AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral : ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋದ ಯುವಕ, ಮುಂದೇನಾಯ್ತು ನೋಡಿ

ಇತ್ತೀಚೆಗಿನ ದಿನಗಳಲ್ಲಿ ರೀಲ್ಸ್ ಹುಚ್ಚು ಎಷ್ಟಾಗಿದೆಯೆಂದರೆ ತಮ್ಮ ಪ್ರಾಣವನ್ನು ಪಣಕ್ಕಿಡಲು ಸಿದ್ಧವಿಡಲು ತಯಾರಿದ್ದಾರೆ. ಹೌದು, ರೀಲ್ಸ್ ಮಾಡಿ ಹುಚ್ಚಾಟ ಮೆರೆಯುವ ಯುವಕ ಯುವತಿಯರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ವಿಡಿಯೋದಲ್ಲಿ ಯುವಕನೊಬ್ಬನು ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋಗಿದ್ದಾನೆ. ಈ ಅಪಾಯಕಾರಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.

Viral : ರೈಲ್ವೆ ಹಳಿ ಮೇಲೆ ಮಲಗಿ ರೀಲ್ಸ್ ಮಾಡಲು ಹೋದ ಯುವಕ, ಮುಂದೇನಾಯ್ತು ನೋಡಿ
ವೈರಲ್​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 09, 2025 | 10:06 AM

Share

ಉತ್ತರ ಪ್ರದೇಶ ಏಪ್ರಿಲ್ 08 : ಈಗಿನ ಯುವಕ ಯುವತಿಯರಲ್ಲಿ ರೀಲ್ಸ್ (reels) ಕ್ರೇಜ್ ಹೆಚ್ಚಾಗಿದೆ. ಸೋಷಿಯಲ್‌ ಮೀಡಿಯಾ (social media) ದಲ್ಲಿ ಫೇಮಸ್‌ ಆಗುವ ಸಲುವಾಗಿ ರೀಲ್ಸ್‌ ಮಾಡಿ ನಾನಾ ರೀತಿಯ ಸಾಹಸಗಳನ್ನು ಮಾಡುತ್ತಿರುತ್ತಾರೆ. ಇದೀಗ ಇಲ್ಲೊಬ್ಬ ಯುವಕನು ರೀಲ್ಸ್ ಕ್ರೇಜ್ ಗೆ ಬಿದ್ದು ಎದುರಿಗೆ ರೈಲು ಬರುತ್ತಿದ್ದರೂ ರೈಲ್ವೆ ಹಳಿ (railway track) ಮೇಲೆ ಮಲಗಿ ರೀಲ್ಸ್ ಮಾಡಿದ್ದು ಪ್ರಾಣಾಪಯದಿಂದ ಪಾರಾಗಿದ್ದಾನೆ. ಈ ಘಟನೆಯೂ ಉತ್ತರ ಪ್ರದೇಶ (uttar pradesh) ದ ಉನ್ನಾವೋ ಜಿಲ್ಲೆ (unnao district) ಯ ಕುಸುಂಬಿ ರೈಲ್ವೆ ನಿಲ್ದಾಣ (kusumbi railway station) ದಲ್ಲಿ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಏಪ್ರಿಲ್ 7 ರಂದು sachin gupta ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಯುವಕನನ್ನು ರಂಜೀತ್ ಚೌರಾಸಿಯಾ ಎಂದು ಗುರುತಿಸಲಾಗಿದೆ. ಹೌದು, ಯುವಕನೊಬ್ಬನು ರೈಲ್ವೆ ಹಳಿ ಮೇಲೆ ಮಲಗಿರುವುರೊಂದಿಗೆ ವಿಡಿಯೋ ಆರಂಭವಾಗುತ್ತದೆ. ಈ ವೇಳೆಯಲ್ಲಿ ರೀಲ್ಸ್ ಮಾಡಲು ಮೊಬೈಲ್ ಕ್ಯಾಮೆರಾ ಆನ್ ಮಾಡಿ ಎದುರಿಗೆ ಹಿಡಿದಿದ್ದಾನೆ. ಆದರೆ ಮುಂಭಾಗದಲ್ಲಿ ರೈಲು ಬರುತ್ತಿದ್ದಂತೆ ಸ್ವಲ್ಪವು ಅಲುಗಾಡದೇ ಹಾಗೆಯೇ ಮಲಗಿದ್ದಾನೆ. ರೈಲು ಹೋದ ಬಳಿಕ ಹಳಿಗಳ ಮೇಲಿಂದ ಎದ್ದು ಹೋಗಿರುವುದನ್ನು ಕಾಣಬಹುದು.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ರೀಲ್ಸ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗುತ್ತಿದ್ದಂತೆ ರೈಲ್ವೆ ಹಳಿಗಳಲ್ಲಿ ಸುರಕ್ಷತೆಗೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ರೈಲ್ವೆ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಈ ವಿಡಿಯೋವು ಈಗಾಗಲೇ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಎಸಿ-ಕೂಲರ್ ಅಗತ್ಯವಿಲ್ಲ, ಕೋಣೆಯನ್ನು ತಂಪಾಗಿಡಲು ಈ ದೇಸಿ ಐಡಿಯಾ ಬೆಸ್ಟ್

ಬಳಕೆದಾರರೊಬ್ಬರು, ‘ರೀಲ್ಸ್ ಹುಚ್ಚಿಗೆ ಈ ರೀತಿ ಅಪಾಯಕಾರಿ ವಿಡಿಯೋ ಚಿತ್ರೀಕರಿಸಿ ಜೀವ ಕಳೆದುಕೊಳ್ಳಬೇಡಿ’ ಎಂದಿದ್ದಾರೆ. ಮತ್ತೊಬ್ಬರು, ‘ಹಾಲಿವುಡ್ ಚಿತ್ರ ನಿರ್ಮಾಪಕರು ಈ ರೀತಿ ಮಾಡಿದರೆ ಅದು ಕಲೆ. ಭೌತಶಾಸ್ತ್ರ ಪ್ರಾಧ್ಯಾಪಕರು ಮಾಡಿದರೆ ಅದು ಉತ್ತಮ ಶಿಕ್ಷಕ, ಆದರೆ ಬಡ ಬಿಹಾರಿ ಯುವಕ ಈ ರೀತಿ ಮಾಡಿದ್ರೆ ಆತನಿಗೆ ಜೈಲೇ ಗತಿ’ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಫೇಮಸ್ ಆಗುವ ಹುಚ್ಚು ಈ ರೀತಿ ಮಾಡಿಸುತ್ತದೆ’ ಎಂದಿದ್ದಾರೆ. ಇನ್ನು ಕೆಲವರು ‘ಅಪಾಯಕಾರಿ ರೀಲ್ಸ್ ಮಾಡುವವರ ವಿರುದ್ಧ ಪೊಲೀಸರೇ ಕ್ರಮ ಕೈಗೊಳ್ಳಿ’ ಎಂದು ಪ್ರತಿಕ್ರಿಯಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ