ತಪ್ಪಿದ ಭಾರೀ ಅನಾಹುತ; ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಅಪಘಾತ
ಆ ಬೆಂಗಾವಲು ವಾಹನದ ಹಿಂದೆ ಅಶ್ವಿನಿ ಚೌಬೆ ಅವರ ವಾಹನ ಬರುತ್ತಿತ್ತು. ಸ್ವಲ್ಪದರಲ್ಲೇ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಪಾಟ್ನಾ: ಕೇಂದ್ರ ರಾಜ್ಯ ಸಚಿವ ಅಶ್ವಿನಿ ಚೌಬೆ (Ashwini Choubey) ಅವರ ಬೆಂಗಾವಲು ವಾಹನವು ಭಾನುವಾರ ಅಪಘಾತಕ್ಕೀಡಾಗಿದ್ದು, ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಕೇಂದ್ರ ಸಚಿವರು ಬಕ್ಸರ್ ನಿಂದ ಪಾಟ್ನಾಗೆ ತೆರಳುತ್ತಿದ್ದಾಗ ಈ ಅವಘಡ (Accident) ಸಂಭವಿಸಿದೆ. ಈ ಅಪಘಾತದಲ್ಲಿ ಪಲ್ಟಿಯಾದ ಬೆಂಗಾವಲು ವಾಹನವನ್ನು ಪರಿಶೀಲಿಸುತ್ತಿರುವ ವಿಡಿಯೋವನ್ನು ಸಚಿವ ಅಶ್ವಿನಿ ಚೌಬೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆ ಬೆಂಗಾವಲು ವಾಹನದ ಹಿಂದೆ ಅಶ್ವಿನಿ ಚೌಬೆ ಅವರ ವಾಹನ ಬರುತ್ತಿತ್ತು. ಸ್ವಲ್ಪದರಲ್ಲೇ ಭಾರೀ ಅವಘಡವೊಂದು ತಪ್ಪಿದಂತಾಗಿದೆ.
ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಸಚಿವ ಅಶ್ವಿನಿ ಚೌಬೆ, ಬಕ್ಸರ್‌ನಿಂದ ಪಾಟ್ನಾಗೆ ತೆರಳುತ್ತಿದ್ದ ನಮ್ಮ ಬೆಂಗಾವಲು ವಾಹನ ಮಥಿಲ-ನಾರಾಯಣಪುರ ರಸ್ತೆಯ ಸೇತುವೆಯ ಕಾಲುವೆಯಲ್ಲಿ ಅಪಘಾತಕ್ಕೀಡಾಗಿದೆ. ದೇವರ ದಯೆಯಿಂದ ಎಲ್ಲರೂ ಕ್ಷೇಮವಾಗಿದ್ದಾರೆ. ಗಾಯಗೊಂಡ ಪೊಲೀಸರು ಮತ್ತು ಚಾಲಕನೊಂದಿಗೆ ದುಮ್ರಾವ್ ಸದರ್ ಆಸ್ಪತ್ರೆಗೆ ತೆರಳಿದ್ದೇನೆ ಎಂದಿದ್ದಾರೆ.
बक्सर से पटना जाने के क्रम में डुमराव के मठीला-नारायणपुर पथ के सड़की पुल के नहर में कारकेड में चल रही क़ोरानसराय थाने की गाड़ी दुर्घटनाग्रस्त हो गई है। प्रभु श्रीराम की कृपा से सभी कुशल हैं। घायल पुलिसकर्मियों एवं चालक को लेकर डुमराव सदर अस्पताल जा रहा हूं। pic.twitter.com/ybTVi6jn5v
— Ashwini Kr. Choubey (@AshwiniKChoubey) January 15, 2023
ಇದನ್ನೂ ಓದಿ: Pokhara Air Crash ಪೋಖರಾದಲ್ಲಿ ನಡೆದದ್ದು ನೇಪಾಳದಲ್ಲಿ 30 ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ವಿಮಾನ ಅಪಘಾತ
ಪೊಲೀಸ್ ಸಿಬ್ಬಂದಿ ಮತ್ತು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ದುಮ್ರಾವ್ ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಹೆಚ್ಚಿನ ಗಾಯಗಳಾಗಿದ್ದ ಇಬ್ಬರು ಪೊಲೀಸರನ್ನು ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳಿಗೆ ಸ್ಥಳಾಂತರಿಸಲಾಯಿತು.