ವಿದೇಶಿ ಬಂಡವಾಳ ಹೂಡಿಕೆ: 2ನೇ ಸ್ಥಾನಕ್ಕೇರಿದ ಅಮೆರಿಕಾ! ತಂತ್ರಜ್ಞಾನ ಕಂಪೆನಿಗಳಿಂದಲೇ ಹೆಚ್ಚು ಹೂಡಿಕೆ

| Updated By: ganapathi bhat

Updated on: Apr 06, 2022 | 11:28 PM

ಭಾರತದ ಮೇಲೆ 7.12 ಬಿಲಿಯನ್ US ಡಾಲರ್ ಹೂಡಿಕೆ ಮಾಡಿರುವ ಅಮೆರಿಕಾ, ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮಾರಿಷಸ್ ದೇಶವನ್ನು ಹಿಂದಿಕ್ಕಿದೆ.

ವಿದೇಶಿ ಬಂಡವಾಳ ಹೂಡಿಕೆ: 2ನೇ ಸ್ಥಾನಕ್ಕೇರಿದ ಅಮೆರಿಕಾ! ತಂತ್ರಜ್ಞಾನ ಕಂಪೆನಿಗಳಿಂದಲೇ ಹೆಚ್ಚು ಹೂಡಿಕೆ
ಸಾಂದರ್ಭಿಕ ಚಿತ್ರ
Follow us on

ದೆಹಲಿ: ಭಾರತದಲ್ಲಿ ಬಂಡವಾಳ ಹೂಡುವ ದೇಶಗಳ ಪಟ್ಟಿಯಲ್ಲಿ ಅಮೆರಿಕಾವು ಎರಡನೇ ಸ್ಥಾನಕ್ಕೆ ಏರಿದೆ. ಈ ಮೂಲಕ, ಈ ವರೆಗೆ ಭಾರತದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಮಾರಿಷಸ್ ದೇಶವನ್ನು ಹಿಂದಿಕ್ಕಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಒಟ್ಟು 7.12 ಬಿಲಿಯನ್ USD ಬಂಡವಾಳ ಹೂಡಿಕೆಯಾಗಿದೆ
ಈ ವರ್ಷ, 7.12 ಬಿಲಿಯನ್ USD ನಷ್ಟು ಮೊತ್ತವನ್ನು ಭಾರತವು ಅಮೆರಿಕಾದಿಂದ ವಿದೇಶಿ ಬಂಡವಾಳ ಹೂಡಿಕೆಯಾಗಿ ಪಡೆದುಕೊಂಡಿದೆ. 2020-21ರ ಏಪ್ರಿಲ್​ನಿಂದ ಸಪ್ಟೆಂಬರ್ ವರೆಗಿನ ಅವಧಿಯಲ್ಲಿ ಈ ಮೊತ್ತದ ಹೂಡಿಕೆಗೆ ಭಾರತ ಅಮೆರಿಕಾವನ್ನು ಆಕರ್ಷಿಸಿದೆ.

ನಾಲ್ಕನೇ ಸ್ಥಾನಕ್ಕೆ ಕುಸಿದ ಮಾರಿಷಸ್
ಈ ಮಾಹಿತಿ ಹಂಚಿಕೊಂಡಿರುವ DPIIT, ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಮಾರಿಷಸ್, 2 ಬಿಲಿಯನ್ USD ಹೂಡಿಕೆಯೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಎಂದು ತಿಳಿಸಿದೆ. ಕಳೆದ ಬಾರಿ, ಈ ಅವಧಿಯಲ್ಲಿ, ಅಮೆರಿಕಾವು ನಾಲ್ಕನೇ ಸ್ಥಾನದಲ್ಲಿ ಮತ್ತು ಮಾರಿಷಸ್ ಎರಡನೇ ಸ್ಥಾನದಲ್ಲಿತ್ತು. ಈಗ ಅವುಗಳು ತಮ್ಮ ಸ್ಥಾನವನ್ನು ಬದಲಿಸಿಕೊಂಡಿವೆ.

ಉಳಿದ ದೇಶಗಳು ಯಾವುವು?
ಭಾರತದಲ್ಲಿ 8.30 ಬಿಲಿಯನ್ USD ಬಂಡವಾಳ ಹೂಡಿಕೆ ಮಾಡಿರುವ ಸಿಂಗಾಪುರವು ಮೊದಲ ಸ್ಥಾನದಲ್ಲಿದೆ. ಉಳಿದಂತೆ, ಕೇಮನ್ 2.1 ಬಿಲಿಯನ್ USD, ನೆದರ್​ಲ್ಯಾಂಡ್ 1.5 ಬಿಲಿಯನ್ USD, ಯುನೈಟೆಡ್ ಕಿಂಗ್ಡಮ್ 1.35 ಬಿಲಿಯನ್ USD, ಫ್ರಾನ್ಸ್ 1.13 ಬಿಲಿಯನ್ USD, ಜಪಾನ್ 653 ಮಿಲಿಯನ್ USD, ಜರ್ಮನಿ 202 ಮಿಲಿಯನ್ USD ಹಾಗೂ ಸಿಪ್ರಸ್ 48 ಮಿಲಿಯನ್ USD ಬಂಡವಾಳ ಹೂಡಿದ್ದು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಗಟ್ಟಿಯಾಗಲಿದೆ ಭಾರತ-ಅಮೆರಿಕಾ ಆರ್ಥಿಕ ಸಂಬಂಧ
ಭಾರತದಲ್ಲಿ ಅಮೆರಿಕಾದ ಬಂಡವಾಳ ಹೂಡಿಕೆ ಹೆಚ್ಚಿರುವುದು, ಉಭಯ ದೇಶಗಳ ಆರ್ಥಿಕ ಸಂಬಂಧ ಗಟ್ಟಿಯಾಗುವ ಸೂಚನೆ ನೀಡಿದೆ. 2019-20ರ ಅವಧಿಯಲ್ಲೂ ಭಾರತದ ಟಾಪ್ ಟ್ರೇಡಿಂಗ್ ಪಾರ್ಟ್​ನರ್ ಆಗಿದ್ದ ಅಮೆರಿಕಾವು ಈ ಬಾರಿ ಮತ್ತಷ್ಟು ಮೊತ್ತದ ಬಂಡವಾಳ ಹೂಡಿಕೆ ನಡೆಸಿದೆ.

ಅಮೆರಿಕಾದ ತಂತ್ರಜ್ಞಾನ ಕಂಪೆನಿಗಳಿಂದ ಹೂಡಿಕೆ ಹೆಚ್ಚು
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಎನ್​ಯು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಬಿಸ್ವಜಿತ್ ಧರ್, ಭಾರತದಲ್ಲಿ ಅಮೆರಿಕಾದ ತಂತ್ರಜ್ಞಾನ ಕಂಪೆನಿಗಳ ಹೂಡಿಕೆ ಹೆಚ್ಚಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತದೊಳಕ್ಕೆ ಒಟ್ಟು 500.12 ಬಿಲಿಯನ್ USD ವಿದೇಶಿ ಬಂಡವಾಳ ಹೂಡಿಕೆಯಾಗಿದೆ
ಈ ಅವಧಿಯಲ್ಲಿ ಭಾರತವು ಒಟ್ಟು 500.12 ಬಿಲಿಯನ್ USD ಮೊತ್ತವನ್ನು ವಿದೇಶಿ ಬಂಡವಾಳ ಹೂಡಿಕೆಯಾಗಿ ಪಡೆದಿದ್ದು, ಹೂಡಿಕೆ ದರದಲ್ಲಿ ಶೇ. 15ರಷ್ಟು ಏರಿಕೆ ಕಂಡಿದೆ.

ಇದನ್ನೂ ಓದಿ
ಕೊರೊನಾ ಕಾಲದಲ್ಲೂ ಕರ್ನಾಟಕವೇ ನಂ.1 :ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಗಣನೀಯ ಏರಿಕೆ

Published On - 11:43 am, Mon, 30 November 20