ದೆಹಲಿ ವಿವಿ ಚುನಾವಣೆಯಲ್ಲಿ ABVP ಭರ್ಜರಿ ಜಯ: ವಿದ್ಯಾರ್ಥಿ ಸೇವೆಯಲ್ಲಿ ಅತ್ಯುತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದ ಜೋಶಿ

ಇಡೀ ದೇಶದ ಗಮನ ಸೆಳೆದಿದ್ದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) 2026ರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 20 ಸುತ್ತುಗಳ ಮತ ಎಣಿಕೆಯ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಾಲ್ಕು ಕೇಂದ್ರ ಸ್ಥಾನಗಳ ಪೈಕಿ ಮೂರರಲ್ಲಿ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಇನ್ನು ಈ ಗೆಲುವಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

ದೆಹಲಿ ವಿವಿ ಚುನಾವಣೆಯಲ್ಲಿ ABVP ಭರ್ಜರಿ ಜಯ: ವಿದ್ಯಾರ್ಥಿ ಸೇವೆಯಲ್ಲಿ ಅತ್ಯುತ್ತಮ ಯಶಸ್ಸು ಸಿಗಲಿ ಎಂದು ಹಾರೈಸಿದ ಜೋಶಿ
Abvp And Pralhad Joshi

Updated on: Sep 19, 2026 | 8:06 PM

ನವದೆಹಲಿ, (ಸೆಪ್ಟೆಂಬರ್ 19): ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (DUSU) 2026ರ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮೂರು ಪ್ರಮುಖ ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ನಾಲ್ಕು ಕೇಂದ್ರ ಸ್ಥಾನಗಳ ಪೈಕಿ ಮೂರರಲ್ಲಿ ಎಬಿವಿಪಿ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಅಧ್ಯಕ್ಷರಾಗಿ ಯಶ್ ದಬಾಸ್, ಕಾರ್ಯದರ್ಶಿಯಾಗಿ ರಿಯಾ ಛಾವ್ಡಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಲಕ್ಷ್ಯ ರಾಜ್ ಸಿಂಗ್ ಆಯ್ಕೆಯಾಗಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಗೆಲುವು ಸಾಧಿಸಿದವರಿಗೆ ಹಾಗೂ ಎಬಿವುಪಿ ಕಾರ್ಯಕರ್ತರಿಗೆ  ಅಭಿನಂದನೆ ತಿಳಿಸಿ ಶುಭ ಹಾರೈಸಿದ್ದಾರೆ.

ಪ್ರಮುಖ 3 ಸ್ಥಾನದಲ್ಲಿ ಗೆದ್ದ ಎಬಿವಿಪಿ

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎಬಿವಿಪಿಯ ಯಶ್ ದಬಾಸ್ ಅವರು 24,576 ಮತಗಳನ್ನು ಪಡೆಯುವ ಮೂಲಕ ಎದುರಾಳಿ ಎನ್‌ಎಸ್‌ ಯುಐನ ವಿಜಯ್ ಶಂಕರ್ ಮೀನಾ (22,523 ಮತಗಳು) ಅವರನ್ನು ಮಣಿಸಿದ್ದಾರೆ. ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ರಿಯಾ ಛಾವ್ಡಿ (21,650 ಮತಗಳು) ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಲಕ್ಷ್ಯ ರಾಜ್ ಸಿಂಗ್ (16,615 ಮತಗಳು) ಗೆದ್ದು ಬೀಗಿದ್ದಾರೆ. ಇದರೊಂದಿಗೆ ಎನ್‌ಎಸ್‌ ಯುಐಗೆ ಭಾರೀ ಮುಖಭಂಗವಾಗಿದೆ.

ಇದನ್ನೂ ನೋಡಿ: ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ್​​ ಜೋಶಿ

ಶುಭ ಹಾರೈಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಇನ್ನು ಎಬಿವಿಪಿ ಅಭ್ಯರ್ಥಿಗಳ ಗೆಲುವಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭಿನಂದನೆಗಳನ್ನು ತಿಳಿಸಿದ್ದಾರೆ.  #DUSUElection2026 ರಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳಲ್ಲಿ ಭರ್ಜರಿ ಜಯಗಳಿಸಿದ ಎಬಿವಿಪಿ ಹಾಗೂ ಅದರ ಕಾರ್ಯಕರ್ತರಿಗೆ ಹೃದಯಪೂರ್ವಕ ಅಭಿನಂದನೆಗಳು. ರಾಷ್ಟ್ರವಾದಿ ವಿಚಾರಧಾರೆ ಹೊಂದಿರುವ ಕೆಡರ್ ಆಧಾರಿತ ಸಂಘಟನೆಯಾಗಿ, ABVP ಸದಾ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ, ಸೇವೆ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ಫಲಿತಾಂಶವು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೀಡಿದ ಬೆಂಬಲವನ್ನು ಪ್ರತಿಫಲಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಗೆಲುವಿನ ಖುಷಿಹಂಚಿಕೊಂಡಿರುವ ಕಾರ್ಯದರ್ಶಿಯಾಗಿ ಆಯ್ಕೆಯಾದ ರಿಯಾ ಛಾವ್ಡಿ , “ಕ್ಯಾಂಪಸ್‌ ನಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಿಂದೆ ತಾವು ಸ್ಪರ್ಧಿಸಿ ಸೋತಿದ್ದರೂ ನಿರಂತರ ಪ್ರಯತ್ನದಿಂದ ಈ ಬಾರಿ ಜಯ ಗಳಿಸಿದ್ದೇವೆ. ಯುವ ವಿದ್ಯಾರ್ಥಿಗಳು ಭರವಸೆ ಕಳೆದುಕೊಳ್ಳದೆ ತಮ್ಮ ಗುರಿಗಾಗಿ ಶ್ರಮಿಸಬೇಕು” ಎಂದು ಕರೆ ನೀಡಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us