ಕರ್ನಾಟಕಕ್ಕೆ ಕೇಂದ್ರದಿಂದ ನೆರವು ಸಿಗುತ್ತಿಲ್ಲ ಎಂದು ವರಾತ ತೆಗೆದಿದ್ದ ಸಿಎಂ ಸಿದ್ದರಾಮಯ್ಯಗೆ, ಮಾಹಿತಿ ಮುಂದಿಟ್ಟು ತರಾಟೆಗೆ ತೆಗೆದುಕೊಂಡ ಕೇಂದ್ರ ಜಲ ಶಕ್ತಿ ಸಚಿವ ಶೇಖಾವತ್

|

Updated on: Oct 30, 2023 | 10:27 AM

Jal Shakti Minister  Gajendra Singh Shekhawat: ಕರ್ನಾಟಕವು ಕೇಂದ್ರ ನೆರವಿಗಾಗಿ ಕಾಯುತ್ತಿದೆ, ಕನ್ನಡಿಗರಿಗೆ ಇನ್ನೆಷ್ಟು ದಾಹ ತರಿಸಬೇಕು ಅಂದುಕೊಳ್ಳುತ್ತೀರಿ? ಎಂದು ಕೇಳಿದ್ದ ಸಿಎಂ ಸಿದ್ದರಾಮಯ್ಯಗೆ (CM Siddaramaiah) ಮಾಹಿತಿ ಮುಂದಿಟ್ಟು ತರಾಟೆಗೆ ತೆಗೆದುಕೊಂಡ ಕೇಂದ್ರ ಜಲ್ ಶಕ್ತಿ ಸಚಿವ ಶೇಖಾವತ್

ಕರ್ನಾಟಕಕ್ಕೆ ಕೇಂದ್ರದಿಂದ ನೆರವು ಸಿಗುತ್ತಿಲ್ಲ ಎಂದು ವರಾತ ತೆಗೆದಿದ್ದ ಸಿಎಂ ಸಿದ್ದರಾಮಯ್ಯಗೆ, ಮಾಹಿತಿ ಮುಂದಿಟ್ಟು ತರಾಟೆಗೆ ತೆಗೆದುಕೊಂಡ ಕೇಂದ್ರ ಜಲ ಶಕ್ತಿ ಸಚಿವ ಶೇಖಾವತ್
ಸಿಎಂ ಸಿದ್ದರಾಮಯ್ಯಗೆ, ಮಾಹಿತಿ ಮುಂದಿಟ್ಟು ತರಾಟೆಗೆ ತೆಗೆದುಕೊಂಡ ಕೇಂದ್ರ ಜಲ್ ಶಕ್ತಿ ಸಚಿವ ಶೇಖಾವತ್
Follow us on

ಕರ್ನಾಟಕವು ಕೇಂದ್ರ ನೆರವಿಗಾಗಿ ಕಾಯುತ್ತಿದೆ, ಕನ್ನಡಿಗರಿಗೆ ಇನ್ನೆಷ್ಟು ದಾಹ ತರಿಸಬೇಕು ಅಂದುಕೊಳ್ಳುತ್ತೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಕಳೆದ ವಾರ ತಮ್ಮ ಎಕ್ಸ್ ಖಾತೆ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಇದಕ್ಕೆ ಇಂದು ಸೋಮವಾರ ಬೆಳಗ್ಗೆ ಅಧಿಕೃತ ಮಾಹಿತಿ ಮುಂದಿಟ್ಟ ಕೇಂದ್ರ ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Union Minister of Jal Shakti Gajendra Singh Shekhawat) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಎಕ್ಸ್ ಖಾತೆ ಮೂಲಕ ನೀಡಿರುವ ಅಧಿಕೃತ ಮಾಹಿತಿ ಹೀಗಿದೆ:

ಕರ್ನಾಟಕದ ಮುಖ್ಯಮಂತ್ರಿಗಳಾದ ಶ್ರೀ @siddaramaiah ನವರೇ, ಸುಳ್ಳು ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಕಾಂಗ್ರೆಸಿಗರಿಗೆ ಅಂಟಿದ ಚಟ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಒಬ್ಬ ಮುಖ್ಯಮಂತ್ರಿಯೇ ಖುದ್ದಾಗಿ ತಪ್ಪು ಮಾಹಿತಿಗಳನ್ನು ಬಿತ್ತಿ ಜನಮಾನಸವನ್ನು ಹಾಳುಗೆಡವಲು ಮುಂದಾಗುತ್ತಾರೆಂದು ನಾವು ಭಾವಿಸಿರಲಿಲ್ಲ.

ಮೇಕೆದಾಟು ಯೋಜನೆಯ ಸ್ಥಿತಿ-ಗತಿ ಹಾಗೂ ವಾಸ್ತವಾಂಶ ಏನೆಂಬುದು ನಿಮಗೆ ಚೆನ್ನಾಗಿ ತಿಳಿದಿದೆ. ನಿಮಗೆ ಬ್ರೀಫೀಂಗ್ ತಂಡ ನೀಡಿದ ಅರ್ಧಂಬರ್ದ ಮಾಹಿತಿ ಆಧರಿಸಿ ನೀವು ತಪ್ಪು ಮಾಹಿತಿಗಳ ಸರಣಿಯನ್ನೇ ಹರಿಬಿಟ್ಟಂತೆ ತೋರುತ್ತದೆ. ಹೀಗಾಗಿ ವಾಸ್ತವ ಏನೆಂಬುದನ್ನು ನಾವೇ ಹೇಳಬೇಕಾಗಿದೆ.

1. ಮೊದಲನೆಯದಾಗಿ CWMA ಯ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಈ ಬಗ್ಗೆ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಇದು ಕೇಂದ್ರದ ತಪ್ಪಲ್ಲ.

2. ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ ಮತ್ತು ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದೀರಲ್ಲವೇ ?

3. 2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)- ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ, ಮೂರು ಯೋಜನೆಗಳು ಪೂರ್ಣಗೊಂಡಿದೆ. ಎರಡು ನಡೆಯುತ್ತಿವೆ. ಅದಕ್ಕಾಗಿ ಕೇಂದ್ರದ ವತಿಯಿಂದ 1238.30 ಕೋಟಿ ರೂ.ಗಳಲ್ಲಿ 1190.05 ಕೋಟಿ ಈಗಾಗಲೇ ಬಿಡುಗಡೆಯಾಗಿದೆ.

4. ಅಟಲ್ ಭೂಜಲ್ ಯೋಜನೆ ಅಡಿಯಲ್ಲಿ, ಕರ್ನಾಟಕವು ಈಗಾಗಲೇ ಕೇಂದ್ರದಿಂದ 629.54 ಕೋಟಿ ರೂ. ಪಡೆದಿದೆ. ಆದರೆ 28.10.2023 ಮಾಹಿತಿ ಪ್ರಕಾರ ಕೇವಲ 274.05 ಕೋಟಿ ರೂ. ಖರ್ಚು ಮಾಡಲಾಗಿದೆ.
ಇದನ್ನು ಏನು ವಿವರಿಸುತ್ತದೆ? Dear Shri @siddaramaiah

ಕೇಂದ್ರ ಜಲ್ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಕ್ಸ್ ಖಾತೆ ಮೂಲಕ ಎತ್ತಿರುವ ಪ್ರಶ್ನೆಗಳು ಇಲ್ಲಿವೆ:

We know it is tradition for Congress to spread false rumour & misinformation. But it isn’t becoming of a CM to wreak havoc in peoples lives by doing so.
You are very well aware of the status of the Mekedatu project – if not, let us remind you, since your briefing team seems to be doing a sorry job.

Latest status stands this: Discussion on the DPR of the Mekedatu project was included as an agenda item during various meetings of CWMA.
However, discussion on this issue could not take place due to lack of consensus among party States on this agenda item.

2. The DPRs of Kalasa and Bhandura scheme Nala have already been approved by the Central Water Commission (CWC) with certain conditions and the same has been communicated to Govt of Karnataka.

3. Of the 5 projects from Karnataka prioritised under Pradhan Mantri Krishi Sinchayee Yojana (PMKSY)- Accelerated Irrigation Benefits Programme during 2017-17, THREE stand completed.
Two are ongoing & Rs. 1190.05 cr of the of Rs 1238.30 cr of Central assistance of has already been released to date.

4. Under Atal Bhujal Yojana, Karnataka has already received Rs. 629.54 crore from the Centre but spent only Rs 274.05 cr as on 28.10.2023.
What explains this?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರ ತಮ್ಮ ಎಕ್ಸ್ ಖಾತೆ ಮೂಲಕ ಕೇಂದ್ರ ಸರ್ಕಾರವನ್ನು ಹೀಗೆ ಪ್ರಶ್ನಿಸಿದ್ದರು:

narendramodi ನೇತೃತ್ವದ ಕೇಂದ್ರ ಸರ್ಕಾರವು ಮಳೆಯ ಕೊರತೆಯ ಹೊರತಾಗಿಯೂ ಕರ್ನಾಟಕದ ನೀರಿನ ಸಮಸ್ಯೆಗಳನ್ನು ಪರಿಹರಿಸಲಿಲ್ಲ. ರಾಜ್ಯದ ನೀರಿನ ಹಿತಾಸಕ್ತಿಯನ್ನು ಕರ್ನಾಟಕದ ಯಾವ ಬಿಜೆಪಿ ಸಂಸದರೂ ಬೆಂಬಲಿಸಿಲ್ಲ. ಮೇಕೆದಾಟು ಮತ್ತು ಮಹದಾಯಿ ನದಿ ಯೋಜನೆಗಳು ಕೇಂದ್ರದ ಅನುಮೋದನೆಗೆ ಬಾಕಿ ಇವೆ. ರಾಜ್ಯ ಸರ್ಕಾರದ ವತಿಯಿಂದ ಉತ್ತರ ಕರ್ನಾಟಕದ ನೀರಾವರಿಗಾಗಿ ಕೈಗೆತ್ತಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ, ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಮತ್ತು ರಾಷ್ಟ್ರೀಯ ಸ್ಥಾನಮಾನಕ್ಕಾಗಿ ಕಾಯುತ್ತಿದೆ.

ಪ್ರಿಯ ಪ್ರಧಾನಮಂತ್ರಿಗಳೇ, ನೀವು ಕನ್ನಡಿಗರಿಗೆ ಇನ್ನೆಷ್ಟು ದಾಹ ತರಿಸಬೇಕು ಅಂದುಕೊಳ್ಳುತ್ತೀರಿ? #ಯಾಕೆ ನೊ ಲವ್ ಫಾರ್ ಕರ್ನಾಟಕ? #ಉತ್ತರ ಮಾಡಿ ಮೋದಿ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ