AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadi Mahotsav: ದೆಹಲಿಯಲ್ಲಿಂದು ಪ್ರಧಾನಿ ಮೋದಿಯಿಂದ ಆದಿ ಮಹೋತ್ಸವ ಉದ್ಘಾಟನೆ

ರಾಷ್ಟ್ರ ಮಟ್ಟದಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನವಾಗಿ ಪ್ರಧಾನಿ ಮೋದಿಯವರು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ "ಆದಿ ಮಹೋತ್ಸವ" ರಾಷ್ಟ್ರೀಯ ಬುಡಕಟ್ಟು ಉತ್ಸವವನ್ನು ಉದ್ಘಾಟಿಸಲಿದ್ದಾರೆ.

Aadi Mahotsav: ದೆಹಲಿಯಲ್ಲಿಂದು ಪ್ರಧಾನಿ ಮೋದಿಯಿಂದ ಆದಿ ಮಹೋತ್ಸವ ಉದ್ಘಾಟನೆ
ನರೇಂದ್ರ ಮೋದಿ
Follow us
TV9 Web
| Updated By: ಆಯೇಷಾ ಬಾನು

Updated on:Feb 16, 2023 | 7:02 AM

ದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಫೆಬ್ರವರಿ 16 ರಂದು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ “ಆದಿ ಮಹೋತ್ಸವ”(Aadi Mahotsav) ರಾಷ್ಟ್ರೀಯ ಬುಡಕಟ್ಟು ಉತ್ಸವವನ್ನು(Tribal Culture) ಉದ್ಘಾಟಿಸಲಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಬುಡಕಟ್ಟು ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ಬರುವ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ನಿಗಮ (ಟ್ರೈಫೆಡ್) ಈ ವಾರ್ಷಿಕ ಉತ್ಸವವನ್ನು ಆಯೋಜಿಸಿದ್ದು, ಆದಿ ಮಹೋತ್ಸವದಲ್ಲಿ ಆದಿವಾಸಿಗಳ ಸಂಸ್ಕೃತಿ, ಕರಕುಶಲ ಕಲೆ, ಅಹಾರ, ವಾಣಿಜ್ಯ ಮತ್ತು ಸಾಂಪ್ರದಾಯಿಕ ಕಲೆ ಪ್ರದರ್ಶನ ಮಾಡಲಾಗುತ್ತೆ. ಈ ವರ್ಷದ ಉತ್ಸವವನ್ನು ದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೆಬ್ರವರಿ 16ರಿಂದ 27ರವರೆಗೆ ಆಯೋಜಿಸಲಾಗಿದೆ.

ಇದನ್ನೂ ಓದಿ: Tamil Nadu: ತಮಿಳುನಾಡು; ಡಿಎಂಕೆ ಕೌನ್ಸಿಲರ್ ನೇತೃತ್ವದ ಗುಂಪಿನಿಂದ ಹಲ್ಲೆ, ಯೋಧ ಸಾವು

ಸುಮಾರು 200 ಮಳಿಗೆಗಳಲ್ಲಿ ದೇಶಾದ್ಯಂತ ಇರುವ ಬುಡಕಟ್ಟು ಜನರ ಶ್ರೀಮಂತ ಮತ್ತು ವೈವಿಧ್ಯಮಯ ಪರಂಪರೆಯನ್ನು ಈ ಬುಡಕಟ್ಟು ಉತ್ಸವದಲ್ಲಿ ಬಿಂಬಿಸಲಾಗುವುದು. ಮಹೋತ್ಸವದಲ್ಲಿ ಸುಮಾರು 1000 ಬುಡಕಟ್ಟು ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಾಮೂಲಿ ಕರಕುಶಲಕಲೆ, ಕೈಮಗ್ಗ, ಮಡಿಕೆ, ಆಭರಣ ಇತ್ಯಾದಿಗಳ ಜೊತೆಗೆ ಶ್ರೀ ಅನ್ನ ಯೋಜನೆಯಡಿ ಆದಿವಾಸಿಗಳು ಬೆಳೆದ ಧಾನ್ಯಗಳನ್ನು ಪ್ರದರ್ಶನ ಮಾಡುವುದು ವಿಶೇಷ ಆಕರ್ಷಣೆಯಾಗಿರಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:02 am, Thu, 16 February 23

ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ