AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

What India Thinks Today: ನೂತನ ಮುಖ್ಯಮಂತ್ರಿಗಳ ಆಡಳಿತ ಹೇಗಿದೆ? ಟಿವಿ9 ವೇದಿಕೆಯಲ್ಲಿ ಚರ್ಚೆ

ಟಿವಿ9 ನೆಟ್​​ವರ್ಕ್​​ ಆಯೋಜಿಸಿರುವ 'ವಾಟ್ ಇಂಡಿಯಾ ಟುಡೇ ಥಿಂಕ್ಸ್' ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಛತ್ತೀಸ್‌ಗಢ ಸಿಎಂ ವಿಷ್ಣುದೇವ್ ಸಾಯಿ ಅವರು ನವಭಾರತದ ಪ್ರಗತಿಗೆ ತಮ್ಮ ನೀಲನಕ್ಷೆ ಏನು? ಎಂಬ ಬಗ್ಗೆ ತಿಳಿಸಲಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ನಾಯಕರು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಆಡಳಿತ ಕಾರ್ಯವೈಖರಿ ಬಗ್ಗೆಯೂ ಚರ್ಚೆಯಾಗಲಿದೆ.

What India Thinks Today: ನೂತನ ಮುಖ್ಯಮಂತ್ರಿಗಳ ಆಡಳಿತ ಹೇಗಿದೆ? ಟಿವಿ9 ವೇದಿಕೆಯಲ್ಲಿ ಚರ್ಚೆ
TV9 Web
| Edited By: |

Updated on: Feb 24, 2024 | 5:39 PM

Share

TV9 ನೆಟ್‌ವರ್ಕ್ ವಾಟ್ ಇಂಡಿಯಾ ಥಿಂಕ್ಸ್ ಟುಡೆ ಎಂಬ ಕಾರ್ಯಕ್ರಮವನ್ನು ಮಾಡುತ್ತಿದೆ. ಈ ಕಾರ್ಯಕ್ರಮ ದೆಹಲಿಯಲ್ಲಿ ಮೂರು ದಿನಗಳ ಕಾಲ (ಫೆ.25ರಿಂದ 27ರವರೆಗೆ) ನಡೆಯಲಿದೆ. ಇನ್ನು ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅನೇಕ ರಾಜಕೀಯ ತಜ್ಞರು ಭಾಗವಹಿಸಲಿದ್ದಾರೆ. ಎರಡು ರಾಜ್ಯಗಳಾದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢನ ನೂತನ ಮುಖ್ಯಮಂತ್ರಿಗಳು ಕೂಡ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. ಇವರು ನವ ಭಾರತಕ್ಕೆ ಸಂಬಂಧಿಸಿದ ವಿಚಾರಕ್ಕೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.

‘ಭಾರತ ಇಂದು ಏನು ಯೋಚಿಸುತ್ತದೆ’ ಕಾರ್ಯಕ್ರಮದಲ್ಲಿ ಇವರು ‘ಹೊಸ ಭಾರತದ ಗ್ಯಾರಂಟಿ’ ಬಗ್ಗೆ ಸಂವಾದ ನಡೆಸಲಿದ್ದಾರೆ. ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಛತ್ತೀಸ್‌ಗಢ ಸಿಎಂ ವಿಷ್ಣುದೇವ್ ಸಾಯಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನವಭಾರತದ ಪ್ರಗತಿಗೆ ತಮ್ಮ ನೀಲನಕ್ಷೆಯನ್ನು ಇಲ್ಲಿ ತಿಳಿಸಲಿದ್ದಾರೆ. ಇನ್ನು ಇವರು ಮುಖ್ಯಮಂತ್ರಿಗಳಾಗಿರುವುದು ಅಚ್ಚರಿಯ ವಿಷಯ, ಏಕೆಂದರೆ ಅವರು ತಾವು ಸಿಎಂ ಆಗುತ್ತವೆ ಎಂಬ ಊಹೆ ಕೂಡ ಇರಲಿಲ್ಲ. ಇನ್ನು ಈ ಇಬ್ಬರು ಸಿಎಂಗಳು ಮೊದಲ ಬಾರಿಗೆ ಶಾಸಕರಾಗಿ ಮುಖ್ಯಮಂತ್ರಿ ಹುದ್ದೆಯನ್ನಯ ಅಲಂಕಾರಿಸಿದ್ದಾರೆ. ಟಿವಿ9 ವೇದಿಕೆಯಲ್ಲಿ ಅವರು 2047ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಯೋಜನೆಯ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು.

ಮೋಹನ್ ಯಾದವ್: 2013 ರಲ್ಲಿ ಶಾಸಕ, 2023 ರಲ್ಲಿ ಸಿಎಂ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಸೇರಿದಂತೆ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಹೆಸರನ್ನು ಪ್ರಕಟಿಸಲು ಸಾಕಷ್ಟು ಸಮಯವನ್ನು ಬಿಜೆಪಿ ಹೈಕಮಾಂಡ್​​ ತೆಗೆದುಕೊಂಡಿತ್ತು. ಹಾಗೆಯೇ ಮಧ್ಯಪ್ರದೇಶದಲ್ಲೂ ಡಾ.ಮೋಹನ್ ಯಾದವ್ ಅವರನ್ನು ಸಿಎಂ ಮಾಡಲಾಗಿತ್ತು. ಅವರು ಮೂರನೇ ಬಾರಿಗೆ ಶಾಸಕರಾದರು ಮತ್ತು ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರು.

ಇದನ್ನೂ ಓದಿ: ರೈತರ ಚಳವಳಿಗೆ ಪರಿಹಾರವೇನು? ಟಿವಿ9 ವೇದಿಕೆಯಲ್ಲಿ ಕೃಷಿ ಸಚಿವ ಅರ್ಜುನ್ ಮುಂಡಾ ಉತ್ತರ ಏನು?

ಡಾ. ಮೋಹನ್ ಯಾದವ್ ಅವರು ಉಜ್ಜಯಿನಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಂಸದರಾಗಿದ್ದಾರೆ. 2013ರಲ್ಲಿ ಪ್ರಥಮ ಬಾರಿಗೆ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2018ರ ಚುನಾವಣೆಯಲ್ಲೂ ಯಾದವ್ ಇಲ್ಲಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2020ರಲ್ಲಿ ರಾಜ್ಯದಲ್ಲಿ ಮತ್ತೆ ಶಿವರಾಜ್ ಸಿಂಗ್ ಚೌಹಾಣ್ ಅವರ ಸರ್ಕಾರ ರಚನೆಯಾದಾಗ ಅವರನ್ನು ಉನ್ನತ ಶಿಕ್ಷಣ ಸಚಿವರನ್ನಾಗಿ ಮಾಡಲಾಯಿತು. ಡಿಸೆಂಬರ್ 2023 ರಲ್ಲಿ ನಡೆದ ಚುನಾವಣೆಯಲ್ಲಿ, ಮೋಹನ್ ಯಾದವ್ ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ 13 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಅಲ್ಲಿಂದ ಮುಖ್ಯಮಂತ್ರಿ ಸ್ಥಾನವು ಸಿಕ್ಕಿದೆ.

ವಿಷ್ಣುದೇವ್ ಸಾಯಿ: ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ

ಛತ್ತೀಸ್‌ಗಢದಲ್ಲಿಯೂ ಬಿಜೆಪಿ ಚುನಾವಣೆಯಲ್ಲಿ ಗೆದ್ದ ನಂತರ ಮುಖ್ಯಮಂತ್ರಿ ಹೆಸರನ್ನು ಘೋಷಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ಆದರೆ, ಹಲವು ಸುತ್ತಿನ ಮಾತುಕತೆಯ ನಂತರ ಬಿಜೆಪಿ ಆದಿವಾಸಿ ನಾಯಕ ವಿಷ್ಣುದೇವ್ ಸಾಯಿ ಅವರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಾಗಿತ್ತು. ಇವರಿಗೆ ಆಡಳಿತದ ಅನುಭವ ಹೆಚ್ಚಿತ್ತು. 2020ರಿಂದ 2022ರವರೆಗೆ ಛತ್ತೀಸ್‌ಗಢದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ವಿಷ್ಣುದೇವ್ ಸಾಯಿ ಅವರು ಕೃಷಿಕರು ಹೌದು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದರು.

ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ‘ಭಾರತ ಇಂದು ಏನು ಯೋಚಿಸುತ್ತದೆ’ ಮೂರನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜತೆಗೆ 7 ರಾಜ್ಯಗಳ ಮುಖ್ಯಮಂತ್ರಿಗಳೂ ಕೂಡ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ