ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು; 6 ತಿಂಗಳೊಳಗೆ ಮರು ಪರೀಕ್ಷೆಗೆ ಸಿಎಂ ಆದಿತ್ಯನಾಥ್ ಆದೇಶ

|

Updated on: Feb 24, 2024 | 4:52 PM

ಅತ್ಯಂತ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಯುಪಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ 2024 ಅನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಯಾವುದೇ ಹಂತದಲ್ಲಿ ಯಾವುದೇ ನಿರ್ಲಕ್ಷ್ಯದ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಆದೇಶಿಸಿದೆ.

ಯುಪಿ ಪೊಲೀಸ್ ನೇಮಕಾತಿ ಪರೀಕ್ಷೆ ರದ್ದು; 6 ತಿಂಗಳೊಳಗೆ ಮರು ಪರೀಕ್ಷೆಗೆ ಸಿಎಂ ಆದಿತ್ಯನಾಥ್ ಆದೇಶ
ಯೋಗಿ ಆದಿತ್ಯನಾಥ್
Follow us on

ದೆಹಲಿ ಫೆಬ್ರವರಿ 24 : ರಾಜ್ಯದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಉತ್ತರ ಪ್ರದೇಶ (Uttar Pradesh)  ಸರ್ಕಾರ ಶನಿವಾರ ಹೇಳಿದೆ. ಈ ಬಗ್ಗೆ ‘ಎಕ್ಸ್’ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಆರು ತಿಂಗಳೊಳಗೆ  ಮರು ಪರೀಕ್ಷೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. “ಪರೀಕ್ಷೆ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಯುವಕರ ಶ್ರಮ ಹಾಳಾಗುವಂತೆ ಮಾಡುವವರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ. ಇಂತಹ ಅಶಿಸ್ತಿನ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ,” ಎಂದು ಅವರು ಹೇಳಿದ್ದಾರೆ. 2024 ಫೆಬ್ರವರಿ 17 ಮತ್ತು 18ರಂದು ಪರೀಕ್ಷೆ ನಡೆದಿತ್ತು.

ವಿವಿಧ ವಿವಾದಗಳ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಆದೇಶ ಹೊರಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗಳು, ಒಬ್ಬರ ಬದಲು ಇನ್ನೊಬ್ಬರು ಪರೀಕ್ಷೆ ಬರೆಯುವುದು, ಪ್ರವೇಶ ಕಾರ್ಡ್‌ನಲ್ಲಿ ಅನುಚಿತವಾದ ಚಿತ್ರ, ಕಿಕ್ಕಿರಿದ ರೈಲುಗಳು ಮತ್ತು ಪರೀಕ್ಷಾ ಆವರಣದಲ್ಲಿ ಇತರ ತಪ್ಪು ವ್ಯವಸ್ಥೆಗಳು ವರದಿ ಆಗಿದ್ದವು


ಈ ಹಿಂದೆ, ಈ ವಿಷಯದ ತನಿಖೆಗಾಗಿ, ನೇಮಕಾತಿ ಮಂಡಳಿಯಿಂದ ಆಂತರಿಕ ಸಮಿತಿಯನ್ನು ರಚಿಸಲಾಗಿತ್ತು. ಪೇಪರ್ ಸೋರಿಕೆ ಪ್ರಕರಣದ ತನಿಖೆಯನ್ನು ಐಪಿಎಸ್ ರೇಣುಕಾ ಮಿಶ್ರಾ ಮತ್ತು ಐಪಿಎಸ್ ಸತ್ಯಾರ್ಥ್ ಪಂಕಜ್ ನಡೆಸುತ್ತಿದ್ದರು. ಫೆಬ್ರವರಿ 23, 2024 ರ ಹೊತ್ತಿಗೆ, ಪುರಾವೆಗಳೊಂದಿಗೆ ಸುಮಾರು 1496 ದೂರುಗಳನ್ನು ಸ್ವೀಕರಿಸಲಾಗಿದ್ದು ಈ ದೂರುಗಳ ಬಗ್ಗೆ ಸಮಿತಿಯು ತನಿಖೆ ನಡೆಸುತ್ತಿದೆ.

ಅತ್ಯಂತ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಯುಪಿ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ 2024 ಅನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಯಾವುದೇ ಹಂತದಲ್ಲಿ ಯಾವುದೇ ನಿರ್ಲಕ್ಷ್ಯದ ವಿರುದ್ಧ ಎಫ್‌ಐಆರ್ ದಾಖಲಿಸಲು ಅಧಿಕಾರಿಗಳಿಗೆ ಆದೇಶಿಸಿದೆ.

ಇದನ್ನೂ ಓದಿ:  ಉತ್ತರ ಪ್ರದೇಶ: ಯೂಟ್ಯೂಬ್ ವಿಡಿಯೊ ನೋಡಿ ಟ್ರಿಕ್ ಕಲಿತು 500 ಕ್ಕೂ ಹೆಚ್ಚು ಕಾರು ಕದ್ದ ಕಳ್ಳರು

ಹೆಚ್ಚುವರಿಯಾಗಿ, ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಮೂಲಕ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಮತ್ತು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ಸರ್ಕಾರ ಸೂಚನೆ ನೀಡಿದೆ. ಪರೀಕ್ಷೆಗೆ ಹಾಜರಾದ ಅನೇಕ ವಿದ್ಯಾರ್ಥಿಗಳು ಸಾಕಷ್ಟು ಪ್ರಯಾಣ ಸೌಲಭ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Sat, 24 February 24