ಉತ್ತರ ಪ್ರದೇಶ: ಪ್ರೇಯಸಿಗೆ ಸ್ಕ್ರೂಡ್ರೈವರ್​​ನಿಂದ 18 ಬಾರಿ ಇರಿದು ಕೊಂದ ಪ್ರೇಮಿ

ವ್ಯಕ್ತಿಯೊಬ್ಬ ಪ್ರೇಯಸಿಗೆ ಸ್ಕ್ರೂಡ್ರೈವರ್​ನಿಂದ 18 ಬಾರಿ ಇರಿದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ರಕ್ತಸಿಕ್ತವಾಗಿದ್ದ ಆಕೆಯ ದೇಹವು ಮೊರಾದಾಬಾದ್​ನ ಹಳ್ಳಿಯೊಂದರ ಹೊಲದಲ್ಲಿ ಭಾನುವಾರ ಪತ್ತೆಯಾಗಿದೆ. ಅವರ ಪ್ರಿಯಕರನೇ  ಸ್ಕ್ರೂಡ್ರೈವರ್‌ನಿಂದ ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮೃತಳನ್ನು ಸಾಯಿರಾ ಎಂದು ಗುರುತಿಸಲಾಗಿದೆ. ಶನಿವಾರ ಸಾಯಿರಾ ದನಗಳಿಗೆ ಮೇವು ತರಲು ಮನೆಯಿಂದ ಹೊರಗೆ ಹೋಗಿದ್ದರು.

ಉತ್ತರ ಪ್ರದೇಶ: ಪ್ರೇಯಸಿಗೆ ಸ್ಕ್ರೂಡ್ರೈವರ್​​ನಿಂದ 18 ಬಾರಿ ಇರಿದು ಕೊಂದ ಪ್ರೇಮಿ
ಕೊಲೆಯಾದ ಮಹಿಳೆ

Updated on: Jun 03, 2025 | 2:55 PM

ಮೊರಾದಾಬಾದ್, ಜೂನ್ 03: ವ್ಯಕ್ತಿಯೊಬ್ಬ ಪ್ರೇಯಸಿಗೆ ಸ್ಕ್ರೂಡ್ರೈವರ್​ನಿಂದ 18 ಬಾರಿ ಇರಿದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ರಕ್ತಸಿಕ್ತವಾಗಿದ್ದ ಆಕೆಯ ದೇಹವು ಮೊರಾದಾಬಾದ್​ನ ಹಳ್ಳಿಯೊಂದರ ಹೊಲದಲ್ಲಿ ಭಾನುವಾರ ಪತ್ತೆಯಾಗಿದೆ. ಅವರ ಪ್ರಿಯಕರನೇ  ಸ್ಕ್ರೂಡ್ರೈವರ್‌ನಿಂದ ಚಿತ್ರಹಿಂಸೆ ನೀಡಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮೃತಳನ್ನು ಸಾಯಿರಾ ಎಂದು ಗುರುತಿಸಲಾಗಿದೆ. ಶನಿವಾರ ಸಾಯಿರಾ ದನಗಳಿಗೆ ಮೇವು ತರಲು ಮನೆಯಿಂದ ಹೊರಗೆ ಹೋಗಿದ್ದರು.

ಆದರೆ ಸಂಜೆಯವರೆಗೂ ಮನೆಗೆ ಹಿಂತಿರುಗಲಿಲ್ಲ. ಆಕೆಯ ಕುಟುಂಬ ಆಕೆಗಾಗಿ ಹುಡುಕಾಟ ಆರಂಭಿಸಿತು. ಮರುದಿನ ಮೊರಾದಾಬಾದ್‌ನ ಕೊಟ್ವಾಲಿ ಮೈನಾಥರ್‌ನಲ್ಲಿರುವ ಹೊಲಗಳಲ್ಲಿ ಆಕೆಯನ್ನು ಹುಡುಕಲು ಹೋದಾಗ ಆಕೆಯ ಶವ ಪತ್ತೆಯಾಗಿತ್ತು.

ಪ್ರಾಥಮಿಕ ತನಿಖೆಯಲ್ಲಿ ಅವರ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗುತ್ತಿದ್ದರಿಂದ, ಕೊಲೆಗೂ ಮುನ್ನ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿಲ್ಲ ಎಂದು ದೃಢಪಟ್ಟಿದ್ದು, ಅವರನ್ನು ಹರಿತವಾದ ಆಯುಧದಿಂದ ಇರಿದಿರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ
ಇನ್ಮುಂದೆ ಗುಟ್ಕಾ ಉಗುಳುವುದು, ಸಿಗರೇಟ್ ಸೇದಿದ್ರೆ 4 ಪಟ್ಟು ದಂಡ
ಹಿಟ್ ಆ್ಯಂಡ್​ ರನ್​​ಗೆ ತಂದೆ-ಮಗಳು ಬಲಿ: ದೇವಸ್ಥಾನಕ್ಕೆ ಹೊರಟವರು ಮಸಣಕ್ಕೆ
ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್:ಹಲವಡೆ ಲೋಕಾಯುಕ್ತ ದಾಳಿ
ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ, ಅಧಿಕಾರಿಗಳ ವಿರುದ್ಧ ದೂರು

ಮೊಬೈಲ್ ಫೋನ್ ಅನ್ನು ಸ್ಕ್ಯಾನ್ ಮಾಡುವಾಗ, ಪೊಲೀಸರು ಐದು ಮಿಸ್ಡ್ ಕಾಲ್‌ ಕಂಡಿದೆ.ಕರೆಗಳನ್ನು ಮಾಡಿದ ಸಂಖ್ಯೆಯನ್ನು ಪರಿಶೀಲಿಸಿದಾಗ, ಅದು ಸಾಯಿರಾ ಅವರ ಹಳ್ಳಿಯ ಅದೇ ಗ್ರಾಮದಲ್ಲಿ ವಾಸಿಸುವ ರಫಿ ಎಂಬ ವ್ಯಕ್ತಿಯದ್ದಾಗಿರುವುದು ಪತ್ತೆಯಾಗಿದೆ.

ರಫಿ ತನ್ನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಸಾಯಿರಾಳ ತಾಯಿ ಸಫಿನಾ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ರಫಿಯನ್ನು ವಿಚಾರಣೆಗೆ ಒಳಪಡಿಸಲು ವಶಕ್ಕೆ ಪಡೆದರು. ವಿಚಾರಣೆಯ ಸಮಯದಲ್ಲಿ, ರಫಿ ತಾನು ಸಾಯಿರಾಳನ್ನು ಕೊಂದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮತ್ತಷ್ಟು ಓದಿ: ಮಾಲೀಕನ್ನೇ ಹತ್ಯೆಗೈದ ದುರುಳರು: ಚಿನ್ನದ ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿದ್ರು

ರಫಿ ತಾನು ಸಾಯಿರಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದ, ಆದರೆ  ಅವರು ತನ್ನ ಭಾವನೆಗಳಿಗೆ ಪ್ರತಿಯಾಗಿ ಪ್ರತಿಕ್ರಿಯಿಸಲಿಲ್ಲ. ಕೆಲವು ದಿನಗಳ ಹಿಂದೆ, ಆಕೆ ಒಬ್ಬ ವ್ಯಕ್ತಿ ಕೈಯಿಂದ ನನಗೆ ಥಳಿಸಿದ್ದಾಳೆ, ಸಾಯಿರಾ ತನ್ನನ್ನು ಥಳಿಸಿದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಬಂದಿತ್ತು ಎಂದಿದ್ದಾನೆ.

ಘಟನೆಯ ನಂತರ, ಆತ ಸಾಯಿರಾಳನ್ನು ಎರಡು ದಿನಗಳ ಕಾಲ ಹಿಂಬಾಲಿಸಿದ್ದ. ಶನಿವಾರ, ಆತ ಮಹಿಳೆಯನ್ನು ಹೊಲಕ್ಕೆ ಹಿಂಬಾಲಿಸಿ  ಹೋಗಿ ಸ್ಕ್ರೂಡ್ರೈವರ್‌ನಿಂದ 18 ಬಾರಿ ಇರಿದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಯಿರಾ ನೋವಿನಿಂದ ನರಳಲು ಪ್ರಾರಂಭಿಸಿದಾಗ ಮತ್ತು ರಫಿ ಬಳಿ ತನ್ನ ಜೀವ ತೆಗೆಯಬೇಡ ಎಂದು ಬೇಡಿಕೊಂಡಾಗ ಆತ ಸ್ಕ್ರೂಡ್ರೈವರ್‌ನಿಂದ ಮಹಿಳೆಯ ಖಾಸಗಿ ಅಂಗಕ್ಕೆ ಚುಚ್ಚಿದ್ದಾನೆ, ಅವರು ಕೂಡಲೇ ಕೊನೆಯುಸಿರೆಳೆದಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:54 pm, Tue, 3 June 25