AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಎಸಿ-ಕೂಲರ್ ಅಗತ್ಯವಿಲ್ಲ, ಕೋಣೆಯನ್ನು ತಂಪಾಗಿಡಲು ಈ ದೇಸಿ ಐಡಿಯಾ ಬೆಸ್ಟ್

ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಹೀಗಾಗಿ ಜುಗಾಡ್ ಐಡಿಯಾಗಳಿಗೆ ಸಂಬಂಧಿಸಿದ ವಿಡಿಯೋಗಳು ಆಗಾಗ ಗಮನ ಸೆಳೆಯುತ್ತಿರುತ್ತದೆ. ಇದರಲ್ಲಿ ಕೆಲವರ ಬುದ್ಧಿವಂತಿಕೆ ನೋಡಿ ಅಚ್ಚರಿ ಎನಿಸಿದರೆ, ಇನ್ನು ಕೆಲವೊಮ್ಮೆ ಈ ರೀತಿ ಯೋಚಿಸುವ ಜನರು ಇರ್ತಾರಾ ಎಂದೆನಿಸುವುದು ಸಹಜ. ಇದೀಗ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬಿಸಿಲಿನ ಝಳಕ್ಕೆ ನೈಸರ್ಗಿಕ ಎಸಿಯನ್ನು ಅಳವಡಿಸಿಕೊಂಡಿದ್ದು, ಈ ಐಡಿಯಾವು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Viral: ಎಸಿ-ಕೂಲರ್ ಅಗತ್ಯವಿಲ್ಲ, ಕೋಣೆಯನ್ನು ತಂಪಾಗಿಡಲು ಈ ದೇಸಿ ಐಡಿಯಾ ಬೆಸ್ಟ್
ವೈರಲ್​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 08, 2025 | 6:31 PM

Share

ಬೇಸಿಗೆ (summer) ಆರಂಭವಾಗಿತೆಂದರೆ ಫ್ಯಾನ್ (fans) ಬೇಕೆ ಬೇಕು. ಫ್ಯಾನ್ ಇಲ್ಲದೇ ಹೋದರೆ ಒಂದು ನಿಮಿಷ ಕೂಡ ಮನೆಯೊಳಗೆ ಕೂರಲು ಸಾಧ್ಯವಿಲ್ಲ. ಕೆಲವರಂತೂ ಈ ಸೆಕೆ ಯಿಂದ ಮುಕ್ತಿ ಹೊಂದಲು ದಿನದ 24 ಗಂಟೆಯೂ ಫ್ಯಾನ್ ಆನ್ ಮಾಡಿಕೊಂಡೆ ಇರುತ್ತಾರೆ. ಆರ್ಥಿಕವಾಗಿ ಸ್ವಲ್ಪ ಸದೃಢರಾಗಿರುವವರು ಮನೆಗೆ ಎಸಿ ಕೂಲರ್ (ac cooler) ಹಾಕಿ ಅಳವಡಿಸಿಕೊಳ್ಳುತ್ತಾರೆ. ಆದರೆ ಪುಣೆಯ ವ್ಯಕ್ತಿಯೊಬ್ಬರು ತಮ್ಮ ಮನೆಗೆ ದೇಸಿ ಉಪಾಯ (desi idea) ಮಾಡಿ ನೈಸರ್ಗಿಕವಾಗಿ ಎಸಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ವಿಡಿಯೋದಲ್ಲಿ ತಿಳಿಸಿದ್ದಾರೆ. ಒಂದು ರೂಪಾಯಿ ಖರ್ಚಿಲ್ಲದೇ ಮನೆಯನ್ನು ಕೂಲ್ ಆಗಿರುವಂತೆ ಮಾಡುವ ಈ ವ್ಯಕ್ತಿ ಬುದ್ಧಿವಂತಿಕೆಗೆ ಸೋಶಿಯಲ್ ಮೀಡಿಯಾ (social media) ದಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

Spambyakshat ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬರು, ಕಬ್ಬಿಣದ ಜಾಲರಿಯ ಕಿಟಕಿಯ ಹೊರಭಾಗದಲ್ಲಿ ಬೆಡ್ ಶೀಟ್ ಇರಿಸಿದ್ದಾರೆ. ನಂತರದಲ್ಲಿ ಕೋಣೆಯ ಒಳಗಿನಿಂದ ಸ್ಪ್ರೇ ಬಾಟಲಿಯ ಸಹಾಯದಿಂದ ಬೆಡ್ ಶೀಟ್ ಮೇಲೆ ನೀರನ್ನು ಸಿಂಪಡಿಸುವುದನ್ನು ಗಮನಿಸಬಹುದು. ಒದ್ದೆಯಾದ ಬೆಡ್ ಶೀಟ್ ಮೂಲಕ ಗಾಳಿಯು ಕೋಣೆಯೊಳಗೆ ಪ್ರವೇಶಿಸಿ ಕೋಣೆಯೂ ತಂಪಾಗುತ್ತದೆ. ಈ ಐಡಿಯಾವನ್ನು ರಾಜಸ್ಥಾನಿ ಶೈಲಿಯ ಜುಗಾಡ್ ಎನ್ನುವುದನ್ನು ನೋಡಬಹುದು.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಈ ವಿಡಿಯೋವು ಹದಿನೇಳು ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ನಾನು 2004 ರಲ್ಲಿ ಪುಣೆಯಲ್ಲಿ ವಾಸವಾಗಿದ್ದಾಗ, ಬೇಸಿಗೆಯೂ ಸ್ವಾಭಾವಿಕವಾಗಿ ತಂಪಾಗಿರುತ್ತಿತ್ತು. ಹೀಗಾಗಿ ತನ್ನ ಸುತ್ತಮುತ್ತಲಿನ ಪರಿಸರವನ್ನು ತಂಪಾಗಿರುವಂತೆ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಈಗ ಮಾಲಿನ್ಯದಿಂದ ನಗರವು ಸಂಪೂರ್ಣವಾಗಿ ಹಾಳಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ಗಮನ ಸೆಳೆದ ವಿಶಿಷ್ಟ ಮೆನು ಕಾರ್ಡ್, ರುಚಿ ಸವಿಯುವ ಭಕ್ಷ್ಯಗಳ ಕ್ಯಾಲೋರಿ ಉಲ್ಲೇಖ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಮತ್ತೊಬ್ಬ ಬಳಕೆದಾರರು, ‘ಪ್ರತಿಯೊಂದು ಅಭ್ಯಾಸವು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಕೋಣೆ ತಂಪಾಗಿರಬೇಕೆಂದು ನೀವು ಬಯಸಿದರೆ ಖುಸ್ ಮ್ಯಾಟ್ ಖರೀದಿಸಿ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ