AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟ್ ಆ್ಯಂಡ್​ ರನ್​ಗೆ ತಂದೆ-ಮಗಳು ಬಲಿ: ದೇವಸ್ಥಾನಕ್ಕೆ ಹೊರಟವರು ಮಸಣಕ್ಕೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ತಂದೆ, ಮಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಡಾಬಾ ಬಳಿ ಕೆಎಸ್ಆರ್​​ಟಿಸಿ ಬಸ್​ಗೆ ಕಾರು ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದಾರೆ.

ಹಿಟ್ ಆ್ಯಂಡ್​ ರನ್​ಗೆ ತಂದೆ-ಮಗಳು ಬಲಿ: ದೇವಸ್ಥಾನಕ್ಕೆ ಹೊರಟವರು ಮಸಣಕ್ಕೆ
ಹಿಟ್ ಆ್ಯಂಡ್​ ರನ್​​
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:May 31, 2025 | 10:48 AM

Share

ಬಾಗಲಕೋಟೆ, ಮೇ 31: ಹಿಟ್ ಆ್ಯಂಡ್​ ರನ್​​ಗೆ (Hit and run) ತಂದೆ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್​ ಬಳಿ ನಡೆದಿದೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬಸವರಾಜ ಬಂಡಿವಡ್ಡರ್(26) ಮತ್ತಿ ಹುಲಿಗೆಮ್ಮ(3) ಮೃತಪಟ್ಟಿದ್ದಾರೆ. ತಂದೆ, ಮಗಳು ಹಳಗೇರಿ ಆಂಜನೇಯ ದೇವಸ್ಥಾನಕ್ಕೆ ಹೊರಟಿದ್ದಾಗ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬಾದಾಮಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

KSRTC ಬಸ್​ಗೆ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

ಕೆಎಸ್​ಆರ್​​ಟಿಸಿ ಬಸ್​ಗೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೊಣಚಿನಕುಪ್ಪೆ ಡಾಬಾ ಬಳಿ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಓಬಳಾರೆಡ್ಡಿ(35) ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ: ಅಧಿಕಾರಿಗಳೇ ಹೊಣೆ, ಠಾಣೆಗೆ ದೂರು

ಇದನ್ನೂ ಓದಿ
Image
ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್:ಹಲವಡೆ ಲೋಕಾಯುಕ್ತ ದಾಳಿ
Image
ಗುಡ್ಡಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ, ಅಧಿಕಾರಿಗಳ ವಿರುದ್ಧ ದೂರು
Image
ರಾಜ್ಯದಲ್ಲಿ 125 ವರ್ಷಗಳಲ್ಲೇ ಮೇ ತಿಂಗಳಲ್ಲಿ ಅತ್ಯಧಿಕ ಮಳೆ: 67 ಜನ ಸಾವು
Image
ಗ್ರೇಟರ್ ಬೆಂಗಳೂರಿನ ಜನರಿಗೆ ಬೋಟ್ ಭಾಗ್ಯ: ಬಿಬಿಎಂಪಿಯಿಂದ ಹೊಸ ಕೊಡುಗೆ

ಕಾರಿನಲ್ಲಿದ್ದ ಸುನೀಲ್ ಮತ್ತು ದಿವ್ಯಾಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮಾರಿಯಮ್ಮನ ಕಲ್ಲಿನ ಮೂರ್ತಿ ಕಳ್ಳತನ ಮಾಡಿ‌ ಎಸೆದಿದ್ದ ಆರೋಪಿ ಬಂಧನ

ಚಿಕ್ಕಮಗಳೂರಿನಲ್ಲಿ ಬೇವಿನ ಮರದಡಿ ಇರಿಸಿದ್ದ ಮಾರಿಯಮ್ಮ ದೇವಿಯ ಕಲ್ಲಿನ ಮೂರ್ತಿ ಕಳ್ಳತನ ಮಾಡಿ ಎಸೆದಿದ್ದ ಕಿಡಿಗೇಡಿಯನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಶಾಂತಿನಗರದಲ್ಲಿ ಘಟನೆ ನಡೆದಿತ್ತು. ಅನೀಸ್ ಬಂಧಿತ ಆರೋಪಿ. ಎಫ್​ಐಆರ್​ ಕೂಡ ದಾಖಲಾಗಿತ್ತು.

ಇದನ್ನೂ ಓದಿ: ಮಕ್ಕಳ ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ

ವರ್ಷದಲ್ಲಿ ಒಮ್ಮೆ ಮಾತ್ರ ದೇವಾಲಯದಿಂದ ಮೂರ್ತಿ ಹೊರ ತೆಗೆದು ಬೇವಿನ ಮರದಡಿ ನಿವಾಸಿಗಳು ಇರಿಸುತ್ತಿದ್ದರು. ಇದಕ್ಕೆ ಅನೀಸ್ ವಿರೋಧ ವ್ಯಕ್ತಪಡಿಸಿದ್ದ. ಬಡಾವಣೆಯಲ್ಲಿ ಗಲಾಟೆ ಎಬ್ಬಿಸಲು ಸಂಚು ಮಾಡಿ ರಾತ್ರೋರಾತ್ರಿ ಕಲ್ಲಿನ ಮೂರ್ತಿ ಕದ್ದು ಎಸ್ಕೇಪ್ ಆಗಿದ್ದ. ಎಫ್​ಐಆರ್​​ ದಾಖಲಿಸಿ ಪೊಲೀಸರು ಅನೀಸ್​ನನ್ನು ಬಂಧಿಸಿದ್ದು, ತನಿಖೆ ವೇಳೆ ತಾನೇ ಕದ್ದು ಮೂರ್ತಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:46 am, Sat, 31 May 25

Follow Us
ತಾರೆಯರ ಪ್ರೇಮೋತ್ಸವ ಮಾಡಲು ಬರ್ತಿದೆ ಹೊಸ ರಿಯಾಲಿಟಿ ಶೋ
ತಾರೆಯರ ಪ್ರೇಮೋತ್ಸವ ಮಾಡಲು ಬರ್ತಿದೆ ಹೊಸ ರಿಯಾಲಿಟಿ ಶೋ
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಸ್ತ್ರೀಯರು ಶಾಸ್ತ್ರಾನುಸಾರ ಸನ್ಯಾಸಿನಿ ಆಗಬಹುದಾ?
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ಇಂದು ಈ ರಾಶಿಯವರು ಅಪರಿಚಿತರೊಂದಿಗೆ ವ್ಯವಹಾರಗಳಲ್ಲಿ ಜಾಗರೂಕರಾಗಿರಿ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ನಿಧಿ ಆಸೆಗಾಗಿ ಅಪಾರ್ಟ್​​​ಮೆಂಟ್​​ನ ಬೇಸ್ಮೆಂಟ್​​ ಅಗೆದ ಬಿಲ್ಡರ್​: ವಿಡಿಯೋ
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು