ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಮುಂದಿನ ತಿಂಗಳು ಜಾರಿ; ಯುವ ಉದ್ಯೋಗಿಗಳಿಗೆ ಪ್ರಯೋಜನ

ಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ, ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುತ್ತದೆ. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್​ಗೆ ತೆರಳಿ ಅಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ.

ಭಾರತ, ಬ್ರಿಟನ್ ಹೊಸ ವೀಸಾ ಯೋಜನೆ ಮುಂದಿನ ತಿಂಗಳು ಜಾರಿ; ಯುವ ಉದ್ಯೋಗಿಗಳಿಗೆ ಪ್ರಯೋಜನ
ನರೇಂದ್ರ ಮೋದಿ ಮತ್ತು ರಿಷಿ ಸುನಕ್ (ಪಿಎಂಒ ಸಂಹಗ್ರಹ ಚಿತ್ರ)Image Credit source: PMO
Follow us
TV9 Web
| Updated By: Ganapathi Sharma

Updated on: Jan 17, 2023 | 11:52 AM

ನವದೆಹಲಿ: ಭಾರತದ (India) 18ರಿಂದ 30 ವರ್ಷ ವಯಸ್ಸಿನ ಯುವ ವೃತ್ತಿಪರರಿಗೆ ಎರಡು ವರ್ಷಗಳ ಕಾಲ ಬ್ರಿಟನ್​ನಲ್ಲಿ ನೆಲೆಸಲು ಮತ್ತು ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ‘ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ’ 2023ರ ಫೆಬ್ರವರಿ 28ರಿಂದ ಜಾರಿಗೆ ಬರಲಿದೆ. ಇದರಿಂದ ಸಾವಿರಾರು ಯುವ ವೃತ್ತಿಪರರಿಗೆ ನೆರವಾಗಲಿದೆ. ಯೋಜನೆಯಡಿ, ಬ್ರಿಟನ್​ನ ವೃತ್ತಿಪರರು ಉದ್ಯೋಗದ ಕಾರಣಗಳಿಗಾಗಿ ಭಾರತಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ಉದ್ಯೋಗ ನಿರ್ವಹಿಸಲೂ ಅವಕಾಶವಿದೆ ಎಂದು ಯುಕೆ-ಇಂಡಿಯಾ ಫಾರಿನ್ ಆಫೀಸ್ ಕನ್​​ಸಲ್ಟೇಷನ್ಸ್ (FOC) ಪ್ರಕಟಣೆ ತಿಳಿಸಿದೆ. 2022ರ ಜೂನ್​ಗೆ ಕೊನೆಗೊಂಡಂತೆ 12 ತಿಂಗಳ ಅವಧಿಯಲ್ಲಿ ಬ್ರಿಟನ್​​ ಅತಿಹೆಚ್ಚು ವಿದ್ಯಾರ್ಥಿ ವೀಸಾ ನೀಡುವ ದೇಶಗಳ ಪೈಕಿ ಭಾರತವು ಚೀನಾವನ್ನು ಹಿಂದಿಕ್ಕಿದ್ದು ಬ್ರಿಟನ್​​ನ ಗೃಹ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.

‘2023ರ ಆರಂಭದಲ್ಲಿ ದೆಹಲಿಯಲ್ಲಿರಲು ಸಂತಸವಾಗುತ್ತಿದೆ. 2030ರ ವೇಳೆಗೆ ಭಾರತದೊಂದಿಗೆ ಸಹಕಾರ ವೃದ್ಧಿಸುವ ನಿಟ್ಟಿನಲ್ಲಿ ಸಿದ್ಧಪಡಿಸಿರುವ ಮಾರ್ಗಸೂಚಿಗೆ ಬದ್ಧತೆಯನ್ನು ಈಗಿನಿಂದಲೇ ಪ್ರದರ್ಶಿಸಲಿದ್ದೇವೆ. ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಮೂಲಕ ವಿವಿಧ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದೇವೆ’ ಎಂದು ಬ್ರಿಟನ್​ನ ವಿದೇಶಾಂಗ ಕಾರ್ಯದರ್ಶಿ ಫಿಲಿಪ್ ಬಾರ್ಟನ್ ತಿಳಿಸಿದ್ದಾರೆ. ಮಲೇರಿಯಾ ತಡೆ, ಎಬೋಲಾ ಲಸಿಕೆ ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ವಿವಿಧ ಕಾರ್ಯಕ್ರಮಗಳಲ್ಲಿಯೂ ಭಾರತ-ಬ್ರಿಟನ್ ಜತೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ 3,000 ಭಾರತೀಯರಿಗೆ ವೀಸಾ ನೀಡಲು ರಿಷಿ ಸುನಕ್ ಸಮ್ಮತಿ

ಕಳೆದ ವರ್ಷ ಜಿ-20 ಶೃಂಗಸಭೆಯ 17ನೇ ಆವೃತ್ತಿಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್​ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ನವೆಂಬರ್​​ನಲ್ಲಿ ವೀಸಾ ನೀಡಿಕೆ ಯೋಜನೆ ಬಗ್ಗೆ ಬ್ರಿಟನ್ ಸರ್ಕಾರ ನಿರ್ಧಾರ ಪ್ರಕಟಿಸಿತ್ತು.

ಏನಿದು ಯುವ ವೃತ್ತಿಪರರ ವೀಸಾ ಯೋಜನೆ?

ಬ್ರಿಟನ್ ಪ್ರಧಾನಿಗಳ ಕಾರ್ಯಾಲಯ ನೀಡಿರುವ ಮಾಹಿತಿ ಪ್ರಕಾರ, ಯುಕೆ-ಭಾರತ ಯುವ ವೃತ್ತಿಪರರ ವೀಸಾ ಯೋಜನೆ ಯೋಜನೆಯ ಅಡಿಯಲ್ಲಿ, ಪದವಿ ಪಡೆದ 18ರಿಂದ 30 ವರ್ಷ ವಯಸ್ಸಿನ ಭಾರತೀಯರಿಗೆ ಪ್ರತಿ ವರ್ಷ 3,000 ವೀಸಾ ನೀಡಲಾಗುತ್ತದೆ. ಈ ಯೋಜನೆಯಡಿ ವೀಸಾ ಪಡೆದವರು ಬ್ರಿಟನ್​ಗೆ ತೆರಳಿ ಅಲ್ಲಿ ಕೆಲಸ ಮಾಡಬಹುದಾಗಿದೆ ಹಾಗೂ 2 ವರ್ಷಗಳ ವರೆಗೆ ವಾಸಿಸಬಹುದಾಗಿದೆ. ಅದೇ ರೀತಿ, ಬ್ರಿಟನ್​ನ ವೃತ್ತಿಪರರು ಉದ್ಯೋಗದ ಕಾರಣಗಳಿಗಾಗಿ ಭಾರತಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ಉದ್ಯೋಗ ನಿರ್ವಹಿಸಲೂ ಅವಕಾಶವಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ