ಸಮರ್ಪಕ ಚಿಕಿತ್ಸೆ ಸಿಗದೆ ರೋಗಿ ಸಾವು, 11 ಗಂಟೆಗಳ ಕಾಲ ಅನಾಥವಾಗಿ ಬಿದ್ದಿತ್ತು ಶವ
ವೈದ್ಯೋ ನಾರಾಯಣೋ ಹರಿಃ ಅಂತಾರೆ, ವೈದ್ಯರನ್ನು ದೇವರಂತೆ ಜನ ಕಾಣುತ್ತಾರೆ. ಯಾವುದೇ ರೋಗವನ್ನು ಗುಣ ಮಾಡುವ ಶಕ್ತಿ ಅವರಲ್ಲಿದೆ ಎನ್ನುವ ನಂಬಿಕೆ. ಆದರೆ ಕೆಲವೊಂದು ಘಟನೆಗಳು ಜನರ ನಂಬಿಕೆಯನ್ನು ತಲೆಕೆಳಗಾಗಿಸುತ್ತವೆ. ಆಸ್ಪತ್ರೆ(Hospital)ಯ ನಿರ್ಲಕ್ಷ್ಯದಿಂದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಷ್ಟೇ ಅಲ್ಲದೆ. ಶವ 11 ಗಂಟೆಗಳ ಕಾಲ ಅನಾಥವಾಗಿ ಅಲ್ಲೇ ಬಿದ್ದಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಕಾನ್ಪುರ, ಆಗಸ್ಟ್ 12: ವೈದ್ಯೋ ನಾರಾಯಣೋ ಹರಿಃ ಅಂತಾರೆ, ವೈದ್ಯರನ್ನು ದೇವರಂತೆ ಜನ ಕಾಣುತ್ತಾರೆ. ಯಾವುದೇ ರೋಗವನ್ನು ಗುಣ ಮಾಡುವ ಶಕ್ತಿ ಅವರಲ್ಲಿದೆ ಎನ್ನುವ ನಂಬಿಕೆ. ಆದರೆ ಕೆಲವೊಂದು ಘಟನೆಗಳು ಜನರ ನಂಬಿಕೆಯನ್ನು ತಲೆಕೆಳಗಾಗಿಸುತ್ತವೆ. ಆಸ್ಪತ್ರೆ(Hospital)ಯ ನಿರ್ಲಕ್ಷ್ಯದಿಂದ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಷ್ಟೇ ಅಲ್ಲದೆ. ಶವ 11 ಗಂಟೆಗಳ ಕಾಲ ಅನಾಥವಾಗಿ ಅಲ್ಲೇ ಬಿದ್ದಿದ್ದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
25 ವರ್ಷದ ರೋಗಿಯೊಬ್ಬರಿಗೆ ಸಮರ್ಪಕ ಚಿಕಿತ್ಸೆ ನೀಡದ ಕಾರಣ ಸಾವನ್ನಪ್ಪಿದ್ದಾರೆ. ಅವರ ಶವ 11 ಗಂಟೆಗಳ ಕಾಲ ಹಾಸಿಗೆ ಮೇಲೆಯೇ ಇತ್ತು. ಆಸ್ಪತ್ರೆಯ ಮೂಲಗಳ ಪ್ರಕಾರ, ಸುಂದರ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಶನಿವಾರ ಮಧ್ಯಾಹ್ನ 1.15 ರ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆತಂದರು.
ಅವರು ಪ್ರಜ್ಞಾಹೀನರಾಗಿದ್ದರು ಮತ್ತು ಮಾತನಾಡಲು ಸಾಧ್ಯವಾಗಲಿಲ್ಲ. ವೈದ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಅವರು ನಿರಂತರವಾಗಿ ವಾಂತಿ ಮಾಡುತ್ತಿರುವುದು ಕಂಡುಬಂದಿತ್ತು, ಅವರ ಸ್ಥಿತಿ ಗಂಭೀರವಾಗಿತ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮತ್ತಷ್ಟು ಓದಿ: ಏನೋ ಕಚ್ಚಿದೆ ಎಂದು ಲಿವ್ ಇನ್ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾದ ಗೆಳೆಯ, ಆಕೆ ಸಾವು
ಆದರೆ, ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಆಸ್ಪತ್ರೆ ಸಿಬ್ಬಂದಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಹೇಳುವ ಪ್ರಕಾರ, ಯಾವುದೇ ಸಿಬ್ಬಂದಿ ಬಂದಿಲ್ಲ, ರೋಗಿಯನ್ನು ಗಮನಿಸಿದೆ ಅಲ್ಲೇ ಬಿಟ್ಟಿದ್ದಾರೆ. ಸಾಕಷ್ಟು ಆರೈಕೆಯಿಲ್ಲದೆ ಗಂಟೆಗಳು ಕಳೆದಿತ್ತು, ಸುಂದರ್ ಅವರ ಸ್ಥಿತಿ ಹದಗೆಟ್ಟಿತು ಮತ್ತು ಅವರು ರಾತ್ರಿ 11 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.
ಸಾವಿನ ನಂತರ ಆಸ್ಪತ್ರೆ ಸಿಬ್ಬಂದಿ ಶವವನ್ನು ವಾರ್ಡ್‌ನಲ್ಲಿಯೇ ಬಿಟ್ಟು ಹೋಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ರಾತ್ರಿಯಿಡೀ, ಕೊಳೆತ ದೇಹದ ದುರ್ವಾಸನೆಯಿಂದಾಗಿ ಇತರ ರೋಗಿಗಳು ಕೊಠಡಿಯಿಂದ ಹೊರಹೋಗಬೇಕಾಯಿತು. ಘಟನೆಯ ಬಗ್ಗೆ ತಿಳಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಸ್ಪತ್ರೆಗೆ ಭೇಟಿ ನೀಡಿ, ಈ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ತನಿಖೆಗೆ ಆದೇಶಿಸಿದರು. ಅವರು ಆಸ್ಪತ್ರೆಗೆ ತಕ್ಷಣ ಶವವನ್ನು ಹೊರತೆಗೆಯಲು ನಿರ್ದೇಶಿಸಿದರು. ಬೆಳಗ್ಗೆ 9 ಗಂಟೆ ಸುಮಾರಿಗೆ, ಹೊರಗುತ್ತಿಗೆ ಪಡೆದ ಸ್ವೀಪರ್ ಮೂಲಕ ಶವವನ್ನು ಅಂತಿಮವಾಗಿ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಈ ಘಟನೆಯು ಆಸ್ಪತ್ರೆ ಸಿಬ್ಬಂದಿಯ ಸ್ಪಷ್ಟ ಉದಾಸೀನತೆ ಮತ್ತು ಗಮನಿಸದ ರೋಗಿಗಳನ್ನು ನಿರ್ವಹಿಸುವಲ್ಲಿನ ವ್ಯವಸ್ಥಿತ ವೈಫಲ್ಯದ ವಿರುದ್ಧ ಆಕ್ರೋಶವನ್ನು ಹುಟ್ಟುಹಾಕಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Tue, 12 August 25




