ಕೆಸಿಆರ್ ಗೆ ಪತ್ರ ಬರೆದ ಕೇಂದ್ರ ಸಚಿವ ಕಿಶನ್ ರೆಡ್ಡಿ, ತೆಲಂಗಾಣದಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಸಹಕರಿಸುವಂತೆ ಮನವಿ

ತೆಲಂಗಾಣದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣದ ಬಗ್ಗೆ ಸಿಎಂ ಕೆಸಿಆರ್​ಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅವರು ಮತ್ತೊಂದು ಪತ್ರ ಬರೆದಿದ್ದಾರೆ.

ಕೆಸಿಆರ್ ಗೆ ಪತ್ರ ಬರೆದ ಕೇಂದ್ರ ಸಚಿವ ಕಿಶನ್ ರೆಡ್ಡಿ, ತೆಲಂಗಾಣದಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಸಹಕರಿಸುವಂತೆ ಮನವಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 15, 2023 | 10:59 PM

ಹೈದರಾಬಾದ್:  ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ (K. Chandrashekar Rao)​ ಅವರಿಗೆ  ಕೇಂದ್ರ ಪ್ರವಾಸೋದ್ಯಮ, ಈಶಾನ್ಯ ಪ್ರದೇಶದ ಸಂಸ್ಕೃತಿ ಮತ್ತು ಅಭಿವೃದ್ಧಿ ಸಚಿವ ಜಿ ಕಿಶನ್ ರೆಡ್ಡಿ (Kishan Reddy) ಅವರು ಮತ್ತೊಂದು ಪತ್ರ ಬರೆದಿದ್ದು,  ತೆಲಂಗಾಣ(telangana) ರಾಜ್ಯದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಮೂಲಕ ವಾಯು ಸಂಪರ್ಕವನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಉಪಯೋಗಳನ್ನು ಪಡೆದುಕೊಂಡು ರಾಜ್ಯದಲ್ಲಿ ಅಭಿವೃದ್ಧ ಕೆಲಸಗಳನ್ನು ಮಾಡಬೇಕು.  ಅದಿಲಾಬಾದ್, ಜಕ್ರಾನ್ ಪಲ್ಲಿ (ನಿಜಾಮಾಬಾದ್) ಮತ್ತು ವಾರಂಗಲ್‌ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಬೇಕು. ಈ ಹಿಂದೆ ವಿಮಾನಯಾನ ಸಚಿವರು ಪತ್ರ ಬರೆದರೂ ರಾಜ್ಯ ಸರಕಾರ ಸ್ಪಂದಿಸಿಲ್ಲ. ಕೇಂದ್ರ ಸರಕಾರ ನೀಡುವ ಸಹಕಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾನ್ಯ ಜನರಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ 2016ರಲ್ಲಿ ‘ಉಡಾನ್’ ಯೋಜನೆ ತಂದಿದ್ದು, ಅದರಂತೆ ತೆಲಂಗಾಣದಲ್ಲಿ ಮೂರು ವಿಮಾನ ನಿಲ್ದಾಣಗಳು ನಿರ್ಮಾಣವಾದರೆ ಸಣ್ಣ ಮತ್ತು ಖಾಸಗಿ ವಿಮಾನಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕಿಶನ್ ರೆಡ್ಡಿ ಪತ್ರದಲ್ಲಿ ತಿಳಿಸಿದ್ದಾರೆ.

ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಲವು ಪತ್ರಗಳನ್ನು ಬರೆದಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಹ 2022ರ ಜುಲೈ 30ರಂದು ಮುಖ್ಯಮಂತ್ರಿಗೆ ಪತ್ರ ಬರೆದು, ಈ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಹಕಾರವನ್ನು ಕೇಳಿದ್ದಾರೆ. ಆದ್ರೆ, ಮುಖ್ಯಮಂತ್ರಿಗಳ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿರುವುದು ವಿಷಾದನೀಯ ಎಂದು ಕಿಶನ್ ರೆಡ್ಡಿ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಜಕ್ರಾನ್ ಪಲ್ಲಿ, ಪಾಲ್ವಂಚ (ಭದ್ರಾದ್ರಿ ಕೊತ್ತಗುಡೆಂ), ದೇವಕರದ್ರಾ (ಮಹೆಬೂಬ್ ನಗರ), ಮಾಮ್ನೂರ್ (ವಾರಂಗಲ್), ಬಸಂತ್ ನಗರ (ಪೆದ್ದಪಲ್ಲಿ), ಆದಿಲಾಬಾದ್ ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸಿತ್ತು.ಅದಕ್ಕೆ ಅನುಮೋದನೆ ಸಹ ನೀಡಲಾಯಿತು. ಆದರೂ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಸಂಸತ್ತಿನಲ್ಲಿ ಆ ಪಕ್ಷದ ಸಂಸದರು ಪ್ರಶ್ನೆ ಕೇಳುವುದು ಹಾಸ್ಯಾಸ್ಪದ. ಆದರೆ ವಿಮಾನ ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರವನ್ನು ಕೇಳಿದರೆ ಉತ್ತರವಿಲ್ಲ ಎಂದಿದ್ದಾರೆ.

2014ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ ಈಗ 140 ದಾಟಿದ್ದು, 2026ರ ವೇಳೆಗೆ ಈ ಸಂಖ್ಯೆಯನ್ನು 220ಕ್ಕೆ ಏರಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ.ವಿಮಾನಯಾನ ಇಲಾಖೆಯ ಯೋಜನೆಗಳನ್ನು ತೆಲಂಗಾಣ ಸದುಪಯೋಗ ಮಾಡಿಕೊಂಡರೆ ಉತ್ತಮ. ನಮ್ಮ ತೆಲಂಗಾಣ ರಾಜ್ಯದಲ್ಲೂ ವಿಮಾನ ನಿಲ್ದಾಣಗಳ ಹೆಚ್ಚಳದ ಬಗ್ಗೆ ಸರ್ಕಾರ ಗಮನಹರಿಸಿದೆ. ಈ ದಿಸೆಯಲ್ಲಿ ಈಗಾಗಲೇ ನಾಗರಿಕ ವಿಮಾನಯಾನ ಇಲಾಖೆ ಸಂಪೂರ್ಣ ಸಹಕಾರಕ್ಕೆ ಸಿದ್ಧತೆ ಇದೆ ಎಂದು ಕಿಶನ್ ರೆಡ್ಡಿ ಪತ್ರದ ಮೂಲಕ ಮತ್ತೊಮ್ಮೆ ನೆನಪಿಸಿದ್ದಾರೆ.

Published On - 10:57 pm, Wed, 15 February 23