ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಆರೋಪ ವಿರುದ್ಧ ಗುಡುಗಿದ ಸ್ಮೃತಿ ಇರಾನಿ

ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆಯ ನಡುವೆಯೇ  ರಾಹುಲ್ ಗಾಂಧಿ ಅವರು ಸಂಸತ್​​ನಿಂದ ಹೊರಗೆ ಹೋದಾಗ, ಮಣಿಪುರದ ಬಗ್ಗೆ ಚರ್ಚೆಯಿಂದ ಸರ್ಕಾರ ಓಡಿಹೋಗಿಲ್ಲ, ಆದರೆ ಪ್ರತಿಪಕ್ಷಗಳು ಓಡಿಹೋದವು ಎಂದು ಅವರು ಹೇಳಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಪದೇ ಪದೇ ಹೇಳಿದರು. ಆದರೆ ಪ್ರತಿಪಕ್ಷಗಳು ಅದರಿಂದ ಓಡಿಹೋದವು ಎಂದಿದ್ದಾರೆ ಸ್ಮೃತಿ.

ಮಣಿಪುರ ಹಿಂಸಾಚಾರ: ರಾಹುಲ್ ಗಾಂಧಿ ಆರೋಪ ವಿರುದ್ಧ ಗುಡುಗಿದ ಸ್ಮೃತಿ ಇರಾನಿ
ಸ್ಮೃತಿ ಇರಾನಿ
Follow us
ರಶ್ಮಿ ಕಲ್ಲಕಟ್ಟ
|

Updated on:Aug 10, 2023 | 12:17 PM

ದೆಹಲಿ ಆಗಸ್ಟ್ 09: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಎನ್‌ಡಿಎ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ (Rahul Gandhi) ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸಂಸತ್​​ನಲ್ಲಿ ಮೊದಲ ಬಾರಿ ಒಬ್ಬ ಸಂಸದ ‘ಭಾರತ ಮಾತೆಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅವರ ಮೈತ್ರಿಕೂಟದ ಸದಸ್ಯರು ಇದಕ್ಕೆ ಚಪ್ಪಾಳೆ ತಟ್ಟಿದ್ದಾರೆ. ಮಣಿಪುರದಲ್ಲಿ ತನ್ನ ತಾಯಿಯನ್ನು ಕೊಲ್ಲಲಾಗಿದೆ. ಎನ್‌ಡಿಎ ಸರ್ಕಾರ ಮಣಿಪುರವನ್ನು (Manipur) ಇಬ್ಭಾಗ ಮಾಡಿದೆ ಎಂದು ರಾಹುಲ್ ಹೇಳಿದ್ದಾರೆ. ನೀವು ಭಾರತವಲ್ಲ, ಭಾರತ ಭ್ರಷ್ಟವಾಗಿಲ್ಲ. ಭಾರತವು ಅರ್ಹತೆಯನ್ನು ನಂಬುತ್ತದೆ ರಾಜವಂಶದಲ್ಲಿ ಅಲ್ಲ. ಇಂದು ಎಲ್ಲಾ ದಿನಗಳು ನಿಮ್ಮಂತಹವರು ಬ್ರಿಟಿಷರಿಗೆ ಹೇಳಿದ್ದನ್ನು ನೆನಪಿಟ್ಟುಕೊಳ್ಳಬೇಕು – ಭಾರತ ಬಿಟ್ಟು ತೊಲಗಿ, ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ, ವಂಶಾಡಳಿತ ಭಾರತ ಬಿಟ್ಟು ತೊಲಗಲಿ. ಮೆರಿಟ್ ಈಗ ಭಾರತದಲ್ಲಿ ಸ್ಥಾನ ಪಡೆಯುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

1984 ರ ಗಲಭೆಗಳು, ತುರ್ತು ಪರಿಸ್ಥಿತಿ ಮತ್ತು ಗಿರಿಜಾ ಟಿಕೂ ಅವರ ಹತ್ಯೆಯನ್ನು ಉಲ್ಲೇಖಿಸಿದ ಸ್ಮೃತಿ ಇರಾನಿ, ಇದು ರಕ್ತದಲ್ಲಿ ನೆನೆದ ಕಾಂಗ್ರೆಸ್ ಇತಿಹಾಸ ಎಂದು ಹೇಳಿದರು. ಗಿರಿಜಾ ಟಿಕೂ ಎಂಬ ಕಾಶ್ಮೀರಿ ಪಂಡಿತರನ್ನು ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದನ್ನು ಸಿನಿಮಾದಲ್ಲಿ ತೋರಿಸಿದಾಗ ಕಾಂಗ್ರೆಸ್ಸಿನ ಕೆಲ ಮುಖಂಡರು ಅಪಪ್ರಚಾರ ಎಂದರು. ಅದೇ ಪಕ್ಷದ ನಾಯಕರು ಇಂದು ಮಣಿಪುರದ ಬಗ್ಗೆ ಮಾತನಾಡುತ್ತಿದ್ದಾರೆ.

ತಾನು ಕೈಗೊಂಡಿದ್ದ ಯಾತ್ರೆ ಬಗ್ಗೆ ರಾಹುಲ್ ಸದನದಲ್ಲಿ ಹೇಳಿದ್ದಾರೆ. ಯಾತ್ರೆ ವೇಳೆ 370 ನೇ ವಿಧಿಯನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದರು. ದೇಶದಲ್ಲಿ ಆರ್ಟಿಕಲ್ 370 ಅನ್ನು ಮರುಸ್ಥಾಪಿಸುವುದಿಲ್ಲ ಅಥವಾ ಕಾಶ್ಮೀರಿ ಪಂಡಿತರನ್ನು “ರಲಿಬ್ ಗಾಲಿಬ್ ಚಾಲಿಬ್ (ಮತಾಂತರ ಮಾಡಿ, ಸಾಯಿರಿ ಅಥವಾ ಬಿಟ್ಟುಬಿಡಿ)” ಎಂದು ಬೆದರಿಕೆ ಹಾಕುವವರನ್ನು ಉಳಿಸುವುದಿಲ್ಲ” ಎಂದು ಸದನದಿಂದ ಓಡಿ ಹೋದ ಆ ವ್ಯಕ್ತಿಯಲ್ಲಿ ನಾನು ಹೇಳುತ್ತಿದ್ದೇನೆ ಎಂದಿದ್ದಾರೆ ಸ್ಮೃತಿ ಇರಾನಿ

ಅವರು ಓಡಿಹೋದರು, ನಾವು ಹಾಗೆ ಮಾಡಿಲ್ಲ

ಸ್ಮೃತಿ ಇರಾನಿ ಅವರು ಪ್ರತಿಕ್ರಿಯೆಯ ನಡುವೆಯೇ  ರಾಹುಲ್ ಗಾಂಧಿ ಅವರು ಸಂಸತ್​​ನಿಂದ ಹೊರಗೆ ಹೋದಾಗ, ಮಣಿಪುರದ ಬಗ್ಗೆ ಚರ್ಚೆಯಿಂದ ಸರ್ಕಾರವು ಓಡಿಹೋಗಿಲ್ಲ, ಆದರೆ ಪ್ರತಿಪಕ್ಷಗಳು ಓಡಿಹೋದವು ಎಂದು ಅವರು ಹೇಳಿದ್ದಾರೆ.ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಣಿಪುರ ವಿಷಯದ ಬಗ್ಗೆ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ಪದೇ ಪದೇ ಹೇಳಿದರು, ಪ್ರತಿಪಕ್ಷಗಳು ಅದರಿಂದ ಓಡಿಹೋದವು. ನಾವು ಈ ರೀತಿ ಮಾಡಲಿಲ್ಲ ಎಂದು ಸ್ಮೃತಿ ಇರಾನಿ ಹೇಳಿದರು.

ಇದನ್ನೂ ಓದಿ:  ಭಾರತ ಜನರ ಧ್ವನಿ, ಈ ಧ್ವನಿಗಳನ್ನು ಆಲಿಸಲು ನಾವು ಅಹಂ, ದ್ವೇಷಗಳನ್ನು ಬಿಟ್ಟುಬಿಡಬೇಕು: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತು

‘ರಾಹುಲ್ ಗಾಂಧಿ, ಬೆಂಕಿಪೆಟ್ಟಿಗೆಯನ್ನು ಹುಡುಕಲು ಎಲ್ಲಿಗೆ ಹೋಗಿದ್ದೀರಿ?

ರಾಹುಲ್ ಗಾಂಧಿಯವರ ವಿದೇಶಿ ಭೇಟಿಗಳ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿ ಅವರು ದೇಶದಾದ್ಯಂತ ಸೀಮೆಎಣ್ಣೆ ಸುರಿದಿದ್ದಾರೆ ಎಂದು ಹೇಳಿದರು. ರಾಹುಲ್ ಗಾಂಧಿಯವರೇ, ಬೆಂಕಿಪೆಟ್ಟಿಗೆಯನ್ನು ಹುಡುಕಲು ನೀವು ಎಲ್ಲಿಗೆ ಹೋಗಿದ್ದೀರಿ? ನೀವು ಅಮೇರಿಕಾಕ್ಕೆ ಹೋಗಲಿಲ್ಲವೇ? ಅದಾನಿಗೆ ಕಾಂಗ್ರೆಸ್ ಏಕೆ ಯೋಜನೆಗಳನ್ನು ನೀಡಿದೆ ಎಂದು ಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Wed, 9 August 23

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ