AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೀಕನ್ನೇ ಹತ್ಯೆಗೈದ ದುರುಳರು: ಚಿನ್ನದ ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿದ್ರು

ಬಿಹಾರ ಮೂಲದವರಿಗೆ ಕಟ್ಟಡ ನಿರ್ಮಾಣ ಕೆಲಸ ನೀಡಲಾಗಿತ್ತು. ಆದ್ರೆ, ಅವರ ಕಣ್ಣು ಕುಕ್ಕಿದ್ದು ಮಾತ್ರ ಮಾಲೀಕನ ಮೈಮೇಲಿದ್ದ ಚಿನ್ನಾಭರಣ. ಹೌದು.. ಕಟ್ಟಡ ನಿರ್ಮಾಣ ಕೆಲಸ ಕೊಟ್ಟು ಮನೆಯಲ್ಲಿ ಉಳಿಸಿಕೊಂಡಿದ್ದ ಕೂಲಿ ಕಾರ್ಮಿಕರಿಂದಲೇ ಮಾಲೀಕ ಬರ್ಬರವಾಗಿ ಕೊಲೆಯಾಗಿದ್ದಾನೆ. ಕೊಲೆ ಬಳಿಕ ಹಂತಕರು ಚಿನ್ನದ ಉಂಗುರಕ್ಕಾಗಿ ಆತನ ಕೈ ಬೆರಳನ್ನೇ ಕಟ್​ ಮಾಡಿಕೊಂಡು ಪರಾರಿಯಾಗಿದ್ದಾರೆ.

ಮಾಲೀಕನ್ನೇ ಹತ್ಯೆಗೈದ ದುರುಳರು: ಚಿನ್ನದ ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿದ್ರು
Vijayakumar Murder
ಮಂಜುನಾಥ ಕೆಬಿ
| Updated By: ರಮೇಶ್ ಬಿ. ಜವಳಗೇರಾ|

Updated on: May 31, 2025 | 1:50 PM

Share

ಹಾಸನ, (ಮೇ 31): ಚಿನ್ನಾಭರಣಕ್ಕಾಗಿ ಉದ್ಯೋಗ ಕೊಟ್ಟ ಮಾಲೀಕನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಅರಸೀಕೆರೆ (arsikere) ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಎನ್ನುವರನ್ನು ಕಾರ್ಮಿಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಅರಸೀಕೆರೆ ಪಟ್ಟಣದ ಕೆಎಸ್ ಆರ್​ ಟಿಸಿ ಬಸ್ ಡಿಪೋ ಮುಂಭಾಗದಲ್ಲಿ ಕಾಂಟ್ರಕ್ಟರ್ ವಿಜಯ್ ಕುಮಾರ್ ನನ್ನು ಚಿನ್ನದ ಒಡವೆಗಳನ್ನು ದೋಚುವುದಕ್ಕಾಗಿ ಅವರ ಬಳಿ ಕೆಲಸ ಮಾಡುತ್ತಿದ್ದವರೇ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ವಿಜಯ್​ ಮೈಮೇಲಿದ್ದ ಬಂಗಾರದ ಚಿನ್ನ ಹಾಗೂ ಕೈನಲ್ಲಿದ್ದ ಉಂಗುರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಅಚ್ಚರಿ ಅಂದ್ರೆ ಉಂಗುರು ತೆಗೆಯಲು ಬರಲಿಲ್ಲವೆಂದು ಕೈ ಬೆರಳನ್ನೇ ಕಟ್ ಮಾಡಿಕೊಂಡು ಕೊಂಡೊಯ್ದಿದ್ದಾರೆ.

ವಿಕ್ರಂನಿಗೆ ಮೊದಲಿನಿಂದಲೂ ವಿಜಯ್ ಕುಮಾರ್ ಮೈಮೇಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿತ್ತು. ಈ ಸಂಬಂಧ ಪತ್ನಿ ಹಾಗೂ ಮಕ್ಕಳನ್ನು ಊರಿನಲ್ಲಿ ಬಿಟ್ಟು ಮತ್ತೋರ್ವ ಸ್ನೇಹಿತನನ್ನು ಕರೆದುಕೊಂಡು ಬಂದಿದ್ದ. ಬಂದು ಒಂದು ವಾರದಲ್ಲಿ ನೆಪವೊಂದನ್ನು ಹೇಳಿ ವಿಜಯ್ ಕುಮಾರ್​ ನನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡು ಹತ್ಯೆ ಮಾಡಿದ್ದಾರೆ. ಬಳಿಕ ವಿಜಯ್ ಮೈಮೇಲಿದ್ದ ಚಿನ್ನದ ಸರ, ಉಂಗುರ ಹಾಗೂ ಹಣ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಲ್ಲದೇ ಒಂದು ಉಂಗುರ ತೆಗೆಯಲು ಬರದಿದ್ದಾಗ ಕೈ ಬೆರಳನ್ನೇ ಕಟ್ ಮಾಡಿಕೊಂಡು ಬಳಿಕ ಉಂಗುರ ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಸಾಂಬಾರ್ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಗಲಾಟೆ: ಪತ್ನಿ ಸಾವಿನಲ್ಲಿ ಅಂತ್ಯ, ಆಗಿದ್ದೇನು?

ಅರಸೀಕೆರೆ ನಗರದ ಸುಬ್ರಹ್ಮಣ್ಯ ನಗರ ಬಡಾವಣೆ ಯ ನಿವಾಸಿ ವಿಜಯ್ ಕುಮಾರ್(46) ಶಿವಮೊಗ್ಗ ಬೆಂಗಳೂರು ರಸ್ತೆಯಲ್ಲಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ಕಟ್ಟಡವೊಂದನ್ನ ನಿರ್ಮಾಣ ಮಾಡುತ್ತಿದರು. ವಿಕ್ರಂ ಎಂಬ ಬಿಹಾರ ಮೂಲದ ಕುಟುಂಬ ಎರಡು ತಿಂಗಳಿಂದ ನಿರ್ಮಾನ ಮಾಡಿಸುತ್ತಿದ್ದರು. ವಿಜಯ್ ಅವರ ಮನೆಯಲ್ಲೇ ವಾಸ ಮಾಡಿಕೊಂಡು ಕೆಲಸ ಮಾಡಿಕೊಂಡಿದ್ದರು. ವಾರದ ಹಿಂದೆ ಊರಿಗೆ ಹೋಗಿದ್ದ ವಿಕ್ರಂ ಪತ್ನಿ ಮಕ್ಕಳನ್ನು ಬಿಟ್ಟು ವಾಪಸ್ ಬರುವಾಗ ಸಚಿನ್ ಎಂಬ ಮತ್ತೋರ್ವ ನನ್ನು ಕರೆದುಕೊಂಡು ಬಂದಿದ್ದ. ವಾರದಿಂದ ಕೆಲಸ ಮಾಡಿಕೊಂಡಿದ್ಸವರು ರಾತ್ರಿ ಏಕಾಏಕಿ ಗುತ್ತಿಗೆದಾರ ವಿಜಯ್ ಅವರಿಗೆ ಕರೆ ಮಾಡಿದ್ದ ವಿಕ್ರಂ, ತನ್ನ ಮೇಲೆ ಸಚಿನ್ ಹಲ್ಲೆ ಮಾಡುತ್ತಿದ್ದಾನೆ ಬನ್ನಿ ಎಂದು ಹೇಳಿದ್ದಾನೆ.

ಇದನ್ನೂ ಓದಿ
Image
ಇನ್ಮುಂದೆ ಗುಟ್ಕಾ ಉಗುಳುವುದು, ಸಿಗರೇಟ್ ಸೇದಿದ್ರೆ 4 ಪಟ್ಟು ದಂಡ
Image
ಹಿಟ್ ಆ್ಯಂಡ್​ ರನ್​​ಗೆ ತಂದೆ-ಮಗಳು ಬಲಿ: ದೇವಸ್ಥಾನಕ್ಕೆ ಹೊರಟವರು ಮಸಣಕ್ಕೆ
Image
ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್:ಹಲವಡೆ ಲೋಕಾಯುಕ್ತ ದಾಳಿ
Image
ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ, ಅಧಿಕಾರಿಗಳ ವಿರುದ್ಧ ದೂರು

ವಿಕ್ರಂ ಮಾತು ನಂಬಿಕೊಂಡು ವಿಜಯ್ ಕುಮಾರ್, ಏನಾಗಿದೆ ಎಂದು ನೋಡಿ ಬರುವುದಾಗಿ ಕಟ್ಟಡ ಮಾಲೀಕ ಶ್ರೀನಿವಾಸ್​ ಗೆ ಮಾಹಿತಿ ನೀಡಿ ತೆರಳಿದ್ದಾರೆ. ಅಲ್ಲದೇ ಏನಾಗಿದೆ ಎನ್ನುವುದನ್ನು ಹೋಗಿ ಫೋನ್ ಮಾಡಿ ಹೇಳುತ್ತೇನೆಂದು ವಿಜಯ್​ ವಿಕ್ರಂ ಹೇಳಿದ್ದ ಸ್ಥಳಕ್ಕೆ ಹೋಗಿದ್ದಾರೆ. ಆದರೆ ಎಷ್ಟೊತ್ತಾದರೂ ವಿಜಯ್ ಕುಮಾರ್ ಕಡೆಯಿಂದ ಫೋನ್ ಬಾರದಿದ್ದಾಗ ಆತಂಕಗೊಂಡ ಶ್ರೀನಿವಾಸ್, ಕುಡಲೇ ಮನೆ ಬಳಿ ಹಾಕಿಸಿದ್ದ ತಮ್ಮ ಸಿಸಿ ಕ್ಯಾಮೆರಾವನ್ ಪರಿಶೀಲಿಸಿದಾಗ ವಿಕ್ರಂ ಹಾಗು ಸಚಿನ್ ಇಬ್ಬರು ವಿಜಯ್ ಕುಮಾರ್ ಬೈಕ್ ಏರಿ ಹೊರಟಿರೋದು ಕಂಡಿದೆ. ಇದರಿಂದ ಆತಂಕಗೊಂಡ ಶ್ರೀನಿವಾಸ್​ ಸ್ಥಳಕ್ಕೆ ಹೋಗಿ ನೋಡಿದಾಗ ವಿಜಯ್ ಕುಮಾರ್​​ ನನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಶ್ರೀನಿವಾಸ್ ಅರಸೀಕೆರೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರು ಜಗಳ ಮಾಡುವ ನಾಟಕ ಮಾಡಿದ ಬಿಹಾರ ಮೂಲದ ಕಾರ್ಮಿಕರು, ತಮ್ಮ ಮಾಲೀಕನ‌ ಮೇಲೆ ಅಟ್ಯಾಕ್ ಮಾಡಿದ್ದಾರೆ. ಅಲ್ಲದೇ ವಿಜಯ್ ಕುಮಾರ್ ಮೈ ಮೇಲೆ ಇದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿದ್ದಾರೆ. ಒಂದು ಬೆರಳಿನ ಉಂಗುರ ಬಿಚ್ಚಲಾಗದೆ ಬೆರಳನ್ನೇ ಕಟ್ ಮಾಡಿ ನಂತರ ಉಂಗುರ ಬಿಚ್ಚಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಕೊಲೆ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಹೇಗೆ ಹೆಣ ಎಸೆದು ಹೋದ ನೋಡಿ ಆಂಬ್ಯುಲೆನ್ಸ್​ ಚಾಲಕ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಮಗುವಿನ ಮೇಲೆ ನಾಯಿ ದಾಳಿ, ಹೀರೋನಂತೆ ಬಂದು ಕಾಪಾಡಿದ ತಂದೆ
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಜಿಪಂ ಕಚೇರಿ ಆವರಣದಲ್ಲಿ ನೇಣು ಬಿಗಿದುಕೊಂಡು ಗುತ್ತಿಗೆ ನೌಕರ ಸಾವಿಗೆ ಶರಣು
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಈ ಸಲ ಫ್ಲಾವರ್​ ಶೋ ಥೀಮ್
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
100 ಎಸೆತಗಳ ಪಂದ್ಯ: 99ನೇ ಎಸೆತದಲ್ಲಿ 1 ವಿಕೆಟ್​ನ ರೋಚಕ ಗೆಲುವು..!
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ಕಂದಕಕ್ಕೆ ಉರುಳಿದ ವಾಹನ,ಮೂವರು ಸಿಆರ್​​ಪಿಎಫ್​ ಸಿಬ್ಬಂದಿ ಸಾವು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್