Rajnath Singh ಕೇಂದ್ರ ಸಚಿವ ರಾಜನಾಥ್ ಸಿಂಗ್‌ಗೆ ಕೊವಿಡ್-19 ಸೋಂಕು ದೃಢ

| Updated By: ರಶ್ಮಿ ಕಲ್ಲಕಟ್ಟ

Updated on: Jan 10, 2022 | 5:08 PM

ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು ಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ. ಅದೇ ವೇಳೆ ತಮ್ಮ ಸಂಪರ್ಕಕ್ಕೆ ಬಂದವರು ತಮ್ಮನ್ನು ಪ್ರತ್ಯೇಕಿಸಿ ಪರೀಕ್ಷೆಗೆ ಒಳಪಡಿಸುವಂತೆ ರಾಜನಾಥ್ ಸಿಂಗ್ ವಿನಂತಿಸಿದ್ದಾರೆ.

Rajnath Singh ಕೇಂದ್ರ ಸಚಿವ ರಾಜನಾಥ್ ಸಿಂಗ್‌ಗೆ ಕೊವಿಡ್-19 ಸೋಂಕು ದೃಢ
ರಾಜನಾಥ್ ಸಿಂಗ್
Follow us on

ದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಕೊವಿಡ್-19 (Covid-19) ಸೋಂಕಿಗೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಅವರು ಪ್ರಸ್ತುತ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು ಮನೆಯಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ ಎಂದು ಹಿರಿಯ ಬಿಜೆಪಿ (BJP) ನಾಯಕರು ಹೇಳಿದ್ದಾರೆ. ಅದೇ ವೇಳೆ ತಮ್ಮ ಸಂಪರ್ಕಕ್ಕೆ ಬಂದವರು ತಮ್ಮನ್ನು ಪ್ರತ್ಯೇಕಿಸಿ ಪರೀಕ್ಷೆಗೆ ಒಳಪಡಿಸುವಂತೆ ಸಿಂಗ್ ವಿನಂತಿಸಿದ್ದಾರೆ.  ನಾನು ಇಂದು ಸೌಮ್ಯ ರೋಗಲಕ್ಷಣಗಳೊಂದಿಗೆ ಕೊರೊನಾಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿರುವ ಪ್ರತಿಯೊಬ್ಬರೂ ತಮ್ಮನ್ನು ಪ್ರತ್ಯೇಕಿಸಲು ಮತ್ತು ಪರೀಕ್ಷಿಸಲು ನಾನು ವಿನಂತಿಸುತ್ತೇನೆ ಎಂದು ಸಚಿವರು ಟ್ವಿಟರ್‌ನಲ್ಲಿ ಬರೆದಿದ್ದಾರೆ.


ಏತನ್ಮಧ್ಯೆ, ಭಾರತವು 24 ಗಂಟೆಗಳ ಅವಧಿಯಲ್ಲಿ 1,79,723 ಹೊಸ ಕೊರೊನಾವೈರಸ್ ಪ್ರಕರಣಗಳನ್ನು ವರದಿ ಮಾಡಿದೆ. ಇದು ದೇಶದಲ್ಲಿ ದೈನಂದಿನ ಧನಾತ್ಮಕ ಪ್ರಮಾಣವನ್ನು ಶೇ 13.29ಕ್ಕೇರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.  ಕೊವಿಡ್ -19 ರ ಒಮಿಕ್ರಾನ್ ರೂಪಾಂತರದ 4,033 ಪ್ರಕರಣಗಳು ಇಲ್ಲಿಯವರೆಗೆ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು (1,216), ರಾಜಸ್ಥಾನ (529) ಮತ್ತು ದೆಹಲಿ (513) ನಂತರದ ಸ್ಥಾನದಲ್ಲಿವೆ.

ಹೊಸ ರೂಪಾಂತರದಿಂದ ಸೋಂಕಿಗೆ ಒಳಗಾದ ಸುಮಾರು 1,552 ರೋಗಿಗಳು ಇಲ್ಲಿಯವರೆಗೆ ಚೇತರಿಸಿಕೊಂಡಿದ್ದಾರೆ.ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 7,23,619 ರಷ್ಟಿದೆ, ಇದು ಭಾರತದ ಒಟ್ಟು ಪ್ರಕರಣಗಳ ಶೇ 2.03 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ಸಾಪ್ತಾಹಿಕ ಸಕಾರಾತ್ಮಕತೆಯ ದರವು ಪ್ರಸ್ತುತ ಶೇ  7.29 ರಷ್ಟಿದ್ದರೆ, ದೈನಂದಿನ ಧನಾತ್ಮಕತೆಯ ದರವು ಶೇ 13.29 ರಷ್ಟಿದೆ. ದೇಶದಲ್ಲಿ ಕೊವಿಡ್ -19 ರ ಒಟ್ಟು ಪ್ರಕರಣಗಳು 35,528,004 ಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ 46,569 ರೋಗಿಗಳು ಚೇತರಿಸಿಕೊಂಡಿದ್ದಾರೆ. ಕೊವಿಡ್-19 ಚೇತರಿಸಿಕೊಂಡ ರೋಗಿಗಳ ಒಟ್ಟು ಸಂಖ್ಯೆ ಈಗ 3,45,00,172 ಆಗಿದೆ. ಚೇತರಿಕೆ ದರವು ಶೇ 96.62ನಲ್ಲಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 146 ಹೊಸ ಸಾವುಗಳು ವರದಿಯಾಗಿದ್ದು, ಸಾವಿನ ಸಂಖ್ಯೆ 4,83,936 ಕ್ಕೆ ತಲುಪಿದೆ.

ಇದನ್ನೂ ಓದಿ: ‘ಸರ್ಕಾರವೇ ಮೇಕೆದಾಟು ಪಾದಯಾತ್ರೆಯಲ್ಲಿ ಕೊರೊನಾ ಹಬ್ಬಿಸುತ್ತಿದೆ; ಡಿಕೆ ಶಿವಕುಮಾರ್ ಬಳಿ ಸೋಂಕಿತನನ್ನು ಕಳಿಸಲಾಗಿದೆ’

Published On - 4:40 pm, Mon, 10 January 22