ಉತ್ತರ ಪ್ರದೇಶ: ರೈಲ್ವೆ ಹಳಿ ಮೇಲೆ ಕಟ್ಟಿಗೆಗಳನ್ನು ಎಸೆದು ರೈಲು ಹಳಿ ತಪ್ಪಿಸುವ ಯತ್ನ

ರೈಲ್ವೆ ಹಳಿ ಮೇಲೆ ಮರದ ದಿಮ್ಮಿಗಳ್ನು ಎಸೆದು ರೈಲು ಹಳಿ(Railway Track) ತಪ್ಪಿಸುವ ಯತ್ನ ಮಾಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್​ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯಲ್ಲಿ ಅರ್ಥಿಂಗ್ ವೈರ್‌ನಲ್ಲಿ ಸಿಲುಕಿಕೊಂಡಿದ್ದ ಮರದ ದಿಮ್ಮಿಗಳನ್ನು ಇರಿಸಿ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಕಠ್ಗೋಡಮ್ ಎಕ್ಸ್‌ಪ್ರೆಸ್ ಹಳಿ ತಪ್ಪಿಸಲು ದುಷ್ಕರ್ಮಿಗಳು ಸಂಚು ಹೂಡಿದ್ದರು. ಆದರೆ ಇದು ರೈಲ್ವೆ ಲೋಕೋ ಪೈಲಟ್ ಗಮನಕ್ಕೆ ಬಂದಿದ್ದು, ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಹೀಗಾಗಿ ಸಂಭವಿಸಬೇಕಿದ್ದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.

ಉತ್ತರ ಪ್ರದೇಶ: ರೈಲ್ವೆ ಹಳಿ ಮೇಲೆ ಕಟ್ಟಿಗೆಗಳನ್ನು ಎಸೆದು ರೈಲು ಹಳಿ ತಪ್ಪಿಸುವ ಯತ್ನ
ರೈಲ್ವೆ ಹಳಿ

Updated on: May 20, 2025 | 10:10 AM

ಉತ್ತರ ಪ್ರದೇಶ. ಮೇ 20: ರೈಲ್ವೆ ಹಳಿ ಮೇಲೆ ಮರದ ಕಟ್ಟಿಗೆಗಳನ್ನು ಎಸೆದು ರೈಲು ಹಳಿ(Railway Track) ತಪ್ಪಿಸುವ ಯತ್ನ ಮಾಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್​ ಜಿಲ್ಲೆಯಲ್ಲಿ ನಡೆದಿದೆ. ರೈಲ್ವೆ ಹಳಿಯಲ್ಲಿ ಅರ್ಥಿಂಗ್ ವೈರ್‌ನಲ್ಲಿ ಸಿಲುಕಿಕೊಂಡಿದ್ದ ಮರದ ದಿಮ್ಮಿ, ಕಟ್ಟಿಗೆಗಳನ್ನು ಇರಿಸಿ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಕಠ್ಗೋಡಮ್ ಎಕ್ಸ್‌ಪ್ರೆಸ್ ಹಳಿ ತಪ್ಪಿಸಲು ದುಷ್ಕರ್ಮಿಗಳು ಸಂಚು ಹೂಡಿದ್ದರು.

ಆದರೆ ಇದು ರೈಲ್ವೆ ಲೋಕೋ ಪೈಲಟ್ ಗಮನಕ್ಕೆ ಬಂದಿದ್ದು, ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ. ಹೀಗಾಗಿ ಸಂಭವಿಸಬೇಕಿದ್ದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ. ಹರ್ದೋಯ್-ಲಕ್ನೋ ರೈಲು ಮಾರ್ಗದಲ್ಲಿ ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಸೋಮವಾರ ಸಂಜೆ 5.45 ರ ಸುಮಾರಿಗೆ 20504 ನವದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ಲಕ್ನೋ ಕಡೆಗೆ ಹೋಗುತ್ತಿದ್ದಾಗ ಮೊದಲ ಪ್ರಯತ್ನ ಮಾಡಲಾಯಿತು. ದುಷ್ಕರ್ಮಿಗಳು ಮರದ ತುಂಡನ್ನು ಕಬ್ಬಿಣದ ಅರ್ಥಿಂಗ್ ತಂತಿಗೆ ಬಿಗಿಯಾಗಿ ಜೋಡಿಸಿ, ಹಳಿತಪ್ಪಿಸಲು ಅದನ್ನು ಕೆಳ ಹಳಿಯಲ್ಲಿ ಇಟ್ಟಿದ್ದರು.

ಆದರೆ, ರಾಜಧಾನಿ ಎಕ್ಸ್‌ಪ್ರೆಸ್‌ನ ಚಾಲಕ ಹಳಿಯಲ್ಲಿ ಅಡಚಣೆಯನ್ನು ಗಮನಿಸಿ ತುರ್ತು ಬ್ರೇಕ್‌ಗಳನ್ನು ಹಾಕಿದ್ದರಿಂದ ರೈಲು ನಿಂತಿತು. ನಂತರ ಮರದ ಬ್ಲಾಕ್ ಮತ್ತು ಅರ್ಥಿಂಗ್ ವೈರ್ ತೆಗೆದು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೈಲು ಸುಮಾರು ಹತ್ತು ನಿಮಿಷಗಳ ಕಾಲ ವಿಳಂಬವಾಗಿ ಪ್ರಯಾಣ ಪುನರಾರಂಭವಾಯಿತು.

ಮತ್ತಷ್ಟು ಓದಿ: Viral : ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋದ ಯುವಕ, ಮುಂದೇನಾಯ್ತು ನೋಡಿ

ರಾಜಧಾನಿ ಎಕ್ಸ್‌ಪ್ರೆಸ್ ಹಾದುಹೋದ ಕೂಡಲೇ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ 15044 ಕಠ್ಗೋಡಮ್-ಲಕ್ನೋ ಎಕ್ಸ್‌ಪ್ರೆಸ್ ಅನ್ನು ಹಳಿತಪ್ಪಿಸಲು ಅದೇ ವಿಧಾನವನ್ನು ಬಳಸಲಾಯಿತು. ಈ ರೈಲಿನ ಚಾಲಕ ಕೂಡ ಅಡಚಣೆಯನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಿದನು. ಹಳಿಯ ಮೇಲೆ ಇರಿಸಲಾಗಿದ್ದ ವಸ್ತುಗಳನ್ನು ತೆಗೆದು ಲಕ್ನೋ ಕಡೆಗೆ ಮುಂದುವರೆದಿದ್ದರು.

ಎರಡೂ ರೈಲು ಚಾಲಕರು ದಲೇಲ್‌ನಗರದ ಸ್ಟೇಷನ್ ಮಾಸ್ಟರ್‌ಗೆ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಅಧಿಕಾರಿಗಳಿಂದ ತ್ವರಿತ ಪ್ರತಿಕ್ರಿಯೆ ದೊರೆಯಿತು. ರೈಲ್ವೆ ಇಲಾಖೆಯ ಅಧಿಕಾರಿಗಳು, ಸರ್ಕಾರಿ ರೈಲ್ವೆ ಪೊಲೀಸ್ (GRP), ರೈಲ್ವೆ ರಕ್ಷಣಾ ಪಡೆ (RPF) ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು.

ಈ ಘಟನೆಯು ರೈಲ್ವೆ ಇಲಾಖೆಯಲ್ಲಿ ಭೀತಿಯನ್ನು ಹುಟ್ಟುಹಾಕಿತು, ಆದರೂ ಅಧಿಕಾರಿಗಳು ಇಲ್ಲಿಯವರೆಗೆ ಮಾಧ್ಯಮಗಳಿಗೆ ಯಾವುದೇ ಅಧಿಕೃತ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಿದ್ದಾರೆ. ಈ ವಿಷಯವು ಪ್ರಸ್ತುತ ತನಿಖೆಯಲ್ಲಿದೆ ಮತ್ತು ಕೃತ್ಯಕ್ಕೆ ಕಾರಣರಾದವರನ್ನು ಗುರುತಿಸಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ. ಈ ಮೊದಲು ಉತ್ತರ ಪ್ರದೇಶದಲ್ಲಿ ಇಂತಹ ಹಲವು ಘಟನೆಗಳು ನಡೆದಿದ್ದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:07 am, Tue, 20 May 25