ಎಂವಿ ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಹಾಕಿಕೊಂಡಿದೆ ಎಂದು ಲೇವಡಿ ಮಾಡಿದ ಅಖಿಲೇಶ್ ಯಾದವ್, ನಿಮ್ಮಂತವರು ಇದೇ ಬಯಸುತ್ತಾರೆ ಎಂದ ಕೇಂದ್ರ ಸಚಿವ

| Updated By: ರಶ್ಮಿ ಕಲ್ಲಕಟ್ಟ

Updated on: Jan 17, 2023 | 1:46 PM

MV Ganga Vilas ಅಖಿಲೇಶ್ ಟೀಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ನಿಮ್ಮಂತಹ ವ್ಯಕ್ತಿ ಒಳ್ಳೆಯ ಕಾರ್ಯಗಳಲ್ಲಿ ಏನಾದರೂ ತಪ್ಪಾಗಲಿ ಎಂದು ಹಗಲಿರುಳು ದೇವರನ್ನು ಪ್ರಾರ್ಥಿಸುತ್ತಲೇ ಇರುತ್ತಾನೆ" ಎಂದು ಹೇಳಿದರು

ಎಂವಿ ಗಂಗಾ ವಿಲಾಸ್ ಕ್ರೂಸ್ ಸಿಕ್ಕಿಹಾಕಿಕೊಂಡಿದೆ ಎಂದು ಲೇವಡಿ ಮಾಡಿದ ಅಖಿಲೇಶ್ ಯಾದವ್, ನಿಮ್ಮಂತವರು ಇದೇ ಬಯಸುತ್ತಾರೆ ಎಂದ ಕೇಂದ್ರ ಸಚಿವ
ಎಂವಿ ಗಂಗಾ ವಿಲಾಸ್
Follow us on

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಚಾಲನೆ ನೀಡಿದ ಐಷಾರಾಮಿ ಕ್ರೂಸ್ ಎಂವಿ ಗಂಗಾ ವಿಲಾಸ್ (cruise MV Ganga Vilas) ಮೂರನೇ ದಿನ ಬಿಹಾರದಲ್ಲಿ ಸಿಲುಕಿಕೊಂಡಿದೆ ಎಂಬುದಕ್ಕೆ ನಗೆಯಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್​​​​ಗೆ (Akhilesh Yadav) ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ತಿರುಗೇಟು ನೀಡಿದ್ದಾರೆ. ಆಳವಿಲ್ಲದ ನೀರಿನಿಂದಾಗಿ ಬಿಹಾರದ ಛಪರಾದಲ್ಲಿ ಗಂಗಾ ವಿಲಾಸ್ ಸಿಕ್ಕಿಹಾಕಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಖಿಲೇಶ್ ಅಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ವಿಮಾನದ ಮೂಲಕ ‘ವಾಯು ವಿಲಾಸ್’ ನೀಡಬಹುದೇ. ಈಗ ಗೊತ್ತಾಯ್ತಾ ಕ್ರೂಸ್ ಮತ್ತು ಬೋಟ್​​ಗಿರುವ ಅಂತರ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು. ಆದಾಗ್ಯೂ, ಕ್ರೂಸ್ ವೇಳಾಪಟ್ಟಿಯ ಪ್ರಕಾರ ಪಾಟ್ನಾವನ್ನು ತಲುಪಿದೆ ಮತ್ತು ಛಪರಾದಲ್ಲಿ ಸಿಲುಕಿಕೊಂಡಿಲ್ಲ ಎಂದು ಭಾರತೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (IWAI) ಹೇಳಿದೆ. ಐಡಬ್ಲ್ಯುಎಐ ಅಧ್ಯಕ್ಷ ಸಂಜಯ್ ಬಂಡೋಪಾಧ್ಯಾಯ, ನಿಗದಿತ ವೇಳಾಪಟ್ಟಿಯಂತೆ ಹಡಗು ತನ್ನ ಮುಂದಿನ ಪ್ರಯಾಣವನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಸ್ಥಳೀಯ ಪತ್ರಕರ್ತರು ಈ ಹಿಂದೆ ತಪ್ಪಾಗಿ ವರದಿ ಮಾಡಿದ್ದರು ಎಂದು ಛಪರಾದ ಸಿಒ ಸತೇಂದ್ರ ಸಿಂಗ್ ಹೇಳಿದ್ದಾರೆ.

“ಸ್ಥಳೀಯ ಪತ್ರಕರ್ತರು ನಾನು ಹೇಳಿದ್ದನ್ನು ತಪ್ಪಾಗಿ ಉಲ್ಲೇಖಿಸಿದ್ದಾರೆ, ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ದೋಣಿಗಳು ಸ್ಥಳದಲ್ಲಿವೆ ಎಂದು ನಾನು ಹೇಳಿದ್ದೇನೆ. ಯಾವುದೇ ರೀತಿಯ ಅಡೆತಡೆಗಳಿಲ್ಲ” ಎಂದು ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ
ಹಡಗಿನ ನಿರ್ವಾಹಕರು ಸಹ ಅದು ಸಿಲುಕಿಕೊಂಡಿಲ್ಲ ಮತ್ತು ತಾಂತ್ರಿಕವಾಗಿ ದಡಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆಯಲ್ಲಿ ಭದ್ರತಾ ವೈಫಲ್ಯ; ಓಡಿಬಂದು ರಾಹುಲ್ ಗಾಂಧಿಯನ್ನು ತಬ್ಬಿಕೊಂಡ ಯುವಕ

ಎಲ್ಲಿ ನದಿ ಆಳವಿಲ್ಲವೋ ಅಲ್ಲಿ ಇಳಿಯಲು ಮತ್ತು ಸೈಟ್ ನೋಡಲು ಆಳವಿಲ್ಲದ ದೋಣಿಗಳನ್ನು ಬಳಸಬೇಕು. ಮುಖ್ಯ ಹಡಗು ನೀರು ಇರುವ ಮುಖ್ಯ ಚಾನಲ್ನಲ್ಲಿ ಉಳಿಯುತ್ತದೆ. ಇದು ಇಲ್ಲಿ ಸಂಭವಿಸಿದೆ. ಇದು ಸಾಮಾನ್ಯ ವಿಷಯ” ಎಂದು ಎಕ್ಸೊಟಿಕ್ ಹೆರಿಟೇಜ್ ಗ್ರೂಪ್‌ನ ಅಧ್ಯಕ್ಷ ರಾಜ್ ಸಿಂಗ್ ಎಎನ್‌ಐಗೆ ತಿಳಿಸಿದ್ದಾರೆ.

ಇತ್ತ, ಅಖಿಲೇಶ್ ಟೀಕೆಗೆ ತಿರುಗೇಟು ನೀಡಿದ ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, “ನಿಮ್ಮಂತಹ ವ್ಯಕ್ತಿ ಒಳ್ಳೆಯ ಕಾರ್ಯಗಳಲ್ಲಿ ಏನಾದರೂ ತಪ್ಪಾಗಲಿ ಎಂದು ಹಗಲಿರುಳು ದೇವರನ್ನು ಪ್ರಾರ್ಥಿಸುತ್ತಲೇ ಇರುತ್ತಾನೆ” ಎಂದು ಹೇಳಿದರು. “ನಿಮ್ಮ ಮಾಹಿತಿಗಾಗಿ ಕ್ರೂಸ್ ಸಮಯಕ್ಕೆ ಸರಿಯಾಗಿ ಪಾಟ್ನಾವನ್ನು ತಲುಪಿದೆ ಮತ್ತು ಅದರ ಮುಂದಿನ ಗಮ್ಯಸ್ಥಾನವಾದ ಬೇಗುಸರಾಯ್ ಅನ್ನು ಸಮಯಕ್ಕೆ ತಲುಪುತ್ತದೆ ಎಂದು ಗಿರಿರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Tue, 17 January 23