Fact Check ಬಿಹಾರದ ಛಪ್ರಾದಲ್ಲಿ ಸಿಕ್ಕಿಹಾಕಿಕೊಂಡಿದೆಯೇ ಎಂವಿ ಗಂಗಾ ವಿಲಾಸ್ ಹಡಗು?
MV Ganga Vilas ವಿಶ್ವದ ಅತಿ ಉದ್ದದ ಕ್ರೂಸ್ ಎಂವಿ ಗಂಗಾ ವಿಲಾಸ್ ಬಿಹಾರದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ವಿಶ್ವದ ಅತಿ ಉದ್ದದ ಕ್ರೂಸ್ ಎಂವಿ ಗಂಗಾ ವಿಲಾಸ್ (MV Ganga Vilas) ಬಿಹಾರದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹೇಳುವ ವರದಿಗಳು ಸುಳ್ಳು. ವೇಳಾಪಟ್ಟಿಯ ಪ್ರಕಾರ ಕ್ರೂಸ್ ಪಾಟ್ನಾ (Patna) ತಲುಪಿದೆ ಎಂದು ಕ್ರೂಸ್ ನಿರ್ವಾಹಕರು ಎನ್ಡಿಟಿವಿಗೆ ತಿಳಿಸಿದ್ದಾರೆ. ಎಂವಿ ಗಂಗಾ ವಿಲಾಸ್ ಅನ್ನು ನಿರ್ವಹಿಸುತ್ತಿರುವ ಎಕ್ಸೋಟಿಕ್ ಹೆರಿಟೇಜ್ ಗ್ರೂಪ್‌ನ ಅಧ್ಯಕ್ಷ ರಾಜ್ ಸಿಂಗ್, ಹಡಗಿಗೆ ಪ್ರಸ್ತುತ ಪಾಟ್ನಾದಲ್ಲಿ ಲಂಗರು ಹಾಕಲಾಗಿದೆ ಮತ್ತು ಹಡಗು ನೋಡಲು ಸಾವಿರಾರು ಜನರು ಬಂದಿದ್ದಾರೆ. ಗೌಪ್ಯತೆ ಮತ್ತು ಸುರಕ್ಷತೆಯ ಸಮಸ್ಯೆಗಳಿರುವುದರಿಂದ ನಾವು ಹಡಗನ್ನು ಜೆಟ್ಟಿಗೆ ತರಲು ಸಾಧ್ಯವಿಲ್ಲ. ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ನಾವು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಯಾಗಿದೆ ಎಂದಿದ್ದಾರೆ.
ಗಂಗಾನದಿಯಲ್ಲಿನ ಆಳವಿಲ್ಲದ ನೀರಿನಿಂದಾಗಿ ಹಡಗು ಬಿಹಾರದ ಛಪ್ರಾದಲ್ಲಿ ಸಿಲುಕಿಕೊಂಡಿದೆ. ಹಲವಾರು ಸಣ್ಣ ದೋಣಿಗಳು ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆದೊಯ್ದವು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಇತ್ತೀಚಿನ ವರದಿಗಳ ಪ್ರಕಾರ, ಕ್ರೂಸ್ಗೆ ನದಿಯಲ್ಲಿ ಲಂಗರು ಹಾಕಲಾಯಿತು . ಪ್ರವಾಸಿಗರು ಅದನ್ನು ವೀಕ್ಷಿಸಲು ದೋಣಿಯಲ್ಲಿ ಹೋಗಿದ್ದಾರೆ.ಹಡಗು ಯಾವಾಗಲೂ ಮುಖ್ಯ ಚಾನಲ್ ನಲ್ಲಿ ಉಳಿಯುತ್ತದೆ. ದೊಡ್ಡ ಹಡಗುಗಳು ಸೈಟ್‌ಗಳಿಗೆ (ಕಡಲತೀರದ ಮುಂಭಾಗಗಳು) ಹೋಗಲು ಸಾಧ್ಯವಿಲ್ಲ. ಕ್ರೂಸ್ ಹಡಗಿಗೆ ಇದು ಸಾಮಾನ್ಯವಾಗಿದೆ ಎಂದು ಆಯೋಜಕರು ಹೇಳಿದ್ದಾರೆ.
ಫ್ಯಾಕ್ಟ್ ಚೆಕ್
.@ANI has claimed that #GangaVilasCruise is stuck in Chhapra due to shallow water. #PIBFactCheck
▪️ This claim is #Fake.
▪️ The cruise is not stuck & has reached Patna as per schedule.
Read More?
?https://t.co/1ehLEHVWiP pic.twitter.com/CdMzjOJTLj
— PIB Fact Check (@PIBFactCheck) January 16, 2023
ಎಂವಿ ಗಂಗಾ ವಿಲಾಸ್ ಬಿಹಾರದಲ್ಲಿ ಸಿಕ್ಕಿಹಾಕಿಕೊಂಡಿದೆ ಎಂಬ ವರದಿಯ ಫ್ಯಾಕ್ಟ್ ಚೆಕ್ ಮಾಡಿದ ಪಿಐಬಿ ಫ್ಯಾಕ್ಟ್ ಚೆಕ್, ಗಂಗಾವಿಲಾಸ್ ಕ್ರೂಸ್ ಛಪ್ರಾದಲ್ಲಿ ಸಿಲುಕಿಕೊಂಡಿದೆ ಎಂದು ಎಎನ್ಐ ಹೇಳಿದೆ. ಇದು ಸುಳ್ಳು ಸುದ್ದಿ. ಕ್ರೂಸ್ ಸಿಲುಕಿಲ್ಲ.ವೇಳಾಪಟ್ಟಿಯ ಪ್ರಕಾರ ಅದು ಪಾಟ್ನಾ ತಲುಪಿದೆ ಎಂದಿದೆ.
ಇದನ್ನೂ ಓದಿ:Budget 2023 ಮಧ್ಯಮ ವರ್ಗಕ್ಕೆ ಬಜೆಟ್ನಲ್ಲಿ ಏನೇನಿರುತ್ತದೆ?; ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು
50 ಪ್ರವಾಸಿ ತಾಣಗಳನ್ನು ಒಳಗೊಂಡಿರುವ ವಿಶ್ವದ ಅತಿ ಉದ್ದದ ನದಿ ವಿಹಾರವಾದ ಗಂಗಾ ವಿಲಾಸ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಗತಿ ಇಲ್ಲಿದೆ:
1. ಈ ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳಲ್ಲಿ 27 ನದಿಗಳಲ್ಲಿ 3,200 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುತ್ತದೆ.
2. ಗಂಗಾ ವಿಲಾಸ್‌ನ ಮೊದಲ ಪ್ರಯಾಣದಲ್ಲಿ ಸ್ವಿಜರ್ಲೆಂಡ್‌ನಿಂದ 32 ಪ್ರವಾಸಿಗರು ವಾರಾಣಸಿಯಿಂದ ದಿಬ್ರುಗಢ್ಗೆ ಪ್ರಯಾಣಿಸಲಿದ್ದಾರೆ.
3. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು, ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೊಲ್ಕತ್ತಾ, ಬಾಂಗ್ಲಾದೇಶದ ಢಾಕಾ, ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಆಯೋಜಿಸಲಾಗಿದೆ.
4. ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 1.4 ಮೀಟರ್ ಡ್ರಾಫ್ಟ್ನೊಂದಿಗೆ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದೆ. 36 ಪ್ರವಾಸಿಗರ ಸಾಮರ್ಥ್ಯವಿರುವ 18 ಸೂಟ್‌ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ.
5. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ಟಾಪ್ ಓವರ್‌ಗಳೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಾರಾಣಸಿಯ ಗಂಗಾ ಆರತಿಯನ್ನು ಪ್ರದರ್ಶಿಸಲಾಗುವುದು.
6. ಈ ಗಂಗಾ ವಿಲಾಸ್ ವಿಹಾರ ಬೌದ್ಧ ಧರ್ಮದ ಅತ್ಯಂತ ಗೌರವದ ಸ್ಥಳವಾದ ಸಾರನಾಥದಲ್ಲಿ ನಿಲ್ಲುತ್ತದೆ.
7. ಇದು ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಅಸ್ಸಾಂನ ಅತಿದೊಡ್ಡ ನದಿ ದ್ವೀಪ ಮತ್ತು ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಮಜುಲಿಯನ್ನು ಸಹ ಒಳಗೊಂಡಿದೆ.
8. ಪ್ರವಾಸಿಗರು ಬಿಹಾರ ಸ್ಕೂಲ್ ಆಫ್ ಯೋಗ ಮತ್ತು ವಿಕ್ರಮಶಿಲಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುತ್ತಾರೆ. ಇದು ಆಧ್ಯಾತ್ಮಿಕತೆ ಮತ್ತು ಜ್ಞಾನದಲ್ಲಿ ಶ್ರೀಮಂತ ಭಾರತೀಯ ಪರಂಪರೆಯಲ್ಲಿ ಮುಳುಗಲು ಅನುವು ಮಾಡಿಕೊಡುತ್ತದೆ.
9. ರಾಯಲ್ ಬೆಂಗಾಲ್ ಟೈಗರ್ಸ್‌ಗೆ ಹೆಸರುವಾಸಿಯಾದ ಬಂಗಾಳ ಕೊಲ್ಲಿ ಡೆಲ್ಟಾದಲ್ಲಿರುವ ಸುಂದರ್‌ಬನ್ಸ್‌ನ ಜೀವವೈವಿಧ್ಯ ಶ್ರೀಮಂತ ವಿಶ್ವ ಪರಂಪರೆಯ ತಾಣಗಳು ಮತ್ತು ಒಂದು ಕೊಂಬಿನ ಘೇಂಡಾಮೃಗಕ್ಕೆ ಹೆಸರುವಾಸಿಯಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕವೂ ಈ ವಿಹಾರ ಸಾಗುತ್ತದೆ.
10. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ವಿಹಾರ ಸಾಗಲಿದೆ. ಇದು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ. ಪ್ರವಾಸಿಗರು ನಿಲುಗಡೆ ಸಮಯದಲ್ಲಿ ಸ್ಥಳೀಯ ಸಾಂಸ್ಕೃತಿಕ ಮತ್ತು ಪಾರಂಪರಿಕ ತಾಣಗಳಿಗೆ ಭೇಟಿ ನೀಡುತ್ತಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ