ಸಂತ್ರಸ್ತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಇನ್ಸ್‌ಪೆಕ್ಟರ್ ಅಮಾನತ್ತು, ಎಲ್ಲಿ?
ಉತ್ತರ ಪ್ರದೇಶ: ವಾಟ್ಸಾಪ್‌ನಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನೆಡೆದಿದೆ. ಇತ್ತೀಚೆಗೆ ಸಂತ್ರಸ್ತ ಮಹಿಳೆ ತನ್ನ ಅಳಿಯರೊಂದಿಗೆ ವಿವಾದ ಮಾಡಿಕೊಂಡಿದ್ದರು. ಇದರಿಂದಾಗಿ ಸಿಕಂದರಾಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳೆ ತನ್ನ ಅಳಿಯನ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತುಕೊಂಡು ಠಾಣೆಯ ಇನ್ಸ್‌ಪೆಕ್ಟರ್, ಮಹಿಳೆಯ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದಾರೆ. ಸಂತ್ರಸ್ತೆಯ ಮೊಬೈಲ್ ನಂಬರ್ ಪಡೆದ ಇನ್ಸ್‌ಪೆಕ್ಟರ್, ಮಹಿಳೆಯ ಮೊಬೈಲಿಗೆ ಅಶ್ಲೀಲ […]
ಉತ್ತರ ಪ್ರದೇಶ: ವಾಟ್ಸಾಪ್‌ನಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲ ಸಂದೇಶಗಳು ಮತ್ತು ವಿಡಿಯೋಗಳನ್ನು ಕಳುಹಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನೆಡೆದಿದೆ.
ಇತ್ತೀಚೆಗೆ ಸಂತ್ರಸ್ತ ಮಹಿಳೆ ತನ್ನ ಅಳಿಯರೊಂದಿಗೆ ವಿವಾದ ಮಾಡಿಕೊಂಡಿದ್ದರು. ಇದರಿಂದಾಗಿ ಸಿಕಂದರಾಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳೆ ತನ್ನ ಅಳಿಯನ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತುಕೊಂಡು ಠಾಣೆಯ ಇನ್ಸ್‌ಪೆಕ್ಟರ್, ಮಹಿಳೆಯ ಮೊಬೈಲ್ ನಂಬರನ್ನು ಪಡೆದುಕೊಂಡಿದ್ದಾರೆ.
ಸಂತ್ರಸ್ತೆಯ ಮೊಬೈಲ್ ನಂಬರ್ ಪಡೆದ ಇನ್ಸ್‌ಪೆಕ್ಟರ್, ಮಹಿಳೆಯ ಮೊಬೈಲಿಗೆ ಅಶ್ಲೀಲ ವಿಡಿಯೋ ಹಾಗೂ ಮೆಸೇಜ್ಗಳನ್ನು ವಾಟ್ಸಾಪ್ ಮಾಡಿದ್ದಾರೆ. ಇನ್ಸ್ಪೆಕ್ಟರ್ನ ಈ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಮಹಿಳೆ, ಬುಲಂದ್ಶಹರ್ನಲ್ಲಿ ಮೇಲಾಧಿಕಾರಿಗಳಿಗೆ, ಇನ್ಸ್‌ಪೆಕ್ಟರ್ ವಿರುದ್ಧ ದೂರು ನೀಡಿದ್ದಾಳೆ.
ದೂರಿನನ್ವಯ ತನಿಖೆ ನಡೆಸಿದ ಮೇಲಧಿಕಾರಿಗಳು, ಪ್ರಾಥಮಿಕ ತನಿಖೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧದ ಆರೋಪಗಳು ನಿಜವೆಂದು ದೃಢಪಟ್ಟಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್, ಆಪಾದಿತ ಪೊಲೀಸ್ ಅಧಿಕಾರಿಯನ್ನು ಅಮಾನತಗೊಳಿಸಿ, ಈ ಬಗ್ಗೆ ತನಿಖೆ ನಡೆಸಲು ಇಲಾಖೆಗೆ ಆದೇಶ ನೀಡಿದ್ದಾರೆ.