AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಿಂದ ಮೆಟ್ಟೂರು ಡ್ಯಾಂಗೆ ಭಾರೀ ನೀರು ಬಿಡುಗಡೆ; ತಮಿಳುನಾಡಿನ 11 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ

ಕರ್ನಾಟಕದಿಂದ ಮೆಟ್ಟೂರು ಡ್ಯಾಂಗೆ ಭಾರೀ ನೀರು ಬಿಡುಗಡೆ; ತಮಿಳುನಾಡಿನ 11 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ

ಸುಷ್ಮಾ ಚಕ್ರೆ
|

Updated on: Aug 18, 2025 | 10:32 PM

Share

ಕರ್ನಾಟಕದ ಜಲಾಶಯಗಳಿಂದ ಮೆಟ್ಟೂರು ಅಣೆಕಟ್ಟಿಗೆ ನೀರಿನ ಹೊರಹರಿವು ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಇಂದು ತಮಿಳುನಾಡಿನ ಕಾವೇರಿ ತೀರದ ಪ್ರದೇಶದ 11 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಮತ್ತು ಕಬಿನಿ ಅಣೆಕಟ್ಟುಗಳಿಂದ ಒಟ್ಟಾಗಿ ನೀರು ಹೊರಬಿಡುವುದನ್ನು 95,000 ಕ್ಯೂಸೆಕ್‌ಗಳಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಮೆಟ್ಟೂರು ಜಲಾಶಯಕ್ಕೆ ಭಾರೀ ಒಳಹರಿವು ಉಂಟಾಗಿದೆ.

ಬೆಂಗಳೂರು, ಆಗಸ್ಟ್ 18: ತಮಿಳುನಾಡಿನ ಮೆಟ್ಟೂರು ಅಣೆಕಟ್ಟು (Mettur Dam) ಪೂರ್ಣ ಸಾಮರ್ಥ್ಯ ತಲುಪುತ್ತಿದೆ. ಹೀಗಾಗಿ ತಮಿಳುನಾಡಿನ 11 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕದ ಜಲಾಶಯಗಳಿಂದ ಮೆಟ್ಟೂರು ಅಣೆಕಟ್ಟಿಗೆ ನೀರಿನ ಹೊರಹರಿವು ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿನ ಜಲಸಂಪನ್ಮೂಲ ಇಲಾಖೆ (ಡಬ್ಲ್ಯುಆರ್‌ಡಿ) ಇಂದು ತಮಿಳುನಾಡಿನ ಕಾವೇರಿ ತೀರದ ಪ್ರದೇಶದ 11 ಜಿಲ್ಲೆಗಳಿಗೆ ಪ್ರವಾಹದ (Flood Alert) ಎಚ್ಚರಿಕೆ ನೀಡಿದೆ. ಕೃಷ್ಣ ರಾಜ ಸಾಗರ (ಕೆಆರ್‌ಎಸ್) ಮತ್ತು ಕಬಿನಿ ಅಣೆಕಟ್ಟುಗಳಿಂದ ಒಟ್ಟಾಗಿ ನೀರು ಹೊರಬಿಡುವುದನ್ನು 95,000 ಕ್ಯೂಸೆಕ್‌ಗಳಿಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ಮೆಟ್ಟೂರು ಜಲಾಶಯಕ್ಕೆ ಭಾರೀ ಒಳಹರಿವು ಉಂಟಾಗಿದೆ.

ಅಣೆಕಟ್ಟು ವೇಗವಾಗಿ ಭರ್ತಿಯಾಗುತ್ತಿರುವುದರಿಂದ ಅದು ಶೀಘ್ರದಲ್ಲೇ ಅದರ ಪೂರ್ಣ ಸಾಮರ್ಥ್ಯವಾದ 120 ಅಡಿಗಳನ್ನು ತಲುಪುವ ನಿರೀಕ್ಷೆಯಿದೆ. ಈ ಮಟ್ಟವನ್ನು ತಲುಪಿದ ನಂತರ, ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತದೆ. ಮೆಟ್ಟೂರು ಡ್ಯಾಂನಿಂದ ಆರಂಭದಲ್ಲಿ 50,000 ರಿಂದ 70,000 ಕ್ಯೂಸೆಕ್‌ಗಳಷ್ಟು ಹೆಚ್ಚುವರಿ ನೀರನ್ನು ಹೊರಬಿಡಬಹುದು. ಒಳಹರಿವಿನ ಆಧಾರದ ಮೇಲೆ ನೀರಿನ ಬಿಡುಗಡೆ ಪ್ರಮಾಣವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಾವೇರಿ ನದಿಯ ದಡದಲ್ಲಿ ಮತ್ತು ಸೇಲಂ, ಈರೋಡ್, ನಾಮಕ್ಕಲ್, ಕರೂರ್, ಅರಿಯಲೂರ್, ತಿರುಚಿ, ತಂಜಾವೂರು, ತಿರುವರೂರು, ಮೈಲಾಡುತುರೈ, ನಾಗಪಟ್ಟಣಂ ಮತ್ತು ಕಡಲೂರು ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಲು, ಜೀವ ಮತ್ತು ಆಸ್ತಿಯನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ