AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

300 ವರ್ಷದ ಹಿಂದಿನ ಪಾರಂಪರಿಕ ಉತ್ಸವದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

ಸಿಂಧಿಯಾ ಕುಟುಂಬದ ಈ ಸಂಪ್ರದಾಯವು ಸುಮಾರು 300 ವರ್ಷಗಳಷ್ಟು ಹಳೆಯದು. ಸಂಪ್ರದಾಯದ ಪ್ರಕಾರ, ಈ ಕುಟುಂಬದ ಮುಖ್ಯಸ್ಥರು ಬಾಬಾ ಮಹಾಕಾಳ ಅವರ ರಾಜ ಮೆರವಣಿಗೆಯಲ್ಲಿ ಸೇರುತ್ತಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಹಾಆರ್ಯಮನ್ ಕೂಡ ಅದೇ ಸಂಪ್ರದಾಯವನ್ನು ಅನುಸರಿಸಿದರು. ಸಿಂಧಿಯಾ ರಾಜಮನೆತನದ 14ನೇ ವಂಶಸ್ಥರಾದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅದೇ ಸಂಪ್ರದಾಯವನ್ನು ಮುಂದುವರೆಸಿದರು.

300 ವರ್ಷದ ಹಿಂದಿನ ಪಾರಂಪರಿಕ ಉತ್ಸವದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ
Jyotiraditya Scindia
ಸುಷ್ಮಾ ಚಕ್ರೆ
|

Updated on: Aug 18, 2025 | 11:04 PM

Share

ಉಜ್ಜಯಿನಿ, ಆಗಸ್ಟ್ 18: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಗ್ವಾಲಿಯರ್ ರಾಜಮನೆತನಕ್ಕೆ ಸೇರಿದವರು. ಅವರು ಉಜ್ಜಯಿನಿಯಲ್ಲಿ ತಮ್ಮ ಕುಟುಂಬದ ಪಾರಂಪರಿಕವಾದ 300 ವರ್ಷಕ್ಕೂ ಹಳೆಯದಾದ ಇತಿಹಾಸ ಹೊಂದಿರುವ ಬಾಬಾ ಮಹಾಕಾಳ ಮೆರವಣಿಗೆಯಲ್ಲಿ ಇಂದು ಪಾಲ್ಗೊಂಡರು. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಮಗ ಮಹಾಆರ್ಯಮಾನ್ ಸಿಂಧಿಯಾ ಅವರೊಂದಿಗೆ ಈ ಉತ್ಸವದಲ್ಲಿ ಭಾಗವಹಿಸಿದ್ದರು. ಇಬ್ಬರೂ ದೇವಾಲಯವನ್ನು ತಲುಪಿ ಬಾಬಾ ಮಹಾಕಾಳರ ಪಲ್ಲಕ್ಕಿಯ ದರ್ಶನ ಪಡೆದು ಪೂಜೆ ಮತ್ತು ಅಭಿಷೇಕ ಮಾಡಿದರು.

ಭಗವಾನ್ ಮಹಾಕಾಳರ ಪಲ್ಲಕ್ಕಿಯು ಗೋಪಾಲ ದೇವಾಲಯವನ್ನು ತಲುಪಿದಾಗ ಮೆರವಣಿಗೆಯಲ್ಲಿ ಹರಿ-ಹರನನ್ನು ಹೊತ್ತು ಸಾಗಲಾಯಿತು. ಆಗ ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳಿಂದ ಹೂವುಗಳನ್ನು ಸುರಿಸಲಾಯಿತು. ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಮಗನ ಜೊತೆ ಆರತಿ ಮಾಡಿ ಭಕ್ತಿಯಿಂದ ಪೂಜಿಸಿದರು. ಮೊದಲ ಬಾರಿಗೆ ತನ್ನ ಮಗನೊಂದಿಗೆ ಆಗಮಿಸಿದ ಜ್ಯೋತಿರಾದಿತ್ಯ ಸಿಂಧಿಯಾ ಕೊಂಚ ಭಾವುಕರಾದಂತೆ ಕಂಡುಬಂದರು.

ಇದನ್ನೂ ಓದಿ: ಈಶಾನ್ಯ ರಾಜ್ಯಗಳು ಭಾರತದ ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ

ಸಿಂಧಿಯಾ ಕುಟುಂಬದ ಈ ಸಂಪ್ರದಾಯವು ಸುಮಾರು 300 ವರ್ಷಗಳಷ್ಟು ಹಳೆಯದು. ಸಂಪ್ರದಾಯದ ಪ್ರಕಾರ, ಈ ಕುಟುಂಬದ ಮುಖ್ಯಸ್ಥರು ಬಾಬಾ ಮಹಾಕಾಳನ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಹಾಆರ್ಯಮನ್ ಕೂಡ ಇಂದು ಅದೇ ಸಂಪ್ರದಾಯವನ್ನು ಅನುಸರಿಸಿದರು. ಸಿಂಧಿಯಾ ರಾಜಮನೆತನದ 14ನೇ ವಂಶಸ್ಥರಾದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅದೇ ಸಂಪ್ರದಾಯವನ್ನು ಮುಂದುವರೆಸಿದರು.

ಸುಮಾರು 300 ವರ್ಷಗಳ ಹಿಂದೆ 1732ರಲ್ಲಿ ಸಿಂಧಿಯಾ ಕುಟುಂಬದ ರಾಣೋಜಿ ಸಿಂಧಿಯಾ ಅವರು ಮಹಾಕಾಳೇಶ್ವರ ದೇವಾಲಯವನ್ನು ನವೀಕರಿಸಿದರು. ಇದರ ನಂತರ 500 ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದ ದೇವಾಲಯವನ್ನು ಮತ್ತೆ ತೆರೆಯಲಾಯಿತು. ಆಗಿನಿಂದ ಭಗವಾನ್ ಮಹಾಕಾಳನ ಮೆರವಣಿಗೆ ಮತ್ತೆ ಪ್ರಾರಂಭವಾಯಿತು. ಆ ಸಮಯದಿಂದ ಮರಾಠಾ ಸಾಮ್ರಾಜ್ಯದ ಸಿಂಧಿಯಾ ರಾಜಮನೆತನದವರು ಭಗವಾನ್ ಮಹಾಕಾಳನ ಮೆರವಣಿಗೆಯಲ್ಲಿ ಭಾಗವಹಿಸುವ ಸಂಪ್ರದಾಯ ಪ್ರಾರಂಭವಾಯಿತು. ಸಿಂಧಿಯಾ ಕುಟುಂಬವು ಇನ್ನೂ ಈ ಸಂಪ್ರದಾಯವನ್ನು ಮುಂದುವರೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ