯ್ಕೆಯಾಗಿದೆ.

ಅಕ್ಟೋಬರ್ 28 ರಂದು ತಮ್ಮ ಜಂಟಿ ಪತ್ರದಲ್ಲಿ ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಸಂಜಯ್ ಅಗರ್ವಾಲ್ ಅವರು ಅರಿವು ಮತ್ತು ಲಭ್ಯತೆಯ ಕೊರತೆಯಿಂದಾಗಿ ಸಿರಿಧಾನ್ಯ ಬಳಕೆ ಕಡಿಮೆಯಾಗಿದೆ ಎಂದು ಬರೆದಿದ್ದಾರೆ.

ಇದನ್ನು ಸುಧಾರಿಸಲು ಭಾರತ ಸರ್ಕಾರವು ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-IV ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 38 ಪ್ರತಿಶತ ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ ಮತ್ತು 59 ಪ್ರತಿಶತ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇದು ಗಂಭೀರ ಸಂಗತಿ. ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಲು ಉಪಕ್ರಮಗಳ ಸರಣಿಗಳಲ್ಲಿ ಭಾರತ ಸರ್ಕಾರವು ಸಿರಿಧಾನ್ಯ ಸೇವನೆಗೆ ಒತ್ತು ನೀಡುತ್ತಿದೆ ಎಂದು ಅವರು ಹೇಳಿದರು.

ಅಕ್ಕಿ ಮತ್ತು ಗೋಧಿಯಿಂದ ದೂರ ಸರಿಯುವ ಮೂಲಕ ಮಧ್ಯಾಹ್ನದ ಊಟದ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಪರಿಚಯಿಸುವ ಅಗತ್ಯವನ್ನು ನೀತಿ ಆಯೋಗ ಪ್ರತಿಪಾದಿಸುತ್ತಿದೆ. 2019 ರಲ್ಲಿ ಇದು ಕರ್ನಾಟಕದ ನಾಲ್ಕು ಶಾಲೆಗಳಲ್ಲಿ ಹದಿಹರೆಯದವರಲ್ಲಿ ನಡೆಸಿದ ಅಧ್ಯಯನದ ಆಧಾರದ ಮೇಲೆ ಸಿರಿಧಾನ್ಯದ ಪ್ರಯೋಜನಗಳನ್ನು ತೋರಿಸುವ ವರದಿಯನ್ನು ಬಿಡುಗಡೆ ಮಾಡಿತು.

ಸಿರಿಧಾನ್ಯ ಉಂಡ ಮಕ್ಕಳಲ್ಲಿ ಬೆಳಣಿಗೆ ಕುಂಠಿತ ಮತ್ತು ಬಾಡಿ ಮಾಸ್ ಇಂಡೆಕ್ಸ್‌ನಲ್ಲಿ ” ಮಹತ್ವದ ಸುಧಾರಣೆ” ಕಂಡುಬಂದಿದೆ. 2023 ಸಿರಿಧಾನ್ಯಗಳ ಅಂತರರಾಷ್ಟ್ರೀಯ ವರ್ಷ ಎಂದು ಘೋಷಿಸಲು ಭಾರತವು ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಮಂಡಿಸಿತು.

“ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ (PM POSHAN) ಯೋಜನೆಯಡಿಯಲ್ಲಿ ಸಿರಿಧಾನ್ಯವನ್ನು ಪರಿಚಯಿಸುವ ಸಾಧ್ಯತೆಗಳನ್ನು ಅನ್ವೇಷಿಸಲು ನಿಮ್ಮನ್ನು ವಿನಂತಿಸಲಾಗಿದೆ, ಮೇಲಾಗಿ ಸಿರಿಧಾನ್ಯ ತಿನ್ನುವುದು ಸಾಂಸ್ಕೃತಿಕವಾಗಿ ಅಂಗೀಕರಿಸಲ್ಪಟ್ಟ ಆಹಾರ ಪದ್ಧತಿಯಾಗಿರುವ ಜಿಲ್ಲೆಗಳಲ್ಲಿ ನೀವು ವಾರದಲ್ಲೊಂದು ದಿನ ಸಿರಿಧಾನ್ಯ (ಪೌಷ್ಠಿಕ-ಧಾನ್ಯಗಳು) ಆಧಾರಿತ ಮೆನುವನ್ನು ಪರಿಚಯಿಸಬಹುದು.” ಎಂದು ಕೇಂದ್ರ ಹೇಳಿದೆ.

ಪಿಎಂ ಪೋಷಣ್ ಅಡಿಯಲ್ಲಿ, ಕೇಂದ್ರವು ಆಹಾರ ಧಾನ್ಯಗಳು ಮತ್ತು ಅವುಗಳ ಸಾಗಣೆಯ ವೆಚ್ಚವನ್ನು ಭರಿಸುತ್ತದೆ. ಮೆನುವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದರೂ, ಮಕ್ಕಳಿಗೆ ಹೆಚ್ಚಾಗಿ ಅಕ್ಕಿ ಮತ್ತು ಗೋಧಿ-ಬಳಸಿದ ಆಹಾರ ನೀಡಲಾಗುತ್ತದೆ, ಆದರೆ ಈ ಯೋಜನೆಯು ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಮತ್ತು ರಕ್ತಹೀನತೆ ಹೆಚ್ಚಿರುವವರಿಗೆ ಪೂರಕ ಪೋಷಣೆಯ ಅವಕಾಶವನ್ನು ಹೊಂದಿದೆ.

ಹೆಚ್ಚಿನ ಮಟ್ಟದ ಅಪೌಷ್ಟಿಕತೆಯನ್ನು ಪರಿಹರಿಸಲು ಸಾರಯುಕ್ತ ಅಕ್ಕಿಯ ಬಳಕೆಯನ್ನು ತ್ವರಿತಗೊಳಿಸುವಂತೆ ಕೇಂದ್ರವು ರಾಜ್ಯಗಳಿಗೆ ವಿನಂತಿಸಿದೆ. ರಾಜ್ಯಗಳಾದ್ಯಂತ ಪೂರ್ಣ ಸಾಮರ್ಥ್ಯದಲ್ಲಿ ಶಾಲೆಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಬಲವರ್ಧಿತ ಅಕ್ಕಿಯ ಸೇವನೆಯು ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ಆಶಿಸುತ್ತಿದ್ದಾರೆ.

ಇದನ್ನೂ ಓದಿ: PM Poshan scheme ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪಿಎಂ ಪೋಷಣ್ ಯೋಜನೆ ಎಂದು ಮರುನಾಮಕರಣ ಮಾಡಿದ ಕೇಂದ್ರ; ಯೋಜನೆಯಲ್ಲಿ ವಿಶೇಷ ಏನಿದೆ?

ಇದನ್ನೂ ಓದಿ: ಪುನೀತ್ ಹಠಾತ್ ನಿಧನದಿಂದ ರಾಜ್​ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದ ಅಭಿಮಾನಿ ಸಾವು!

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ