AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಿಷ್ಟ ಬೆಲೆಯಲ್ಲಿ ಕುಡಿಯುವ ನೀರು ಒದಗಿಸುವ ಕೃತಕ ಬುದ್ಧಿಮತ್ತೆ ಚಾಲಿತ ನವ್ಯೋದ್ಯಮ ಲಾಂಚ್ ಮಾಡಿದರು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್

ಗುರುಗ್ರಾಮ್ ಮೂಲದ ಕಂಪನಿಯು, ಪೇಟೆಂಟ್ ಪಡೆಯಲಾದ 'ಕ್ಲೇರ್ವಾಯಂಟ್' ವ್ಯವಸ್ಥೆಯು ಶುದ್ಧೀಕರಣ ವ್ಯವಸ್ಥೆಗಳನ್ನು ಗರಿಷ್ಠಗೊಳಿಸಲು ಮತ್ತು ಭವಿಷ್ಯದಲ್ಲಿ ಘಟಕ ಸ್ಥಗಿತವಾಗುವುದನ್ನು ಅಂದಾಜಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಇದರಿಂದಾಗಿ, ಪ್ರತಿ ಘಟಕವನ್ನೂ ನೈಜ ಸಮಯದಲ್ಲಿ ದೂರದಿಂದ ನಿರ್ವಹಿಸಲು, ನವೀಕರಿಸಲು ಮತ್ತು ದುರಸ್ತಿ ಮಾಡಲು ಅನುವಾಗುತ್ತದೆ.

ಕನಿಷ್ಟ ಬೆಲೆಯಲ್ಲಿ ಕುಡಿಯುವ ನೀರು ಒದಗಿಸುವ ಕೃತಕ ಬುದ್ಧಿಮತ್ತೆ ಚಾಲಿತ ನವ್ಯೋದ್ಯಮ ಲಾಂಚ್ ಮಾಡಿದರು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್
ನವೀನ ತಂತ್ರಜ್ಞಾನವನ್ನು ಲಾಂಚ್ ಮಾಡುತ್ತಿರುವ ಸಚಿವ ಡಾ ಜಿತೇಂದ್ರ ಪ್ರಸಾದ್
TV9 Web
| Edited By: |

Updated on:Jan 11, 2022 | 11:21 PM

Share

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವರು (ಸ್ವತಂತ್ರ ಉಸ್ತುವಾರಿ) ಹಾಗೂ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಐಐಟಿ ಹಳೆಯ ವಿದ್ಯಾರ್ಥಿಗಳು ನವೀನ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣಕ್ಕಾಗಿ ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ನವೋದ್ಯಮಕ್ಕೆ ಮಂಗಳವಾರ ಚಾಲನೆ ನೀಡಿದರು. ಮಾರುಕಟ್ಟೆ ಬೆಲೆಗಿಂತ ಸಾಕಷ್ಟು ಕಡಿಮೆ ಬೆಲೆಯಲ್ಲಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವ ಗುರಿಯನ್ನು ಈ ನವೋದ್ಯಮವು ಹೊಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಕೃತಕ ಬುದ್ಧಿಮತ್ತೆ (ಎಐ) ಚಾಲಿತ ನವೋದ್ಯಮ ಉಪಕ್ರಮವು ಇತರ ನವೋದ್ಯಮಗಳಿಗೂ ಪ್ರೇರಣೆಯಾಗಬೇಕು ಎಂದು ಕರೆ ನೀಡಿದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ʻತಂತ್ರಜ್ಞಾನ ಅಭಿವೃದ್ಧಿ ಮಂಡಳಿʼ (ಟಿಡಿಬಿ) ಮತ್ತು ಗುರುಗ್ರಾಮ್ ಮೂಲದ ಐಐಟಿ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿದ ತಂತ್ರಜ್ಞಾನ ಆಧರಿತ ನವೋದ್ಯಮ ʻಮೆಸರ್ಸ್ ಸ್ವಜಲ್ ವಾಟರ್ ಪ್ರೈವೇಟ್ ಲಿಮಿಟೆಡ್ʼ ನಡುವೆ ತಿಳಿವಳಿಕೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿದೆ. ಕೊಳಗೇರಿಗಳು, ಹಳ್ಳಿಗಳು ಮತ್ತು ಅತ್ಯಧಿಕ ಬಳಕೆಯ ಪ್ರದೇಶಗಳಿಗೆ ಸೌರಶಕ್ತಿ ಆಧರಿತ ನೀರಿನ ಶುದ್ಧೀಕರಣ ಘಟಕದ ಮೂಲಕ ಸಮುದಾಯಗಳಿಗೆ ಕೈಗೆಟುಕುವ ಬೆಲೆಯಲ್ಲಿ ವಿಶ್ವಾಸಾರ್ಹ ಶುದ್ಧ ಕುಡಿಯುವ ನೀರನ್ನು ಲಭ್ಯವಾಗುವಂತೆ ಮಾಡಲು ಕಂಪನಿಯು ʻಐಒಟಿʼ (ಇಂಟರ್‌ನೆಟ್‌ ಆಫ್‌ ಥಿಂಗ್ಸ್‌) ಸಕ್ರಿಯಗೊಳಿಸಿದ ನವೀನ ತಂತ್ರಜ್ಞಾನಗಳ ಮೇಲೆ ಗಮನಹರಿಸಿದೆ.

ಪ್ರಧಾನಿ ಮೋದಿ ಘೋಷಿಸಿದ ʻಜಲ ಜೀವನ್‌ ಮಿಷನ್ʼ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 75ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ʻಜಲ ಜೀವನ್‌ ಮಿಷನ್ʼ ಅಡಿಯಲ್ಲಿ ಕೇವಲ ಎರಡು ವರ್ಷಗಳಲ್ಲೇ ನಾಲ್ಕೂವರೆ ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿಗಳಿಂದ ನೀರು ಪಡೆಯಲು ಪ್ರಾರಂಭಿಸಿವೆ,’ ಎಂದು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ನಲ್ ಸೆ ಜಲ್‘ ನ ದೂರದೃಷ್ಟಿ ಮತ್ತು ಯೋಜನೆಗೆ ಧನಾತ್ಮಕವಾಗಿ ಕೊಡುಗೆ ನೀಡುತ್ತಿದೆ ಎಂದರು.

ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಲಿ-ಬೋರ್ನ್​ ಸಮೀಕ್ಷೆ ತಂತ್ರಜ್ಞಾನ ಉದ್ಘಾಟಿಸಿದ್ದರು

ʻಸಿಎಸ್‌ಐಆರ್ʼ ಮತ್ತು ಹೈದರಾಬಾದ್‌ನ ʻಎನ್‌ಜಿಆರ್‌ಐʼ ಅಭಿವೃದ್ಧಿಪಡಿಸಿದ ಅಂತರ್ಜಲ ನಿರ್ವಹಣೆಗಾಗಿ ಅತ್ಯಾಧುನಿಕ ʻಹೆಲಿ-ಬೋರ್ನ್ʼ ಸಮೀಕ್ಷೆ ತಂತ್ರಜ್ಞಾನಕ್ಕೆ ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಕಳೆದ ಅಕ್ಟೋಬರ್‌ನಲ್ಲಿ ಜೋಧ್‌ಪುರದಲ್ಲಿ ಚಾಲನೆ ನೀಡಿದ್ದನ್ನು ಸ್ಮರಿಸಬಹುದು. ಆರಂಭಿಕವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಈ ಅತ್ಯಾಧುನಿಕ ʻಹೆಲಿ-ಬೋರ್ನ್ʼ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.

ನೀರಿನ ಎಟಿಎಮ್​​ಗಳು!

ಗುರುಗ್ರಾಮ್ ಮೂಲದ ಕಂಪನಿಯು, ಪೇಟೆಂಟ್ ಪಡೆಯಲಾದ ‘ಕ್ಲೇರ್ವಾಯಂಟ್’ ವ್ಯವಸ್ಥೆಯು ಶುದ್ಧೀಕರಣ ವ್ಯವಸ್ಥೆಗಳನ್ನು ಗರಿಷ್ಠಗೊಳಿಸಲು ಮತ್ತು ಭವಿಷ್ಯದಲ್ಲಿ ಘಟಕ ಸ್ಥಗಿತವಾಗುವುದನ್ನು ಅಂದಾಜಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ. ಇದರಿಂದಾಗಿ, ಪ್ರತಿ ಘಟಕವನ್ನೂ ನೈಜ ಸಮಯದಲ್ಲಿ ದೂರದಿಂದ ನಿರ್ವಹಿಸಲು, ನವೀಕರಿಸಲು ಮತ್ತು ದುರಸ್ತಿ ಮಾಡಲು ಅನುವಾಗುತ್ತದೆ. ʻನೀರಿನ ಎಟಿಎಂʼಗಳ ರೂಪದಲ್ಲಿ ಶುದ್ಧ ಕುಡಿಯುವ ನೀರಿನ ಪರಿಹಾರಗಳನ್ನೂ ಅವರು ಅಭಿವೃದ್ಧಿಪಡಿಸಿದ್ದಾರೆ. ಇದು ʻಇಂಟರ್ನೆಟ್ ಆಫ್ ಥಿಂಗ್ಸ್ʼ (ಐಒಟಿ) ತಂತ್ರಜ್ಞಾನವನ್ನು ಸೌರ ಶಕ್ತಿಯೊಂದಿಗೆ ಸಂಯೋಜಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತದೆ.

ಪ್ರತಿ ಲೀಟರ್​ ನೀರಿನ ಬೆಲೆ ಕೇವಲ ರೂ. 0.25 ಮಾತ್ರ ಆಗಬಹುದು!!

ʻಸ್ವಜಲ್‌ʼನ ಈ ಗ್ರಾಮೀಣ ʻನೀರಿನ ಎಟಿಎಂʼಗಳು, ಸ್ಥಳವನ್ನು ಅವಲಂಬಿಸಿರುವ ನದಿಗಳು, ಬಾವಿಗಳು, ಕೊಳಗಳು ಅಥವಾ ಅಂತರ್ಜಲದಿಂದ ನೀರನ್ನು ಪಂಪ್ ಮಾಡಲು ಸೌರಶಕ್ತಿಯನ್ನು ಬಳಸುತ್ತವೆ. ನಂತರ ನೀರನ್ನು ಕುಡಿಯಲು ಶುದ್ಧ ಮತ್ತು ಆರೋಗ್ಯಕರವಾಗಿಸಲು ಸೂಕ್ತ ತಂತ್ರಜ್ಞಾನದೊಂದಿಗೆ ಸಂಸ್ಕರಿಸಲಾಗುತ್ತದೆ. ಈ ಆವಿಷ್ಕಾರದೊಂದಿಗೆ, ಶುದ್ಧೀಕರಿಸಿದ ನೀರಿನ ವೆಚ್ಚವನ್ನು ಪ್ರತಿ ಲೀಟರ್‌ಗೆ 25 ಪೈಸೆಯಷ್ಟು ಕನಿಷ್ಠ ಮೊತ್ತಕ್ಕೆ ಇಳಿಸಬಹುದಾಗಿದೆ.

ಹಳ್ಳಿಗಳು ಮತ್ತು ದೂರದ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಾದ – ಐಒಟಿ, ಕೃತಕ ಬುದ್ಧಿಮತ್ತೆ ಜೊತೆ ನವೀಕರಿಸಬಹುದಾದ ಸೌರ ಶಕ್ತಿಯ ಸಂಯೋಜನೆಯೇ ಈ ಯೋಜನೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಹಾಗೂ ʻಟಿಡಿಬಿʼ ಅಧ್ಯಕ್ಷ ಡಾ. ಶ್ರೀವಾರಿ ಚಂದ್ರಶೇಖರ್ ಹೇಳಿದರು.

24/7 ಶುದ್ಧ ಕುಡಿಯುವ ನೀರು!

ಈ ಯೋಜನೆಯು ಸಮುದಾಯಗಳಿಗೆ ಸಮುದಾಯ ಮಾಲೀಕತ್ವದೊಂದಿಗೆ ತಮ್ಮ ಕುಡಿಯುವ ನೀರಿನ ಅಗತ್ಯಗಳನ್ನು ಯೋಜಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅಧಿಕಾರ ನೀಡುತ್ತದೆ. ಜೊತೆಗೆ ವರ್ಷದ ಎಲ್ಲಾ 365 ದಿನಗಳಲ್ಲಿ ಕೈಗೆಟುಕುವ ದರದ, ವಿಶ್ವಾಸಾರ್ಹ ಮತ್ತು ಶುದ್ಧ ಕುಡಿಯುವ ನೀರನ್ನು ದಿನದ 24 ಗಂಟೆ ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ʻಐಪಿ ಮತ್ತು ಟಿಎಎಫ್‌ಎಸ್ʼ ಅಧಿಕಾರಿ ಹಾಗೂ ʻಟಿಡಿಬಿʼಯ ಕಾರ್ಯದರ್ಶಿ ಶ್ರೀ ರಾಜೇಶ್ ಕೆ.ಆರ್. ಪಾಠಕ್ ಅವರು ಹೇಳಿದರು.

ಸಾಮೂಹಿಕ ಉಪಯುಕ್ತತೆಗಾಗಿ ಇಂತಹ ನವೀನ ತಂತ್ರಜ್ಞಾನಗಳನ್ನು ಬೆಂಬಲಿಸಲು ʻಟಿಡಿಬಿʼ ಸದಾ ಬದ್ಧವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಇದನ್ನೂ ಓದಿ:  ಯುನೆಸ್ಕೋ ವೆಬ್​ಸೈಟ್​ನಲ್ಲಿ ಹಿಂದಿ ಭಾಷೆಗೆ ಮನ್ನಣೆ; ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದ ಕೇಂದ್ರ ಸಚಿವ ಕಿಶನ್ ರೆಡ್ಡಿ

Published On - 11:21 pm, Tue, 11 January 22

ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಎಚ್ಚರ, ದಕ್ಷಿಣ ದಿಕ್ಕಿಗೆ ತಿರುಗಿ ನಮಸ್ಕಾರ ಮಾಡಲೇಬಾರದು! ಕಾರಣ ಇಲ್ಲಿದೆ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಮಕರ ರಾಶಿಗೆ ಶುಕ್ರ ಪ್ರವೇಶ: ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು