AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗ್ನಾವಸ್ಥೆಯಲ್ಲಿ ಯುಪಿಯ ರಾಂಪುರ ನಗರದ ಓಣಿಯಲ್ಲಿ ಮೋಹನಿಯಂತೆ ಸುತ್ತುತ್ತಿದ್ದ ಮಹಿಳೆಯ ಗುರುತು ಪತ್ತೆ ಮಾಡಿದ ಪೊಲೀಸ್!

ಫೆಬ್ರುವರಿ 3 ರಂದು ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋವೊಂದನ್ನು ಟ್ವೀಟ್ ಮಾಡಿ ಮಹಿಳೆ ಪುನಃ ರಸ್ತೆಯ ಮೇಲೆ ಅಂಥ ಸ್ಥಿತಿಯಲ್ಲಿ ಓಡಾಡುತ್ತಿರುವುದು ಕಾಣಿಸಿದರೆ, ಮೊದಲು ಆಕೆಯ ಮೈಮೇಲೆ ಬಟ್ಟೆ ಹೊದೆಸಿ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸುವಂತೆ ಗ್ರಾಮದ ನಿವಾಸಿಗಳಿಗೆ ವಿನಂತಿಸಿಕೊಂಡಿದ್ದರು.

ನಗ್ನಾವಸ್ಥೆಯಲ್ಲಿ ಯುಪಿಯ ರಾಂಪುರ ನಗರದ ಓಣಿಯಲ್ಲಿ ಮೋಹನಿಯಂತೆ ಸುತ್ತುತ್ತಿದ್ದ ಮಹಿಳೆಯ ಗುರುತು ಪತ್ತೆ ಮಾಡಿದ ಪೊಲೀಸ್!
ಯುಪಿಯ ಮಾನಸಿಕ ಅಸ್ವಸ್ಥ ಮಹಿಳೆ
ಅರುಣ್​ ಕುಮಾರ್​ ಬೆಳ್ಳಿ
|

Updated on: Feb 04, 2023 | 3:12 PM

Share

ಉತ್ತರ ಪ್ರದೇಶದ ರಾಂಪುರನಲ್ಲಿ ಮಹಿಳೆಯೊಬ್ಬಳು ಸಂಪೂರ್ಣ ನಗ್ನ ಸ್ಥಿತಿಯಲ್ಲಿ (naked) ತನ್ನ ಮನೆಯಿಂದ ರಾತ್ರಿ ಸಮಯ ಹೊರಬಂದು ನೆರೆಹೊರೆಯವರ ಮನೆಗಳ ಕರೆಗಂಟೆಗಳನ್ನು (calling bells) ಅದುಮುತ್ತಾ ತಿರುಗಾಡುತ್ತಿದ್ದ ಸುದ್ದಿ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದ ಬಳಿಕ ಪ್ರಕರಣವನ್ನು ಕೈಗೆತ್ತ್ತಿಕೊಂಡು ತನಿಖೆ ನಡೆಸಿದ ಸ್ಥಳೀಯ ಪೊಲೀಸರು ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಹೇಳಿಕೆಯ ಪ್ರಕಾರ ಮಹಿಳೆಯ ವಿಳಾಸವನ್ನು ಪತ್ತೆ ಮಾಡಿ ಆಕೆಯ ತಂದೆ ತಾಯಿಗಳೊಂದಿಗೆ ಮಾತುಕತೆ ನಡೆಸಿದಾಗ ನಗ್ನವಾಗಿ ಓಡಾಡುವ ಮಹಿಳೆ ಕಳೆದ 5 ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ (mental illness) ಬಳಲುತ್ತಿರುವುದು ಗೊತ್ತಾಗಿದೆ ಮತ್ತು ಈಗಲೂ ಆಕೆಯ ಕಾಯಿಲೆಗೆ ಬರೇಲಿಯಲ್ಲಿ ಚಿಕಿತ್ಸೆ ಜಾರಿಯಲ್ಲಿದೆ. ಆಕೆ ಮನೆಯಿಂದ ಹೊರಬರದಂತೆ ನಿಗಾ ವಹಿಸಲು ತಂದೆತಾಯಿಗಳಿಗೆ ಕೋರಲಾಗಿದೆ ಮತ್ತು ಸಾರ್ವಜನಿಕರಿಗೆ ಆಕೆಯನ್ನು ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ತೆರನಾದ ಅಪಪ್ರಚಾರದಲ್ಲಿ ತೊಡಗದಂತೆ ಮನವಿ ಮಾಡಲಾಗಿದೆ ಅಂತಲೂ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ನೋಡಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಶಾರುಖ್​ ಖಾನ್​ ಅಭಿಮಾನಿಗಳು

ಜನೆವರಿ 29 ರಂದು ಪ್ರಕರಣ ಬೆಳಕಿಗೆ

ಸ್ಥಳೀಯ ವ್ಯಕ್ತಿಯೊಬ್ಬರು ಜನೆವರಿ 29 ರಂದು ಪೊಲೀಸರಿಗೆ ದೂರು ಸಲ್ಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಕೂಡಲೇ ತನಿಖೆ ಶುರುಮಾಡಿದ್ದಾರೆ. ರಾಂಪುರ ಮಿಲಾಕ್ ಹೆಸರಿನ ಗ್ರಾಮದಲ್ಲಿ ಈ ಮಹಿಳೆಯು ಬೆತ್ತಲೆಯಾಗಿ ರಸ್ತೆಗಳಲ್ಲಿ ಓಡಾಡುತ್ತಿದ್ದಿದ್ದು ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆದ ಸಿಸಿಟಿವಿ ಪುಟೇಜ್ ವಿಡಿಯೋಗೆ ಪ್ರತಿಕ್ರಿಯಿಸಿದ ರಾಂಪುರ ಪೊಲೀಸ್, ಪ್ರಕರಣವನ್ನು ತನಿಖೆ ಮಾಡಲು ಒಂದು ವಿಶೇಷ ತಂಡ ರಚಿಸಲಾಗಿದೆ ಎಂದು ಫೆಬ್ರುವರಿ 2 ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. 

ಫೆಬ್ರುವರಿ 3 ರಂದು ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋವೊಂದನ್ನು ಟ್ವೀಟ್ ಮಾಡಿ ಮಹಿಳೆ ಪುನಃ ರಸ್ತೆಯ ಮೇಲೆ ಅಂಥ ಸ್ಥಿತಿಯಲ್ಲಿ ಓಡಾಡುತ್ತಿರುವುದು ಕಾಣಿಸಿದರೆ, ಮೊದಲು ಆಕೆಯ ಮೈಮೇಲೆ ಬಟ್ಟೆ ಹೊದೆಸಿ ಹತ್ತಿರದ ಪೊಲೀಸ್ ಠಾಣೆಗೆ ವಿಷಯ ತಿಳಿಸುವಂತೆ ಗ್ರಾಮದ ನಿವಾಸಿಗಳಿಗೆ ವಿನಂತಿಸಿಕೊಂಡಿದ್ದರು. ಸಿಸಿಟಿವಿ ಫುಟೇಜ್ ಮೂಲಕ ಆಕೆಯ ಗುರುತು ಪತ್ತೆಹೆಚ್ಚಲು ಪ್ರಯತ್ನಿಸಲಾಗುತ್ತಿದ್ದು ಅದು ಗೊತ್ತಾದ ಬಳಿಕ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಅಂತ ಅವರು ಹೇಳಿದ್ದರು.

ನೆಟ್ಟಿಗರ ಆಕ್ರೋಶ

ಏತನ್ಮಧ್ಯೆ, ನೆಟ್ಟಿಗರು ಮಹಿಳೆಯ ಸುರಕ್ಷತೆ ಬಗ್ಗೆ ಅತಂಕ ಮತ್ತು ಕಳವಳ ವ್ಯಕ್ತಪಡಿಸಿ ಪೊಲೀಸರ ಕಾರ್ಯಕ್ಷಮತೆಯನ್ನು ಪ್ರಶ್ನಿಸಲಾರಂಭಿಸಿದ್ದರು. ಒಬ್ಬ ಯೂಸರ್, ‘ರಾಂಪುರದ ರಸ್ತೆಗಳಲ್ಲಿ ಆಕೆ ಬೆಳಗಿನ ಜಾವ 1.30 ಕ್ಕೆ ನಗ್ನಳಾಗಿ ಓಡಾಡುತ್ತಿದ್ದಾಳೆ. ಆಕೆ ಎಲ್ಲೆಲ್ಲಿ ಓಡಾಡಿದ್ದಾಳೆ ಅಂತ ನಿಮಗೇನಾದರೂ ಗೊತ್ತಾಯಿತಾ? ಇಷ್ಟಕ್ಕೂ ವಿಷಯ ಏನು ಅನ್ನೋದು ನಿಮ್ಮ ಗಮನಕ್ಕೆ ಬಂದಿದೆಯಾ? ಏನೆಲ್ಲ ನಡೆದರಿಬಹುದಾದ ಸಾಧ್ಯತೆಯ ಬಗ್ಗೆ ಯೋಚಿಸಿದ್ದೀರಾ? ಸಿಸಿಟಿವಿ ಫುಟೇಜ್ ನಲ್ಲಿ ಸೆರೆಯಾಗಿರುವಂತೆ ಬೆಳಗಿನ ಜಾವ 3 ಗಂಟೆಯವರಗೆ ಆಕೆ ಬೆತ್ತಲೆ ಓಡಾಡಿದ್ದಾಳೆ. ಅಲ್ಲಿಂದ ಏನಾಯ್ತು? ಪೊಲೀಸರು ಎಲ್ಲಿದ್ದರು? ಕಾನೂನು ಸುವ್ಯವಸ್ಥೆ ಕಾಪಾಡುವವರು ಕೆಲಸ ಮಾಡುವ ರೀತಿ ಇದೇನಾ? ಉತ್ತರ ಪ್ರದೇಶದ ಪೊಲೀಸ್ ವ್ಯವಸ್ಥೆಗೆ ನಾಚಿಕೆಯಾಗಬೇಕು,’ ಅಂತ ಖಂಡಿಸಿದ್ದಾರೆ.

ಇಟಲಿ ಮಹಿಳೆಯ ಹುಚ್ಚಾಟ

ಸೋಮವಾರಂದು ವಿಸ್ತಾರ ವಿಮಾನದಲ್ಲಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಅರೆಬೆತ್ತಲೆಯಾಗಿ ವಿಮಾನ ನಿಲ್ದಾಣದಲ್ಲಿ ನಡೆದು ಬಂದ ಇಟಾಲಿಯನ್ ಮಹಿಳೆಯೊಬ್ಬಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು. 45-ವರ್ಷ-ವಯಸ್ಸಿನ ಪಾವೋಲ ಪೆರುಸಿಯೋ ಹೆಸರಿನ ಮಹಿಳೆ ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದರೂ ಬಿಸನೆಸ್ ಕ್ಲಾಸ್ ಆಸನದಲ್ಲಿ ಕೂರುವ ಪ್ರಯತ್ನ ಮಾಡಿದ್ದಳು. ವಿಮಾನದ ಸಿಬ್ಬಂದಿ ಅಕ್ಷೇಪಿಸಿದಾಗ ಅವರ ಮೇಲೆ ಹಲ್ಲೆ ನಡೆಸಿದ್ದಳು.

ಇದನ್ನೂ ಓದಿ:  Kashmir Unity Day: ದೇಶದಲ್ಲಿ ಹಸಿವು, ಬಡತನವಿದ್ದರೂ ಕಾಶ್ಮೀರ ಮಾತ್ರ ಬೇಕು: ಪಾಕಿಸ್ತಾನದ ಹೊಸ ಷಡ್ಯಂತ್ರ

ದೂರಿನ ಪ್ರಕಾರ ವಿಸ್ತಾರ ಫ್ಲೈಟ್ ಅಬುಧಾಬಿ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಬಳಿಕ ಘಟನೆ ನಡೆದಿತ್ತು. ಜನೆವರಿ 30 ರಂದು ಬೆಳಗಿನ ಜಾವ 4.53 ಕ್ಕೆ ವಿಮಾನ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಭದ್ರತಾ ಸಿಬ್ಬಂದಿಯು ಇಟಲಿ ಮಹಿಳೆಯನ್ನು ಸಹರ್ ಪೊಲೀಸರಿಗೆ ಒಪ್ಪಿಸಿತ್ತು.

ಮತ್ತಷ್ಟು ದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ