ನವದೆಹಲಿ, ಡಿಸೆಂಬರ್ 14: ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಬಂಧನವಾದ ವಿಚಾರ ರಾಜಕೀಯ ಚರ್ಚೆಗೂ ಗ್ರಾಸವಾಗಿದೆ. ಸದ್ಯ ಅಲ್ಲು ಅರ್ಜುನ್ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ, ಅವರ ಬಂಧನ ಸಂಬಂಧ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವ ಬಂಡಿ ಸಂಜಯ್ ತಿರುಗೇಟು ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ಭ್ರಷ್ಟರಿಗೇನು ಗೊತ್ತು ಅಲ್ಲು ಅರ್ಜುನ್ ವ್ಯಕ್ತಿತ್ವ ಎಂಬ ಅರ್ಥದಲ್ಲಿ ಸಂದೇಶ ಪ್ರಕಟಿಸಿದ್ದಾರೆ.
ಚಲನಚಿತ್ರವು ಯಾವಾಗಲೂ ಭಾವನೆಗಳ ಯುದ್ಧಭೂಮಿಯಾಗಿದೆ. ‘ಸಂದೇಶ್ ಆತೆ ಹೇ’ ಹಾಡಿನಿಂದ ತೊಡಗಿ ಅನೇಕ ಚಲನಚಿತ್ರಗಳು ದೇಶದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೆ, ದೇಶಭಕ್ತಿ ಮತ್ತು ಏಕತೆಯನ್ನು ಪ್ರೇರೇಪಿಸಿವೆ. ಅಲ್ಲು ಅರ್ಜುನ್‌ನಂತಹ ನಟರು ಲಕ್ಷಾಂತರ ಜನರಿಗೆ ಪ್ರೇರೇಪಣೆಯಾಗಿದ್ದಾರೆ. ಸರ್ಕಾರಿ ಕಚೇರಿಯನ್ನು ನಗದು ನೀಡುವ ಹಸುವಿನಂತೆ ಪರಿಗಣಿಸುವ, ಲೂಟಿ ಮಾಡುವ, ಭ್ರಷ್ಟಾಚಾರದಲ್ಲಿ ಸಿಲುಕಿಹಾಕಿಕೊಳ್ಳುವ ನಾಯಕರಿಗಿಂತ ಅಲ್ಲು ಅರ್ಜುನ್‌ನಂತಹ ನಟರು ಎಷ್ಟೋ ವಾಸಿ. ದೇಶಪ್ರೇಮ ಎಂಬುದು ಭಾರತ-ಪಾಕ್ ಗಡಿಯಲ್ಲಿ ಮಾತ್ರವಲ್ಲ, ಅದು ಇಡೀ ರಾಷ್ಟ್ರವನ್ನೇ ಪ್ರೇರೇಪಿಸುತ್ತದೆ. ಬಹುಶಃ ಕಾಂಗ್ರೆಸ್ ಲೂಟಿ ನಿಲ್ಲಿಸಿ ಇದನ್ನು ಕಲಿಯಲು ಪ್ರಾರಂಭಿಸಬೇಕು ಎಂದು ಬಂಡಿ ಸಂಜಯ್ ಉಲ್ಲೇಖಿಸಿದ್ದಾರೆ
Cinema has always been a battlefield of emotions, inspiring patriotism and unity – from ‘Sandese Aate Hain’ songs to URI – many films moved the nation.
Actors like Allu Arjun motivate millions, far more than leaders who treat public office like a cash cow, getting caught with… pic.twitter.com/3Vb9IvB7Yv
— Bandi Sanjay Kumar (@bandisanjay_bjp) December 13, 2024
ಥಿಯೇಟರ್‌ಗೆ ಅಲ್ಲು ಅರ್ಜುನ್ ಭೇಟಿ ನೀಡಿದ್ದ ವೇಳೆ ಸಂಭವಿಸಿದ್ದ ಕಾಲ್ತುಳಿತ ವಿಚಾರವಾಗಿ ಮಾತನಾಡಿದ್ದ ರೇವಂತ್ ರೆಡ್ಡಿ, ಸೆಲೆಬ್ರಿಟಿ ಸ್ಥಾನಮಾನ ಇದ್ದ ಮಾತ್ರಕ್ಕೆ ಯಾರೂ ಕಾನೂನನ್ನು ಮೀರಲಾಗದು. ಈ ದೇಶದಲ್ಲಿ ಸಲ್ಮಾನ್ ಖಾನ್ ಆಗಲಿ ಅಥವಾ ಯಾರೇ ಆಗಲಿ ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನನ್ನು ಪಾಲಿಸದಿದ್ದರೆ ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಜೈಲಿನಿಂದ ಹೊರ ಬಂದ ಅಲ್ಲು ಅರ್ಜುನ್ ಮೊದಲ ರಿಯಾಕ್ಷನ್; ದೂರಿದ್ದು ಯಾರನ್ನ ಗೊತ್ತೇ?
ನಂತರ ಆ ಬಗ್ಗೆ ಸ್ಪಷ್ಟನೆ ನೀಡಿದ್ದ ರೇವಂತ್ ರೆಡ್ಡಿ, ಯಾರನ್ನೂ ವೈಯಕ್ತಿಕ ಗುರಿಯಾಗಿಸಿ ಆ ಹೇಳಿಕೆ ನೀಡಿಲ್ಲ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಅನುಷ್ಠಾನ ವಿಚಾರದಲ್ಲಿ ಕಳಕಳಿಯಿಂದ ಹೇಳಿದ್ದಷ್ಟೇ ಎಂದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ